ಪ್ರಜ್ವಲ್ ರೇವಣ್ಣನಿಗಿದ್ದ ಮನೋ ವಿಕೃತಿ ಯಾವುದು? ಯಾಕೆ ಹೀಗಾಗುತ್ತೆ?
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಒಂದೆರಡಲ್ಲ, 2800ಕ್ಕೂ ಹೆಚ್ಚು ಇವೆ ಎಂದರೆ ಈತ ಅದೆಂಥಾ ವಿಕೃತಕಾಮಿಯಾಗಿರಬೇಡ? ಇದಕ್ಕೆ ಮನಃಶಾಸ್ತ್ರ ಏನನ್ನುತ್ತೆ?

ಹಾಸನ ಜೆಡಿಎಸ್ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ವಿಡಿಯೋ ಪ್ರಕರಣದ ನಂತರ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ದಾರೆ ಸಂಸದ ಪ್ರಜ್ವಲ್ ರೇವಣ್ಣ.
ಎರಡು ಪೆನ್ ಡ್ರೈವ್‌ಗಳಲ್ಲಿ ಸುಮಾರು 40 ಜಿಬಿಯಷ್ಟು 2900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ. 16ರಿಂದ 50 ವರ್ಷ ವಯಸ್ಸಿನ 500ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದರೆ ಇದೇನು ಕೇವಲ ದೌರ್ಜನ್ಯವಲ್ಲ, ಇದೊಂದು ಮನೋವಿಕೃತಿಯೇ ಸರಿ.
ವಿಡಿಯೋಗಳಲ್ಲಿ ಸರ್ಕಾರಿ ಅಧಿಕಾರಿಗಳು, ಮಾಡೆಲ್‌ಗಳು ಮಾತ್ರವಲ್ಲದೆ, ಮನೆಗೆಲಸದ ವಯಸ್ಸಾದ ಹೆಂಗಸರೂ ಇದ್ದಾರೆ. ಅಷ್ಟೇ ಅಲ್ಲ, ತನ್ನ ಅಶ್ಲೀಲವಾದ ಹಾಗೂ ಅನೈತಿಕ ವರ್ತನೆಯ ವಿಡಿಯೋವನ್ನು ಆತ ಸ್ವತಃ ತಾನೇ ಮಾಡಿಕೊಂಡಿದ್ದಾನೆ.
ವಿಕೃತಕಾಮಿ ಮಾತ್ರ ಇಷ್ಟೊಂದು ಜನ ಹೆಣ್ಣುಮಕ್ಕಳನ್ನು ಹೀಗೆ ಬಳಸಿಕೊಂಡು ವಿಡಿಯೋ ಮಾಡಿಕೊಳ್ಳಬಲ್ಲ. ಹಾಗಿದ್ದರೆ ಪ್ರಜ್ವಲ್ ರೇವಣ್ಣ ದೊಡ್ಡ ಸೈಕೋಪಾತ್ ಆಗಿರಬಹುದೇ? ಆತನಿಗಿರುವ ಮನೋ ವಿಕೃತಿ ಯಾವುದು?
ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಆಸ್ಟ್ರೇಲಿಯಾದಲ್ಲಿ ಅರ್ಧಂಬರ್ಧ ಮಾಸ್ಟರ್ಸ್ ಮಾಡಿ ಬಂದು ರಾಜಕೀಯಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ. ದೇಶದಲ್ಲಿ 2019ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಿರಿಯ ಸಂಸದರ ಪೈಕಿ ಒಬ್ಬ ಎನಿಸಿದ್ದ.
ಮಾಜಿ ಪ್ರಧಾನಿ ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳೇ ತುಂಬಿದ್ದ ಕುಟುಂಬದಿಂದ ಬಂದು, ಶಿಕ್ಷಿತನಾಗಿದ್ದೂ, ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಒಬ್ಬ ವ್ಯಕ್ತಿ ಹೀಗೆಲ್ಲ ಮಾಡಬಲ್ಲನೆಂದರೆ ಇದೊಂದು ಪರ್ಸನಾಲಿಟಿ ಡಿಸಾರ್ಡರ್ ಕೂಡಾ ಇರಬಹುದು.
ಪ್ರಜ್ವಲ್ ರೇವಣ್ಣನ ಈ ವಿಕೃತಿ ಮನಃಶಾಸ್ತ್ರಜ್ಞರಿಗೇ ಅಚ್ಚರಿ ಹುಟ್ಟಿಸುವಂತಿದೆ. ಸೈಕಾಲಜಿ ಪ್ರಕಾರ, ಲೈಂಗಿಕ ಕಿರುಕುಳವನ್ನು ಮಾಡುವ ಪುರುಷರು ಡಾರ್ಕ್ ಟ್ರಯಾಡ್ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
ಅಂದರೆ, ನಾರ್ಸಿಸಿಸಮ್(ಅತಿಯಾದ ಆತ್ಮರತಿ), ಮ್ಯಾಕಿಯಾವೆಲಿಯನಿಸಂ(ಮೋಸಗಾರ) ಮತ್ತು ಸೈಕೋಪಾತ್ ಲಕ್ಷಣಗಳು ಇವರಲ್ಲಿರುತ್ತವೆ. ಅವರು ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಒಲವು ತೋರುತ್ತಾರೆ ಮತ್ತು ಸಾಮಾನ್ಯವಾಗಿ ಮಹಿಳೆಯರ ಕಡೆಗೆ ಪ್ರತಿಕೂಲ ವರ್ತನೆಗಳನ್ನು ಹೊಂದಿರುತ್ತಾರೆ.
ಇಷ್ಟೆಲ್ಲ ವಿಕೃತಿಗಳನ್ನು ಮೆರೆದರೂ ಅವರಲ್ಲಿ ತಪ್ಪಿತಸ್ಥ ಭಾವನೆ ಇರುವುದಿಲ್ಲ. ಕೈಲಿದ್ದ ಅಧಿಕಾರ ಮತ್ತು ಹಣ ಗಂಡು ಆಹಂಕಾರವನ್ನು ಪೋಷಿಸಿದೆ. ಪ್ರಜ್ವಲ್ ಕೂಡಾ ಇಂಥ ವ್ಯಕ್ತಿತ್ವ ಸಮಸ್ಯೆ ಹೊಂದಿದಂತೆ ಕಾಣುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ