Rewind 2021: 21 ಫೋಟೋಗಳಲ್ಲಿ ಇಡೀ ವರ್ಷ ಮೆಲುಕು ಹಾಕಿದ ಪ್ರಧಾನಿ ಮೋದಿ!
2021ನೇ ವರ್ಷ ಕೊನೆಗೊಳ್ಳುತ್ತಿದೆ, ಇದೇ ವೇಳೆ ಹೊಸ ವರ್ಷ ಭರ ಮಾಡಿಕೊಳ್ಳುವ ಹುಮ್ಮಸ್ಸೂ ಜೊತೆಗಿದೆ. 2021ನೇ ವರ್ಷ ಎಲ್ಲರಿಗೂ ವಿವಿಧ ಬಗೆಯ ಅನುಭವ ನೀಡಿದೆ. ಕೆಲವರಿಗೆ ಖುಷಿ ಕೊಟ್ಟಿದ್ದರೆ, ಇನ್ನು ಕೆಲವರಿಗೆ ಕಹಿ ಅನುಭವ ನೀಡಿದೆ. ಅದರಲ್ಲೂ ಕೊರೋನಾ ಆರ್ಭಟದಿಂದಾಗಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ವರ್ಷದ ಕೊನೆಯ ದಿನ ಒಂದು ಬಾರಿ ಹಿಂತಿರುಗಿ ನೋಡಿದಾಗ, ವರ್ಷದಾರಂಭದಿಂದ ಕೊನೆಯ ದಿನದವರೆಗಿನ ದಿನಗಳು ವಿಭಿನ್ನ ಅನುಭವ ನೀಡಿವೆ. ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡಾ 2021ನೇ ವರ್ಷದಲಲ್ಲಿ ಹಲವೆಡೆ ಭೇಟಿ ನಿಡಿದ್ದಾರೆ, ಅನೇಕ ಕಾರ್ಯಕ್ರಮ, ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಹೀಗಿರುವಾಗ ಅವರ ಅಧಿಕೃತ ವೆಬ್‌ಸೈಟಿನಲ್ಲಿ 2021ನೇ ವರ್ಷದ ವಿಶೇಷವೆನಿಸುವ ಅವರ 21 ಚಿತ್ರಗಳನ್ನು ಶೇರ್ ಮಾಡಿಕೊಳ್ಲಲಾಗಿದೆ. ಆ ಫೋಟೋಗಳ ಒಂದು ಝಲಕ್ ಇಲ್ಲಿದೆ ನೋಡಿ.

ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ದೇಶದ ಭವಿಷ್ಯದ ಹರಿಕಾರರಾದ ಪುಟ್ಟ ಮಕ್ಕಳನನ್ಉ ಭೇಟಿ ಮಾಡಿ, ಅವರೊಂದಿಗೆ ಆಪ್ತ ಸ್ನೇಹಿತನಂತೆ ಕಳೆದ ಕ್ಷಣ. ಮಕ್ಕಳ ಜೊತೆ ಮಗುವಾಗಿ ಅವರ ಮಾತುಗಳನ್ನಾಲಿಸುತ್ತಿರುವ ಪ್ರಧಾನಿ.
ಪ್ರಧಾನಿ ಮೋದಿಯನ್ನು ಭೇಟಿಯಾದ ಪುಟ್ಟ ಬಾಲಕಿ. ನರೇಂದ್ರ ಮೋದಿ ಕೂಡಾ ಅತ್ಯಂತ ಕುತೂಹಲದಿಂದ ಬಾಲಕಿಯ ಮಾತುಗಳನ್ನು ಆಲಿಸುತ್ತಿರುವ ದೃಶ್ಯ.
ಇದೇ ತಿಂಗಳು ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ವೇಳೆ ವಿಕಲಚೇತನ ಮಹಿಳೆಯನ್ನು ಭೇಟಿಯಾಗಿದ್ದ ಮೋದಿ. ಈ ವೇಳೆ ಮಹಿಳೆಗೆ ನಮಸ್ಕರಿಸಿದ್ದ ಮೋದಿ ಅವರ ಕಾಲಿಗೆರಗಿದ್ದರು.
ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್‌ರನ್ನು ಭೇಟಿಯಾಗಿ ಮಾತನಾಡಿದ ಕ್ಷಣ.
ತಡರಾತ್ರಿ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ. ಮೋದಿ ನಿವಾಸದ ಕಿಟಕಿಯಿಂದ ಕಾಣುತ್ತೊಇದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಕೆಲ ವಿಚಾರಗಳನ್ನು ಪುಸ್ತಕದಲ್ಲಿ ಬರೆದು ನೋಟ್ ಮಾಡಿಕೊಳಗ್ಳುತ್ತಿರುವ ಪ್ರಧಾನಿ. ಪಕ್ಕದಲ್ಲಿ ಕುಳಿತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸುಷ್ಮಾ ಸ್ವರಾಜ್ ಭವನದಲ್ಲಿ ತಮ್ಮ ಮಂತ್ರಿ ಮಂಡಲದ ಜೊತೆ 'ಚಿಂತನ್ ಸತ್ರ'ದಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿರುವ ಪ್ರಧಾನಿ ಮೋದಿ
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮೋದಿ. ಕ್ಯಾಮೆರಾ ಕಣ್ಣಿನಲ್ಲಿ ದೃಶ್ಯ ಸೆರೆಯಾಗಿದ್ದು ಹೀಗೆ
ಆಚಾರ್ಯ ಶ್ರೀ ಜಿತೇಂದ್ರಿಯಪ್ರಿಯದಾಸಜಿ ಸ್ವಾಮೀಜಿ ಮಹಾರಾಜ್, ಮಣಿನಗರದ ಆಧ್ಯಾತ್ಮಿಕ ನಾಯಕ ಶ್ರೀ ಸ್ವಾಮಿನಾರಾಯಣ ಗಾಡಿ ಸಂಸ್ಥಾನದ ಪ್ರಧಾನಿ ಮೋದಿಯನ್ನು ಆಶೀರ್ವದಿಸಿದ ಕ್ಷಣ.
ಪ್ರಧಾನಿ ಮೋದಿ ವಾರಾಣಸಿಗೆ ಭೇಟಿ ನೀಡಿದ ಸಂದರ್ಭದ ಕೊಂಡು ಬಂದ ದೃಶ್ಯ. ಪ್ರಕೃತಿ ಸೌಂದರ್ಯ ಆಹ್ವಾದಿಸುತ್ತಿರುವ ಪ್ರಧಾನಿ. ಹಕ್ಕಿಗಳ ಹಾರಾಟವೂ ಇಲ್ಲಿ ಕಾಣಬಹುದು
ರಾಷ್ಟ್ರಪತಿ ಭವನದಲ್ಲಿ ಜಾನಪದ ಲೋಕ (Folk), ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದ ಹಾಲಕ್ಕಿ ಸಮುದಾಯದ, ಹೊನ್ನಳ್ಳಿಯ ವನದೇವತೆ ಪದ್ಮಶ್ರೀ ತುಳಸಿ ಗೌಡ ಅವರನ್ನು ಭೇಟಿಯಾಗಿ ಮಾತನಾಡಿಸುತ್ತಿರುವ ಪ್ರಧಾನಿ ಮೋದಿ
ತಮ್ಮ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತು
ಕೊಯಮತ್ತೂರಿನಲ್ಲಿ 105 ವರ್ಷದ ರೈತ ಮಹಿಳೆ ಮತ್ತು ಪದ್ಮಶ್ರೀ ಪುರಸ್ಕೃತ ಪಪ್ಪಮ್ಮಾಳ್ ಜಿ ಅವರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ
ವಿಕ್ಟೋರಿಯಾ ಸ್ಮಾರಕದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ 'ಪರಾಕ್ರಮ್ ದಿವಸ್' ಆಚರಣೆಯಲ್ಲಿ ಪ್ರಧಾನಿ ಮೋದಿ
ಪ್ರತಿ ವರ್ಷ ಗಡಿ ಭಾಗಕ್ಕೆ ಭೇಟಿ ನೀಡಿ, ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ಮೋದಿ ಈ ಬಾರಿಯೂ ತಾವು ನಡೆಸಿಕೊಂಡು ಬಂದ ಪದ್ದತಿಯನ್ನು ಮುಂದುವರೆಸಿದ್ದಾರೆ. ನೌಶೆರಾ, ರಜೌರಿ ಗಡಿ ನಿಯಂತ್ರಣ ರೇಖೆಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಆಚರಿಸಿದ್ದ ಪ್ರಧಾನಿ ಮೋದಿ
ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಹಿಳಾ ಹಾಕಿ ತಂಡದ ಸದಸ್ಯರೊಂದಿಗೆ ಪ್ರಧಾನಿ ಮೋದಿ
ಪಿಇ/ವಿಸಿ ಉದ್ಯಮದ ಸಿಇಒಗಳೊಂದಿಗೆ ಪ್ರಧಾನಮಂತ್ರಿ ಸಭೆ. 2021ರ ಈ ಸಭೆ ಬಹಳಷ್ಟು ಮಹತ್ವ ಪಡೆದಿತ್ತು. ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ಪಿಎಂ ಮೋದಿಯ ಈ ಗುಣವೇ ನಾಗರಿಕರಿಗೆ ಅಚ್ಚುಮೆಚ್ಚು
ಜಿ20 ಸಮ್ಮೇಳನದಲ್ಲಿ ಭಾಗವಹಿಸಲು ರೋಮ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಕ್ಷಣ.
ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಜನರು ಶುಭಾಶಯ ಕೋರಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಪಿಎಂ ಮೋದಿಯ ಈ ಭೇಟಿ ಭಾರೀ ಮಹತ್ವ ಪಡೆದಿತ್ತು.
ಕಾನ್ಪುರದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿಯವರ ಸಂವಾದ. ಈ ವೇಳೆ ಜನರನ್ನು ಭಾವುಕಗೊಳಿಸಿದ ಕ್ಷಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ