ಸೆಂಟ್ರಲ್ ವಿಸ್ತಾ ಯೋಜನೆಯಿಂದ ಕರ್ತವ್ಯ ಪಥದಲ್ಲಿ ಆಗಿರುವ ಬದಲಾವಣೆಯ ನೋಟ!
ಐತಿಹಾಸಿಕ ರಾಜಪಥವನ್ನು ಕರ್ತವ್ಯ ಪಥ ಎನ್ನುವ ಹೆಸರಿನೊಂದಿಗೆ ಬದಲಾವಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸೆಂಟ್ರಲ್ ವಿಸ್ತಾ ಅವೆನ್ಯೂ ಈ ವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅದರ ನಡುವೆ ಈ ಐತಿಹಾಸಿಕ ತಾಣದ ಹಿಂದಿನ ಹಾಗೂ ಈಗಿನ ಚಿತ್ರಗಳು ಬಿಡುಗಡೆಯಾಗಿದ್ದು, ಒಟ್ಟಾರೆ ಇಡೀ ಸೆಂಟ್ರಲ್ ವಿಸ್ತಾವನ್ನು ಯಾವ ರೀತಿ ಬದಲಾವಣೆ ಮಾಡಲಾಗಿದೆ ಎನ್ನುವ ಚಿತ್ರಣ ಇದರಲ್ಲಿದೆ.
ಐತಿಹಾಸಿಕ ರಾಜಪಥದ ಸೆಂಟ್ರಲ್ ವಿಸ್ತಾದಲ್ಲಿ ಆಗಿರುವ ಬದಲಾವಣೆ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಡೀ ಪ್ರದೇಶದಲ್ಲಿ ಸಂಪೂರ್ಣವಾಗಿ ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಕೇಬಲ್‌ಗಳನ್ನು ಅಂಡರ್‌ಗ್ರೌಂಡ್‌ನಲ್ಲಿಯೇ ಅಳವಡಿಸಲಾಗಿದೆ.
ಪ್ರದೇಶದಲ್ಲಿ ಹೊಸ ರೀತಿಯ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಹಸಿ ಮತ್ತು ಒಣ ಕಸಗಳನ್ನು ಹಾಕಲು ಹೊಸ ಮಾದರಿಯ 162 ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ.
ಇನ್ನು ಸೆಂಟ್ರಲ್ ವಿಸ್ತಾದ ಉದ್ಯಾನವನದ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ಹಳೆಯ ಮಾದರಿಯ ವಿದ್ಯುತ್ ಕಂಬಗಳ ಬದಲಿಗೆ ಹೊಸ ಮಾದರಿಯ 915 ಕಂಬಗಳನ್ನು ಹಾಕಲಾಗಿದೆ.
ಭಾರತದಲ್ಲಿ ಸಾಮಾನ್ಯವಾಗಿ ಇರುವ ಚಕ್ರಕಾರದ ಮ್ಯಾನ್‌ಹೋಲ್‌ಗಳ ಬದಲಿಗೆ, 661 ಹೊಸ ಮ್ಯಾನ್‌ಹೋಲ್‌ಗಳನ್ನು ಚೌಕಾಕಾರದ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ.
ಸೆಂಟ್ರಲ್ ವಿಸ್ತಾದಲ್ಲಿ ಸೈನ್ ಬೋರ್ಡ್‌ಗಳು ಬದಲಾಗಿರುವ ಮಾದರಿ. ಕಡಿಮೆ ಸ್ಥಳವನ್ನು ಬಳಸಿ ಸೂಚ್ಯವಾಗಿ ಎಲ್ಲವನ್ನು ವಿವರಿಸುವ 114 ಸೈನ್‌ಬೋರ್ಡ್‌ಗಳನ್ನು ಇರಿಸಲಾಗಿದೆ.
ಸೆಂಟ್ರಲ್ ವಿಸ್ತಾದ ಆವರಣದಲ್ಲಿ ಕಾಲುವೆಗಳು ಬದಲಾವಣೆ ಆಗಿರುವ ರೀತಿ. 60 ಏರೇಟರ್‌ಗಳನ್ನು ಕಾಲುವೆಗಳ ನಿರ್ವಹಣೆ ಬಳಸಿಕೊಳ್ಳಲಾಗುತ್ತದೆ.
ಸೆಂಟ್ರಲ್ ವಿಸ್ತಾದ ಪ್ರಮುಖ ಸ್ಥಳವಾದ ರಾಜಪಥದ ಉದ್ದಕ್ಕೂ ಇರಿಸಲಾಗಿರುವ ಹೊಸ ಮಾದರಿಯ ಲೈಟ್ ಪೋಲ್‌ಗಳು. ಇಂಥ 133 ಲೈಟ್ ಪೋಲ್‌ಗಳನ್ನು ಅಳವಡಿಸಲಾಗಿದೆ.
ಆಕರ್ಷಕವಾಗಿ ವಿನ್ಯಾಸ ಮಾಡಲಾಗಿರುವ ಸೆಂಟ್ರಲ್ ವಿಸ್ತಾದ ವಾಕ್‌ವೇಗಳು. ಹಿಂದಿನ ವಾಕ್‌ವೇಗಳು ಹಾಗೂ ಈಗಿನ ವಾಕ್‌ವೇಗಳ ನಡುವಿನ ಬದಲಾವಣೆಯನ್ನು ಸ್ಪಷ್ಟವಾಗಿ ಇಲ್ಲಿ ಕಾಣಬಹುದು.
ಇಡೀ ಸೆಂಟ್ರಲ್ ವಿಸ್ತಾ ಆವರಣದಲ್ಲಿನ ಟ್ರೀ ಅವೆನ್ಯೂಗಳನ್ನು ಶೈಲಿಯನ್ನು ಬದಲಾವಣೆ ಮಾಡಿರುವ ರೀತಿ. ಯುರೋಪಿಯನ್ ಸ್ಟೈಲ್‌ನಲ್ಲಿ ಇದರ ವಿನ್ಯಾಸ ಮಾಡಲಾಗಿದೆ.
ಸೆಂಟ್ರಲ್ ವಿಸ್ತಾ ಅವೆನ್ಯೂದಲ್ಲಿ ಹಾಕಲಾಗಿರುವ ಆಕರ್ಷಕ ಕಲ್ಲು ಬೆಂಚುಗಳು. ಮೊದಲಿದ್ದ ಕಲ್ಲಿನ ಬೆಂಚುಗಳನ್ನು ಸಂಪೂರ್ಣವಾಗಿ ಇಲಲಿ ಬದಲಾಯಿಸಲಾಗಿದೆ.
16,500 ಮೀಟರ್‌ನ ಅಡ್ಡದಾರಿಗಳನ್ನು ಆವರಣದಲ್ಲಿ ನವೀಕರಣ ಮಾಡಲಾಗಿದೆ. ಅಭಿವೃದ್ಧಿ ಮಾಡಲಾಗಿರುವ ಈ ಅಡ್ಡದಾರಿಗಳ ಅಕ್ಕಪಕ್ಕದಲ್ಲಿ ಆಕರ್ಷಕ ಗಾರ್ಡನ್‌ಗಳನ್ನು ಕಾಣಬಹುದಾಗಿದೆ.
ಮಳೆ ಬಂದ ಸಂದರ್ಭದಲ್ಲಿ ಉದ್ಯಾನವನದಲ್ಲಿ ಎಲ್ಲಿಯೂ ನೀರು ನಿಂತು ಕೊಳಚೆಯಾಗದಂತೆ ಎಚ್ಚರ ವಹಿಸಲಾಗಿದೆ ಮೈಕ್ರೋ ಇರಿಗೇಷನ್ ಹಾಗೂ ಸ್ಟ್ರಾಮ್ ವಾಟರ್ ಸರ್ವೀಸಸ್ ಅನ್ನು ಬಳಸಲಾಗಿದೆ.
ಸೆಂಟ್ರಲ್ ವಿಸ್ತಾ ಆವರಣದಲ್ಲಿ ಹಿಂದಿದ್ದ ಹಾಗೂ ಈಗಿನ ಬೊಲ್ಲಾರ್ಡ್‌ಗಳು ಹಾಗೂ ಚೈನ್‌ಗಳು. ರಾಜಪಥದಲ್ಲಿ 987 ಬೊಲ್ಲಾರ್ಡ್‌ಗಳನ್ನು ಹಾಕಲಾಗಿದೆ.
ಸೆಂಟ್ರಲ್ ವಿಸ್ತಾದಲ್ಲಿ ಹಿಂದಿದ್ದ ಪಾಥ್‌ವೇಗಳ ದೂರ 94,600 ಸ್ಕ್ವೇರ್ ಮೀಟರ್ ಆಗಿದ್ದರೆ, ಹೊಸ ಗ್ರಾನೈಟ್ ಪಾಥ್‌ವೇ 1,10,457 ಸ್ಕ್ವೇರ್ ಮೀಟರ್ ಆಗಿದೆ.