PM Modi in Kerala ಮಳೆಯ ಲೆಕ್ಕಿಸದೆ ಪ್ರಧಾನಿ ಮೋದಿಗೆ ಕೇರಳಿಗರ ಭರ್ಜರಿ ಸ್ವಾಗತ!
ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಹೋದ ಕಡೆಯಲ್ಲೆಲ್ಲಾ ಭರ್ಜರಿ ಸ್ವಾಗತ ಸಿಗುತ್ತಿದೆ. ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯನ್ನೂ ಲೆಕ್ಕಿಸದೆ ಜನರು ದಾರಿಯಲ್ಲಿ ನಿಂತು ಮೋದಿಯನ್ನು ಸ್ವಾಗತಿಸಿದ್ದಾರೆ. ಮಳೆಯ ನಡುವೆ ಮೋದಿಗೆ ಸ್ವಾಗತದ ಫೋಟೋಗಳು ಇಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಸದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಐಎನ್ಎಸ್ ವಿಕ್ರಾಂತ್‌ನ್ನು ನೌಕಾಪಡಗೆ ನಿಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗಾಗಿ ಮೋದಿ ಕೇರಳದಲ್ಲಿ ಬೀಡುಬಿಟ್ಟಿದ್ದಾರೆ. ಕೊಚ್ಚಿಗೆ ಆಗಮಿಸಿದ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದರು. ಬಳಿಕ ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಬೇಟಿ ನೀಡಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ಮಳೆಯನ್ನು ಲೆಕ್ಕಿಸದೆ ಜನರು ಮೋದಿಗೆ ಸ್ವಾಗತ ನೀಡಿದರು.
ಕೊಚ್ಚಿಯಿಂದ ಕಾಲಡಿಗೆ ಮೋದಿ ತೆರಳು ಮಾರ್ಗದ್ದುದ್ದಕ್ಕೂ ಜನ ನಿಂತಿದ್ದರು. ಕೊಡೆ ಹಿಡಿದು ನಿಂತಿದ್ದ ಜನ, ಮೋದಿ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಜೈಕಾರ, ಮೋದಿ ಮೋದಿ ಘೋಷಣೆಗಳು ಮೊಳಗಿತ್ತು. ಜನರು ಮಳೆಯನ್ನು ಲೆಕ್ಕಿಸದೆ ಮೋದಿಗೆ ಭರ್ಜರಿ ಸ್ವಾಗತ ನೀಡಿದರು.
ಮಳೆಯ ನಡುವೆ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸದ ಕೆಲಸವಾಗಿತ್ತು. ಮೋದಿಗೆ ಕೈಬೀಸಿ ಶುಭಾಶಯ ಕೋರಿದರು. ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಆದರೆ ಜನರು ಮೋದಿ ಸ್ವಾಗತಕ್ಕೆ ಬೀದಿ ಬೀದಿಯಲ್ಲಿ ನಿಂತಿದ್ದರು.
ಸುರಕ್ಷತಾ ದೃಷ್ಟಿಯಿಂದ ಮೋದಿ ಸಂಚರಿಸುವ ದಾರಿಗಳ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಜನರು ದಾರಿ ಬದಿಯಲ್ಲಿರುವ ಅಂಗಡಿಗಳ ಮುಂದೆ ನಿಂತು ಮೋದಿ ಸ್ವಾಗತಿಸಿದರು. ಇತ್ತ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಹಲವು ಕಡೆಗಳಲ್ಲಿ ಮಳೆಯಲ್ಲಿ ನೆನೆದುಕೊಂಡೆ ಜನರು ಮೋದಿಗೆ ಸ್ವಾಗತ ಕೋರಿದರು. ಭದ್ರತೆ ವಿಚಾರದಲ್ಲಿ ಕಿಂಚಿತ್ತು ಲೋಪವಾಗದಂತೆ ನೋಡಿಕೊಳ್ಳಲು ಮುನ್ನಚ್ಚರಿಕೆ ವಹಿಸಲಾಗಿದೆ.
modi pinarayi
ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಭೇಟಿ ನೀಡಿದ ಮೋದಿ ಬಳಿಕ ಅಲ್ಲಿಂದ ಕೊಚ್ಚಿಗೆ ಆಗಮಿಸಿದರು. ಕೊಚ್ಚಿಯಲ್ಲಿ ಮೆಟ್ರೋ ಉದ್ಗಾಟಿಸಿ ಮಾತನಾಡಿದರು. ಈ ವೇಳೆ ಕೇರಳದಲ್ಲಿ ಕೇಂದ್ರದ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದರು.
ಕೇರಳಕ್ಕೆ ಆಗಮಿಸಿದ ಮೋದಿ ಮೊದಲು ಸಾರ್ವಜನಿಕ ಸಭೆಯನ್ನುದ್ದೇಶಿ ಮಾತಾನಾಡಿದರು. ಈ ವೇಳೆ ಕೇರಳಕ್ಕೆ ಡಬಲ್ ಎಂಜಿನ್ ಸರ್ಕಾರ ಅಗತ್ಯತೆ ಒತ್ತಿ ಹೇಳಿದರು. ಕೇರಳ ಪ್ರಗತಿಗೆ ಬಿಜೆಪಿ ಬದ್ಧವಾಗಿದೆ. ಕೇರಳ ಜನ ಇದೀಗ ಬಿಜೆಪಿಯನ್ನು ಆಶಾವಾದಗಳಿಂದ ನೋಡುತ್ತಿದ್ದಾರೆ ಎಂದರು.
ಕೇರಳಕ್ಕೆ ಆಗಮಿಸಿದ ಮೋದಿ ಬಿಳಿ ಪಂಚೆ, ಶರ್ಟು ಹಾಗೂ ಶಲ್ಯ ಧಿರಿಸಿನಲ್ಲಿ ಗಮನಸೆಳೆದರು. ಮೋದಿ ಕೇರಳ ಉಡುಗೆ ತೊಡುಗೆ ಎಲ್ಲರ ಗಮನಸೆಳೆದಿದೆ. ವಿಶೇಷ ಉಡುಗೆಯಲ್ಲಿ ಕೇರಳದ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿದ್ದಾರೆ.