ಹೋಂ ವರ್ಕ್ ಮಾಡದ್ದಕ್ಕೆ ಸಾವಿನ ಶಿಕ್ಷೆ: ಮಗನನ್ನು ಕಳೆದುಕೊಂಡ ನೋವಿನಲ್ಲಿ ಅಪ್ಪ, ಅಮ್ಮ!
ರಾಜಸ್ಥಾನದ ಚುರು ಜಿಲ್ಲೆಯ ಸಲಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ, ಮಾಡರ್ನ್ ಪಬ್ಲಿಕ್ ಶಾಲೆಯ ಶಿಕ್ಷಕರು ಮಗುವನ್ನು ಹೊಡೆದು ಕೊಂದಿದ್ದಾರೆ. ಗುರುವಾರ, ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದ್ದು, ಮುಗ್ಧ ಗಣೇಶನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಈ ಸಮಯದಲ್ಲಿ, ಮೃತ ಮಗುವಿನ ಪೋಷಕರು ಅಳು ಮುಗಿಲುಮುಟ್ಟಿತ್ತು. ಅತ್ತ ಅಣ್ಣನನ್ನು ಕಳೆದುಕೊಂಡ ನೋಬಿನಲ್ಲಿ ಸೋದರಿ ಸೋನು ಕಣ್ಣೀರು ಹಾಕುತ್ತಿದ್ದಳು.
ಹೌದು ಚುರುವಿನ ಮಾಡರ್ನ್ ಪಬ್ಲಿಕ್ ಶಾಲೆಯಲ್ಲಿ, ಶಿಕ್ಷಕರು 7 ನೇ ತರಗತಿಯ ವಿದ್ಯಾರ್ಥಿಯನ್ನು ಅದೆಷ್ಟು ಕಠಿಣವಾಗಿ ಥಳಿಸಿದ್ದಾರೆಂದರೆ, ಆತನ ದೇಹದ ಸೂಕ್ಷ್ಮ ಭಾಗಗಳಿಗೆ ಗಂಭೀರ ಗಾಯಗಳಾಗಿ ಆತ ಮೃತಪಟಗ್ಟಿದ್ದಾರೆ. ಶಿಕ್ಷಣ ಇಲಾಖೆ ತಂಡವು ಶಾಲಾ ಮಕ್ಕಳು ಮತ್ತು ಅವರ ಕುಟುಂಬದವರ ಹೇಳಿಕೆಯನ್ನು ತೆಗೆದುಕೊಂಡಿದೆ. ಆರಂಭದಲ್ಲಿ, ಶಾಲೆಯಲ್ಲಿ ಅನೇಕ ನ್ಯೂನತೆಗಳು ಬೆಳಕಿಗೆ ಬಂದಿವೆ. ಘಟನೆಯ ನಂತರ ಗಣೇಶ್ ಜೊತೆ ಓದುತ್ತಿರುವ ಮಕ್ಕಳು ಮತ್ತು ಕುಟುಂಬ ಸದಸ್ಯರು ಕೂಡ ಆಘಾತಕ್ಕೊಳಗಾಗಿದ್ದಾರೆ.
murder
ತಂದೆ ಓಂಪ್ರಕಾಶ್ ಮಗನ ಶವದೊಂದಿಗೆ ಮನೆಗೆ ತಲುಪಿದ್ದಾರೆ. ಈ ವೇಳೆ ಮಗನ ಮೃತ ದೇಹವನ್ನು ನೋಡಿದ ತಾಯಿಗೆ ಪ್ರಜ್ಞೆ ತಪ್ಪಿದೆ. ಬುಧವಾರ ಬೆಳಿಗ್ಗೆ ಊಟದ ಡಬ್ಬಿಯನ್ನು ಕೊಟ್ಟು, ರೆಡಿ ಮಾಡಿ ಮಗನನ್ನು ಕಳುಹಿಸಿದ್ದಳಾಕೆ. ಆದರೆ ಸಂಜೆ ವೇಳೆಗೆ ಅದೇ ಮಗನ ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮನೆಗೆ ತರಲಾಗಿದೆ. ರಾತ್ರಿ ಗಣೇಶನ ತಾಯಿ ರಾಜು ದೇವಿಗೆ ಆತನ ಸಾವಿನ ಬಗ್ಗೆ ತಂದೆ ತಿಳಿಸಿರಲಿಲ್ಲ. ಗಣೇಶ್ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಸಿಕಾರ್‌ಗೆ ಸೇರಿಸಲಾಗಿದೆ ಎಂದು ತಂದೆ ಹೇಳಿದ್ದರು.
murder
ಇನ್ನು ಬಾಲಕನ ಅಣ್ಣ ವಿನೋದ್ ತಮ್ಮನ ಮೃತದೇಹ ಕಂಡು ಮೂರ್ಛೆ ಹೋಗಿದ್ದಾನೆ. ಈ ನಡುವೆ ತಂದೆ ಧೈರ್ಯದಿಂದ ಕುಟುಂಬವನ್ನು ನೋಡಿಕೊಂಡಿದ್ದಾರೆ. ಮನೆಯಿಂದ ಮಗುವಿನ ಶವವನ್ನು ಎತ್ತಿದ ತಕ್ಷಣ, ವಿಚಲಿತಳಾದ ತಾಯಿ ಮತ್ತು ಸಹೋದರಿ ಕುಸಿದು ಕುಳಿತಿದ್ದಾರೆ. ಎಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ಅಂತಿಮ ವಿಧಿಗಳನ್ನು ಮಾಡುತ್ತಿದ್ದಾಗ, ತಂದೆ ಅಳುತ್ತಲೇ ಮೂಲೆಯಲ್ಲಿ ಕುಳಿತಿದ್ದರು.
murder
ಗಣೇಶ್ ಜೊತೆ ಓದುತ್ತಿರುವ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಆತನೊಂದಿಗೆ ಓದುತ್ತಿರುವ 7 ನೇ ತರಗತಿಯ ಹುಡುಗಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಇನ್ನು ಈ ಬಗ್ಗೆ ಮಾತನಾಡಿರುವ ಬಾಲಕಿಯ ತಂದೆ, ಅಂದು ತನ್ನ ಮಗಳು ಶಾಲೆಯಿಂದ ಅಳುತ್ತಾ ಮನೆಗೆ ಬಂದಿದ್ದಳು. ಇದನ್ನು ಕಂಡು ತಾಯಿ ಕೂಡ ಕಣ್ಣೀರು ಹಾಕಿದರು. ಅಲ್ಲದೇ ಮಗಳು ಅಳುತ್ತಾ ಅಪ್ಪಾ ನಮ್ಮೊಂದಿಗೆ ಓದುತ್ತಿದ್ದ ಗಣೇಶ್ ಹೆಸರಿನ ಹುಡುಗನನ್ನು ಶಿಕ್ಷಕ ಮನೋಜ್ ಥಳಿಸಿ ಸಾಯಿಸಿದ್ದಾರೆ. ಅಪ್ಪಾ, ನಾನು ಆ ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ.
murder
ಎರಡು ದಿನಗಳಿಂದ ಗ್ರಾಮದಲ್ಲಿ ಮೌನ ಆವರಿಸಿದೆ. ಮನೆಗಳಲ್ಲಿ ಒಲೆ ಕೂಡ ಉರಿದಿಲ್ಲ. ಅಂಗಡಿಗಳೂ ಮುಚ್ಚಿವೆ. ಶಾಲೆಯಲ್ಲಿ ಓದುತ್ತಿರುವ ಮೂರನೇ ತರಗತಿಯ ಹುಡುಗಿ ತನ್ನ ತಂದೆಗೆ ಹೇಳಿದ್ದು ಎಲ್ಲರ ನಿದ್ದೆಗೆಡಿಸಿದೆ. ಹುಡುಗಿ ತನ್ನ ತಂದೆಗೆ ನನ್ನ ಹೋಂವರ್ಕ್ ಕೂಡ ಪೂರ್ತಿಯಾಗಿರಲಿಲ್ಲ, ಗಣೇಶ್ ಸಾವನ್ನಪ್ಪದಿದ್ದರೆ, ನನಗೂ ಸಾಯುವಂತೆ ಹೊಡೆಯುತ್ತಿದ್ದರು ಎಂದು ಅತ್ತಿದ್ದಾಳೆ.
murder
ಮಗುವಿನ ಚಟ್ಟಕ್ಕೆ ಹೆಗಲು ಕೊಟ್ಟ ಗ್ರಾಮಸ್ಥರ ಕಣ್ಣಿನಲ್ಲಿ ನೀರು ತುಂಬಿತ್ತು. ನಾವು ಕಡಿಮೆ ಓದಿರಬಹುದು ಆದರೆ ಮಕ್ಕಳನ್ನು ಓದಿಸಬೇಕೆಂದು ಬಯಸುತ್ತೇವೆ. ಆದರೆ ಶಾಲೆಗೆ ಹೋಗಿ ಮಕ್ಕಳು ಸಾಯಬೇಕೆಂದು ಬಯಸುವುದಿಲ್ಲ ಎಂದಿದ್ದಾರೆ.