MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಒಂದೇ ಸ್ಥಳ, ಒಂದೇ ಪ್ಲಾಟ್‌ಫಾರ್ಮ್ ಆದರೆ ಎರಡು ರೈಲು ನಿಲ್ದಾಣ, ಈ ಸ್ಪೆಷಲ್ ಸ್ಟೇಶನ್ ಎಲ್ಲಿದೆ?

ಒಂದೇ ಸ್ಥಳ, ಒಂದೇ ಪ್ಲಾಟ್‌ಫಾರ್ಮ್ ಆದರೆ ಎರಡು ರೈಲು ನಿಲ್ದಾಣ, ಈ ಸ್ಪೆಷಲ್ ಸ್ಟೇಶನ್ ಎಲ್ಲಿದೆ?

ಭಾರತದ ರೈಲ್ವೇಯಲ್ಲಿ ಹಲವು ವಿಶೇಷತೆಗಳಿವೆ. ಈ ಪೈಕಿ ಒಂದೇ ಪ್ಲಾಟ್‌ಫಾರ್ಮ್, ಆದರೆ ಎರಡು ರೈಲು ನಿಲ್ದಾಣವಿದೆ. ಪ್ಲಾಟ್‌ಫಾರ್ಮ್‌ನ ಎಡಭಾಗದಲ್ಲಿ ನಿಂತರೆ ಒಂದು, ಬಲಭಾಗದಲ್ಲಿ ಮತ್ತೊಂದು ನಿಲ್ದಾಣದ ಹೆಸರು. ಈ ಸ್ಪೆಷಲ್ ನಿಲ್ದಾಣ ಎಲ್ಲಿದೆ 

1 Min read
Author : Chethan Kumar
Published : Nov 19 2024, 12:27 PM IST
Share this Photo Gallery
  • FB
  • TW
  • Linkdin
  • Whatsapp
15

ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಹಲವು ವಿಶೇಷತೆಗಳಿವೆ. ಗಡಿ ಬಳಿ ಇರುವ ಭಾರತದ ನಿಲ್ದಾಣಕ್ಕೆ ತೆರಳಲು ಪಾಸ್‌ಪೋರ್ಟ್ ಬೇಕು, ವಿಚಿತ್ರ ಹೆಸರಿನ ರೈಲ ನಿಲ್ದಾಣ ಸೇರಿದಂತೆ ಹಲವು ಅಚ್ಚರಿ ನಿಲ್ದಾಣಗಳಿವೆ. ಈ ಪೈಕಿ ಒಂದು ನಿಲ್ದಾಣ ಸ್ಪೆಷಲ್. ಸಾಮಾನ್ಯವಾಗಿ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಬದಿಗಳಲ್ಲಿ ನಿಂತರೂ ಒಂದೇ ನಿಲ್ದಾಣ. ಅಂದರೆ ರೈಲು ತೆರಳುವ ಹಾಗೂ ಆಗಮಿಸುವ ಎರಡು ಬದಿಗಳ ಒಂದೇ ನಿಲ್ದಾಣ. ಆದರೆ  ಇಲ್ಲಿ ಒಂದೇ ಸ್ಥಳ, ಒಂದೇ ಪ್ಲಾಟ್‌ಫಾರ್ಮ್. ಆದರೆ ಎರಡು ರೈಲು ನಿಲ್ದಾಣವಿದೆ. ರೈಲು ಪ್ಲಾಟ್‌ಫಾರ್ಮ್‌ನ ಎರಡೂ ಬದಿಗಳು ಬೇರೆ ಬೇರೆ ನಿಲ್ದಾಣ. 

25

ಇದು ಮಹಾರಾಷ್ಟ್ರದ ಅಹಮ್ಮದ್‌ನಗರ ಜಿಲ್ಲೆಯಲ್ಲಿರುವ ವಿಶೇಷ ರೈಲು ನಿಲ್ದಾಣ. ಇಲ್ಲಿ ರೈಲು ಹಳಿಯ ಒಂದು ಭಾಗದಲ್ಲಿ ನಿಂತರೆ ಶ್ರೀರಾಂಪುರ ರೈಲು ನಿಲ್ದಾಣ, ಹಳಿ ದಾಟಿ ಮತ್ತೊಂದು ಬದಿಯಲ್ಲಿ ನಿಂತರೆ ಬೇಲಾಪುರ್ ರೈಲು ನಿಲ್ದಾಣ. ಇದು ಒಂದೇ ಪ್ಲಾಟ್‌ಫಾರ್ಮ್, ಆದರೆ ನಡುವಿನಲ್ಲಿ ಸಾಗುವ ರೈಲು ಹಳಿ ಬೇರೆ ಬೇರೆ ನಿಲ್ದಾಣವಾಗಿ ವಿಭಾಗಿಸಿದೆ. 

35

ಇಲ್ಲಿ ಯಾವ ನಿಲ್ದಾಣಕ್ಕೆ ಟಿಕೆಟ್ ಪಡೆಯಬೇಕು ಅನ್ನೋ ಗೊಂದಲ ಹಲವು ಪ್ರಯಾಣಿಕರಲ್ಲಿ ಮೂಡುವುದು ಸಹಜ. ಕಾರಣ ಎರಡೂ ನಿಲ್ದಾಣಕ್ಕೆ ಒಂದೇ ದೂರ, ಒಂದೇ ಟಿಕೆಟ್ ದರ. ಇಳಿಯುವಾಗ ಅಥವಾ ಹತ್ತುವಾಗ ರೈಲು ಯಾವ ಭಾಗದಿಂದ ಬಂದಿದೆ ಅನ್ನೋದರ ಮೇಲೆ ನಿರ್ಧಾರವಾಗುತ್ತದೆ.

45

ಎರಡು ಬದಿಯಲ್ಲಿ ಬೇರೆ ಬೇರೆ ನಿಲ್ದಾಣದ ಸೈನ್ ಬೋರ್ಡ್‌ಗಳಿವೆ. ಇದಕ್ಕೆ ಮುಖ್ಯ ಕಾರಣ ಭೌಗೋಳಿಕ ಪ್ರದೇಶದ ವಿಂಗಡನೆಯಾಗಿದೆ. ರೈಲು ಹಳಿಯ ಒಂದು ಬದಿ ಶ್ರೀರಾಮಪುರ ಪ್ರದೇಶವಾಗಿದ್ದರೆ, ಮತ್ತೊಂದು ಬದಿ ಬೇಲಾಪುರ್. ಇದರ ಗಡಿ ರೇಖೆಯಿಂದ ರೈಲು ಹಳಿ ಹಾದು ಹೋಗಿದೆ. ಹೀಗಾಗಿ ಎರಡು ಬೇರೆ ಬೇರೆ ರೈಲು ನಿಲ್ದಾಣವಾಗಿ ಗುರುತಿಸಿಕೊಂಡಿದೆ.

55

ಇದೇ ರೀತಿ ಮಹಾರಾಷ್ಟ್ರದ ನವಪುರ ರೈಲು ನಿಲ್ದಾಣದಲ್ಲಿ ಒಂದು ವಿಶೇಷತೆ ಇದೆ. ಈ ರೈಲು ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರಕ್ಕೆ ಸೇರಿದ್ದರೆ, ಮತ್ತರ್ಧ ಭಾಗ ಗುಜರಾತ್‌ಗೆ ಸೇರಿದೆ. ಈ ನಿಲ್ದಾಣದಲ್ಲಿ ರೈಲು ಅನೌನ್ಸ್‌ಮೆಂಟ್, ಹಿಂದಿ, ಇಂಗ್ಲೀಷ್, ಮರಾಠಿ ಹಾಗೂ ಗುಜರಾತಿ ಭಾಷೆಗಳಲ್ಲಿ ಮಾಡಲಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತೀಯ ರೈಲ್ವೆ

Latest Videos
Recommended Stories
Recommended image1
ರಾಹುಲ್ ಗಾಂಧಿ ನೆಗೆಟಿವ್ ಪಾಲಿಟಿಕ್ಸ್‌ನ ಪೋಸ್ಟರ್ ಬಾಯ್, ವಿದೇಶಿ ಶಕ್ತಿಗಳ ಕೈಗೊಂಬೆ, ಪಿಯೂಷ್ ಗೋಯಲ್ ಗಂಭೀರ ಆರೋಪ!
Recommended image2
ಮಾತು ಬಾರದ, ಕಿವಿ ಕೇಳದ ಯುವಕನ ಹನಿಟ್ರ್ಯಾಪ್‌ಗೆ ಯತ್ನ, ಸುಂದರಿ Safna ಗ್ಯಾಂಗ್‌ ಬಂಧಿಸಿ ಜೈಲಿಗಟ್ಟಿದ ಪೊಲೀಸ್‌!
Recommended image3
ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: 22 ವರ್ಷದ ಯೋಧ ಕ್ಯಾಪ್ಟನ್ ಅಮನ್ ಸಿಂಗ್ ಸಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved