ಭಾರತದಲ್ಲಿ ಹಕ್ಕಿ ಜ್ವರ; ಮೃಗಾಲಯದ ಹಕ್ಕಿಗಳನ್ನು ಕೊಲ್ಲಲು ಸೂಚಿಸಿದ ಆಡಳಿತ ಮಂಡಳಿ!
ಭಾರತದಲ್ಲಿ ಹಕ್ಕಿ ಜ್ವರ ಒಂದೊಂದೆ ರಾಜ್ಯವನ್ನು ಆವರಿಸುತ್ತಿದೆ. ಕಾಗೆಗಳ ಸಾವಿನಿಂದ ಆರಂಭಗೊಂಡ ಆತಂಕ ಇದೀಗ ಬಹುತೇಕ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದೆ. ಇದೀಗ ಮೃಗಾಲಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಮೃಗಾಲಯದ ಹಕ್ಕಿಗಳನ್ನು ಕೊಲ್ಲಲು ಸೂಚಿಸಲಾಗಿದೆ.

ಭಾರತದಲ್ಲಿ ಕೊರೋನಾ ವೈರಸ್ ಜೊತೆಗೆ ಇದೀಗ ಹಕ್ಕಿ ಜ್ವರ ಮತ್ತಷ್ಟು ಆತಂಕ ತಂದಿದೆ. ಒಂದೊಂದೆ ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ.

ಇದೀಗ ಕಾನ್ಪುರ ಮೃಗಾಯಲದಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಕಾನ್ಪುರ ಮೃಗಾಲಯದಲ್ಲಿದ್ದ ಕೆಲ ಹಕ್ಕಿಗಳು ಸತ್ತು ಬಿದ್ದಿದೆ. ಈ ಹಕ್ಕಿಗಳನ್ನು ಪರೀಕ್ಷೆ ಒಳಪಡಿಸಿದಾಗ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ಕಾನ್ಪುರ ಮೃಗಲಾಯ 15 ದಿನಗಳವರೆಗೆ ಮುಚ್ಚಲಾಗಿದೆ. ಇನ್ನು ಮೃಗಾಲಯದಲ್ಲಿ ವೈದ್ಯರ ತಂಡ ಠಿಕಾಣಿ ಹೂಡಿದ್ದು ಅಗತ್ಯ ವೈದ್ಯಕೀಯ ನೆರವು ನೀಡುತ್ತಿದ್ದಾರೆ.

ವೈದ್ಯರು, ಆಧಿಕಾರಗಳ ಸತತ ಪ್ರಯತ್ನದ ಹೊರತಾಗಿಯೂ ಕಾನ್ಪುರ ಮೃಗಾಲಯದಲ್ಲಿ ಹಕ್ಕಿ ಜ್ವರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ ಮೃಗಾಲಯ ಆಡಳಿತ ಮಂಡಳಿ ಎಲ್ಲಾ ಹಕ್ಕಿಗಳನ್ನು ಕೊಲ್ಲಲು ಸೂಚಿಸಿದೆ.

ಬಾತು ಕೋಳಿ, ಗಿಳಿ ಸೇರಿದಂತೆ ಕೆಲ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಕಾರಣ ಈ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಮೃಗಾಲಯ ಆಡಳಿತ ಮಂಡಳಿ ಸೂಚಿಸಿದೆ

ಮೊದಲು ಕಾಡು ಕೋಳಿ ಬಳಿಕ ಬಾತುಕೋಳಿ ಹಾಗೂ ಗಿಳಿಗಳನ್ನು ಕೊಲ್ಲಲಾಗುವುದು ಎಂದು ಮೃಗಾಲಯ ಆಡಳಿತ ಮಂಡಳಿ ಹೇಳಿದೆ. ಇದು ಅನಿವಾರ್ಯ ನಿರ್ಧಾರವಾಗಿದೆ. ನಮ್ಮ ಕರಳು ಕಿತ್ತು ಬರುತ್ತಿದೆ ಎಂದು ಮೃಗಲಾಯ ಅಧಿಕಾರಿಗಳು ಪಕ್ಷಿಗಳ ಕೊಲ್ಲುವ ನಿರ್ಧಾರ ಕುರಿತು ನೋವು ತೋಡಿಕೊಂಡಿದ್ದಾರೆ.

ಹಕ್ಕಿ ಜ್ವರ ಖಚಿತಗೊಂಡಿರುವ ಕಾರಣ ಮೃಗಾಲಯದ ಪ್ರೊಟೋಕಾಲ್ ಪ್ರಕಾರ ಈ ನಿರ್ಧಾರ ಬಿಟ್ಟು ಬೇರೆ ಮಾರ್ಗಗಳಿಲ್ಲ. ಸಾಕಿ ಬೆಳೆಸಿದ ಹಕ್ಕಿಗಳನ್ನು ಕೊಲ್ಲುವುದು ನಮಗೂ ಅತೀಯಾದ ನೋವಿನ ವಿಚಾರ ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

ಕಾನ್ಪುರ ಮೃಗಾಲಯದಲ್ಲಿರುವ ಇತರ ಪ್ರಾಣಿಗಳಿಗೆ ಕೋಳಿಗಳನ್ನು ಆಹಾರವಾಗಿ ನೀಡುವುದನ್ನು ನಿಲ್ಲಿಸಲು ಉತ್ತರ ಪ್ರದೇಶ ಸರ್ಕಾರ ಸೂಚಿಸಿದೆ. ಕೋಳಿ ಬದಲು ಇತರ ಆಹಾರ ನೀಡಲು ಸೂಚಿಸಲಾಗಿದೆ.