MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈಗ ಮದುವೆಯಾಗುತ್ತಿಲ್ಲ, ಬೇರೆ ಮದುವೆಯಾಗಿದ್ದಾನೆ ಎಂದು ದೂರು ದಾಖಲಿಸುವ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ. 

2 Min read
Author : Chethan Kumar
Published : Feb 16 2026, 07:34 PM IST
Share this Photo Gallery
  • FB
  • TW
  • Linkdin
  • Whatsapp
16
ಸುಪ್ರೀಂ ಕೋರ್ಟ್ ಎಚ್ಚರಿಕೆ
Image Credit : stockPhoto

ಸುಪ್ರೀಂ ಕೋರ್ಟ್ ಎಚ್ಚರಿಕೆ

ದೇಶದಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ವ್ಯಾಪಕವಾಗಿ ಹರಡಿದೆ. ಇನ್ನು ಪ್ರೀತಿ, ಸಂಬಂಧ, ಡೇಟಿಂಗ್ ಸರಿದಂತೆ ಹಲವು ಆಯಾಮಗಳಲ್ಲಿ ರಿಲೇಶನ್‌ಶಿಪ್ ಗಾಢವಾಗುತ್ತಿದೆ. ಆದರೆ ಮದುವೆ, ವೈವಾಹಿಕ ಜೀವನ ಎಂದು ಬಂದಾಗ ಹಲವರು ನನಗೆ ಆತ ಅಥವಾ ಆಕೆ ಮೋಸ ಮಾಡಿದಳು, ಮದುವೆಯಾಗುತ್ತೇನೆ ಎಂದು ಭರವಸೆಯಲ್ಲಿ ದೈಹಿಕ ಸಂಪರ್ಕ ಬಳಿಕ ಮೋಸ, ಅತ್ಯಾ**ರ ಆರೋಪ, ದೂರು ನೀಡಿ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದು ಹೊಸದೇನಲ್ಲ. ಇದೀಗ ಈ ರೀತಿ ಅರ್ಜಿ ಹಿಡಿದು ಕೋರ್ಟ್ ಮೆಟ್ಟಿಲೇರುವ ಮಂದಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

26
ಮ್ಯಾಟ್ರಿಮೋನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಅಂಶ ಉಲ್ಲೇಖ
Image Credit : Gemini AI

ಮ್ಯಾಟ್ರಿಮೋನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಅಂಶ ಉಲ್ಲೇಖ

ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಆತನಿಗೆ ಮೊದಲೇ ಮದುವೆಯಾಗಿತ್ತು ಅನ್ನೋದು ಗೊತ್ತಾಗಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ, ಉಜ್ವಲ್ ಭಯಾನ್ ಅವರಿದ್ದ ಪೀಠ ಕೆಲ ವಿಚಾರಗಳನ್ನು ಉಲ್ಲೇಖಿಸಿದೆ. ಈ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನೀಡಿದ ಎಚ್ಚರಿಕೆ ಇದೀಗ ಹಲವರಿಗೆ ಮುಂಜಾಗ್ರತಾ ಕೈಪಿಡಿಯಾಗಿದೆ.

Related Articles

Related image1
Intimacy: 40ರ ನಂತರ ಅದರಲ್ಲಿ ಆಸಕ್ತಿ ಜಾಸ್ತಿಯಾಗುತ್ತೆ ಅಂತಾರಲ್ಲ ನಿಜಾನಾ?
Related image2
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
36
ಪ್ರೀತಿ, ದೈಹಿಕ ಸಂಪರ್ಕ ಕುರಿತು ಕೋರ್ಟ್ ಹೇಳಿದ್ದೇನು
Image Credit : X

ಪ್ರೀತಿ, ದೈಹಿಕ ಸಂಪರ್ಕ ಕುರಿತು ಕೋರ್ಟ್ ಹೇಳಿದ್ದೇನು

ಅಧಿಕೃತ, ಕಾನೂನು ಬದ್ಧ ಮದುವೆಗೂ ಮೊದಲಿನ ಪ್ರೀತಿ, ಲೀವ್ ಇನ್ ರಿಲೇಶನ್‌ಶಿಪ್, ಅಥವಾ ಇತರ ಯಾವುದೇ ಸಂಬಂಧಗಳು ಕಾನೂನು ದೃಷ್ಟಿಯಲ್ಲ ಮಾನ್ಯವಲ್ಲ. ಹೆಣ್ಣು ಗಂಡಿನ ಸಂಬಂಧ ಮದುವೆಗೂ ಮೊದಲು ಎಷ್ಟೇ ಗಾಢವಾಗಿದ್ದರೂ ಕಾನೂನು ದೃಷ್ಟಿಯಲ್ಲಿ, ಸಮಾಜಿಕ ದೃಷ್ಟಿಯಲ್ಲಿ ಅವರು ಅಪರಿಚಿತರು ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.

46
ಪ್ರೀತಿ ಹೆಸರಲ್ಲಿ ದೈಹಿಕಸಂಬಂಧ ಉತ್ತವಲ್ಲ
Image Credit : Social Media

ಪ್ರೀತಿ ಹೆಸರಲ್ಲಿ ದೈಹಿಕಸಂಬಂಧ ಉತ್ತವಲ್ಲ

ಪ್ರೀತಿ ಅಥವಾ ಯಾವುದೇ ರಿಲೇಶನ್‌ಶಿಪ್‌ನಲ್ಲಿ ದೈಹಿಕ ಸಂಬಂಧಕ್ಕೆ ಮುಂದಾಗಬಾರದು. ಮದುವೆಗೂ ಮೊದಲು ಯಾರನ್ನು ಅತೀಯಾಗಿ ನಂಬುವುದು, ಅದೇ ಭರವಸೆ ಮೇಲೆ ದೈಹಿಕ ಸಂಪರ್ಕ ಬೆಳೆಸುವುದು ಉತ್ತಮವಲ್ಲ. ಮದುವೆಯಲ್ಲಿ ನಂಬಿಕೆ, ಪಾವಿತ್ರ್ಯತೆ ಬಗ್ಗೆ ನಂಬಿಕೆ ಇಟ್ಟವರು ಮದುವೆ ವರೆಗೆ ದೈಹಿಕ ಸಂಪರ್ಕ ಬೆಳೆಸುವುದರಿಂದ ದೂರ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

56
ಏನಿದು ಪ್ರಕರಣ
Image Credit : Asianet News

ಏನಿದು ಪ್ರಕರಣ

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಿತನಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾನೆ. ಆದರೆ ಆತನಿಗೆ ಮೊದಲೇ ಮದುವೆಯಾಗಿತ್ತು. ತನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

66
ಇಂತಹ ಪ್ರಕರಣಗಲ್ಲಿ ಏನು ಮಾಡಬೇಕು
Image Credit : Getty

ಇಂತಹ ಪ್ರಕರಣಗಲ್ಲಿ ಏನು ಮಾಡಬೇಕು

ಈ ರೀತಿಯ ಪ್ರಕರಣಗಳಲ್ಲಿ ಕ್ರಿಮಿನಲ್ ಶಿಕ್ಷೆ, ಅಥವಾ ಇತರ ಶಿಕ್ಷೆಗಳಿಗಿಂತ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಹೇಳಿದೆ. ಮ್ಯಾಟ್ರಿಮೋನಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮಂದೂಡಿದೆ.

ಇಂತಹ ಪ್ರಕರಣಗಲ್ಲಿ ಏನು ಮಾಡಬೇಕು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮದುವೆ
ಪ್ರೀತಿ
ಸಂಬಂಧಗಳು
ಸುಪ್ರೀಂ ಕೋರ್ಟ್

Latest Videos
Recommended Stories
Recommended image1
ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್!
Recommended image2
ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ
Recommended image3
ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!!
Related Stories
Recommended image1
Intimacy: 40ರ ನಂತರ ಅದರಲ್ಲಿ ಆಸಕ್ತಿ ಜಾಸ್ತಿಯಾಗುತ್ತೆ ಅಂತಾರಲ್ಲ ನಿಜಾನಾ?
Recommended image2
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved