ಹುಟ್ಟೂರಿಗೆ ಹೋಗುವ ಆಸೆ ಸಿಂಗ್‌ಗೆ, ಆದರೆ ನೋವಿನ ನೆನಪು ಅಲ್ಲಿಂದ ದೂರವಿಟ್ಟಿತ್ತು
ಆರ್ಥಿಕ ತಜ್ಞರೂ ಆಗಿದ್ದ ಡಾ. ಮನಮೋಹನ ಸಿಂಗ್ ಅವರು ದೇಶ ಕಂಡ ಮೊದಲ ಸಿಖ್ ಪ್ರಧಾನಿ. ಅದೇ ರೀತಿ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಗೆ ಸಂಸತ್ತಿನಲ್ಲಿ ಕ್ಷಮೆ ಕೋರಿದ ಸಿಖ್ ನಾಯಕ.
ಪಾಕಿಸ್ತಾನದ ಪಂಜಾಬ್‌ನ ಗಾಡ್‌ನಲ್ಲಿ ಹುಟ್ಟಿದ್ದ ಮನಮೋಹನ್ ಸಿಂಗ್ ಎರಡು ಸಲ ಭಾರತದ ಪ್ರಧಾನಿಯಾಗಿದ್ದರು. ಆದರೆ ಅವರಿಗೆ ಹುಟ್ಟೂರಿಗೆ ಹೋಗಬೇಕು ಮಹಾದಾಸೆ ಇತ್ತಂತೆ. ಅಲ್ಲಿರುವ ನೋವಿನ ನೆನಪುಗಳು ಕಾರಣಕ್ಕೆ ಸಿಂಗ್ ಹಿಂದೇಟು ಹಾಕಿದ್ದರು.
'ಪ್ರತಿಯೊಬ್ಬ ಸಿಖ್ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕರ್ತಾರಪುರ ಮತ್ತು ನಂಕಾನಾ ಸಾಹಿಬ್‌ಗೆ ಹೋಗಲು ಬಯಸುತ್ತಾರೆ. ನಾನು ಸಹ ಅಲ್ಲಿಗೆ ಹೋಗಲಿ ಬಯಸುತ್ತೇನೆ. ನಾನು ಒಮ್ಮೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರನ್ನು ಪಾಕಿಸ್ತಾನದಲ್ಲಿರುವ ಚಕ್ವಾಲ್‌ನಲ್ಲಿರುವ ಪೂರ್ವಜನರ ಸ್ಥಳಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಕೇಳಿದ್ದೆ.
ಆಗ ಅವರು ನಾನು ಅಲ್ಲಿರುವ ನೋವಿನ ನೆನಪುಗಳ ಕಾರಣಕ್ಕೆ ಹೋಗುವುದಿಲ್ಲ ಎಂದಿದ್ದರು' ಎಂದು 2019ರಲ್ಲಿ ಪಂಜಾಬ್ ಹಣಕಾಸು ಸಚಿವ ಮನ್ ಪ್ರೀತ್ ಸಿಂಗ್ ಬಾದಲ್ ಸಂದರ್ಶನವೊಂದರಲ್ಲಿ ಸಿಂಗ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಸಿಖ್ ಧಂಗೆಗೆ ಕ್ಷಮೆ ಕೋರಿದ್ದ ಮನಮೋಹನ್: ಆರ್ಥಿಕ ತಜ್ಞರೂ ಆಗಿದ್ದ ಡಾ. ಮನಮೋಹನ ಸಿಂಗ್ ಅವರು ದೇಶ ಕಂಡ ಮೊದಲ ಸಿಖ್ ಪ್ರಧಾನಿ. ಅದೇ ರೀತಿ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಗೆ ಸಂಸತ್ತಿನಲ್ಲಿ ಕ್ಷಮೆ ಕೋರಿದ ಸಿಖ್ ನಾಯಕ. 1984ರ ಧಂಗೆಯಲ್ಲಿ ಸುಮಾರು 3 ಸಾವಿರ ಸಿಬ್ಬರು ಮೃತಪಟ್ಟಿದ್ದರು.
'ಈ ದಂಗೆಗೆ ಸಂಬಂಧಿಸಿ ಸಿಖ್ ಸಮುದಾಯ ಮತ್ತು ದೇಶದ ಕ್ಷಮೆ ಕೋರಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಅಂಥದ್ದೊಂದು ಕೃತ್ಯ ನಡೆದಿದ್ದಕ್ಕಾಗಿ ನನ್ನ ತಲೆಯನ್ನು ಅವಮಾನದಿಂದ ತಗ್ಗಿಸುತ್ತಿದ್ದೇನೆ' ಎಂದು ಸಂಸತ್ತಿನ ಮುಂದೆ ತಿಳಿಸಿದ್ದರು ಮನಮೋಹನ್ ಸಿಂಗ್.