ಉತ್ತರಖಂಡ ದುರಂತ; 10 ಮೃತ ದೇಹ ಪತ್ತೆ, ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ!
ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮಪಾತ ಹಾಗೂ ಪ್ರವಾಹಕ್ಕೆ ಇಡೀ ರಾಜ್ಯವೇ ತತ್ತರಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, 10 ಮೃತದೇಹ ಪತ್ತೆಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. 180ಕ್ಕೆ ಕುರಿ, ಮೇಕೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇತ್ತ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಹೆಚ್ಚುವರಿ ಹಣ ಘೋಷಿಸಿದ್ದಾರೆ. ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ.
ಉತ್ತರಖಂಡದ ಚಿಮೋಲಿ ಜಿಲ್ಲೆಯಲ್ಲಿ ನಡೆದ ಹಿಮಪಾತ ಹಾಗೂ ಪ್ರವಾಹ ಒಂದೊಂದು ಕಣ್ಣೀರ ಕತೆಯನ್ನು ತೆರೆದಿಡುತ್ತಿದೆ. ಎರಡೆರೆಡು ಜಲಪ್ರಳಯದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳದ ಉತ್ತರಖಂಡ ಜನತೆಗೆ ಇದೀಗ ಹಿಮಪಾತ ಹಾಗೂ ಪ್ರವಾಹ ಕಂಗೆಡಿಸಿದೆ.
ಎನ್‌ಡಿಆರ್‌ಆಫ್, ಭಾರತೀಯ ಸೇನೆ, ರಕ್ಷಣಾ ತಂಡಗಳು ಕಾರ್ಯಪ್ರವೃತ್ತವಾಗಿದ್ದು, 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಭೀಕರ ಪ್ರವಾಹಕ್ಕೆ 120ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. 170ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
600 ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತಪೋವನದೊಳಗೆ ಸಿಲುಕಿದ್ದ 16 ಮಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣೆ ಮಾಡಿದೆ.
ವೈದ್ಯರು, ಆರೋಗ್ಯಾಧಿಕಾರಿಗಳು ಸೇರಿದಂತೆ ಮೆಡಿಕಲ್ ಟೀಂ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡುತ್ತಿದೆ. ರಕ್ಷಣಾ ಕಾರ್ಯಕ್ಕೆ ಉತ್ತರಖಂಡ ಹಾಗೂ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಿದೆ.
ಉತ್ತರಖಂಡ ಮುಖ್ಯಮಂತ್ರಿ ತ್ರಿವಿಂದ್ರ ಸಿಂಗ್ ರಾವತ್ ಪ್ರವಾಹದಲ್ಲಿ ಮಡಿದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ರಾವತ್ ಪರಿಹಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಡಿದವರ ಕುಟುಂಬಕ್ಕೆ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ನೀಡಲು ಅನುಮೋದನೆ ನೀಡಿದ್ದಾರೆ. ಗಾಯಗೊಂಡರಿಗೆ 50,000 ರೂಪಾಯಿ ಪರಿಹಾರ ನೀಡಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಏರ್ ಕಮಾಂರ್ ರ್ಯಾಂಕ್ ಅಧಿಕಾರಿಯನ್ನು ನೇಮಿಸಲಾಗಿದೆ. ಜೊತೆಗೆ ಏರ್‌ಪೋರ್ಸ್ ತಂಡವೂ ಸ್ಥಳದಲ್ಲಿದೆ. ತುರ್ತು ಕಾರ್ಯಕ್ಕೆ ಎಲ್ಲಾ ತಂಡಗಳು ಸಜ್ಜಾಗಿದೆ.