ಕಳಚುತ್ತಾ ಬೆಂಗಳೂರಿನ ನಂ.1 ಕಿರೀಟ, ಹೈದರಾಬಾದ್‌ನಲ್ಲಿ 450 ಎಕರೆ ಹೈಟೆಕ್ ಐಟಿ ಹಬ್
ತೆಲಂಗಾಣ ಸರ್ಕಾರ ತೆಗೆದುಕೊಂಡು ಒಂದ ನಿರ್ಧಾರ ಇದೀಗ ಬೆಂಗಳೂರನ್ನೇ ಹಿಂದಿಕ್ಕುವಂತೆ ಮಾಡುತ್ತಿದೆ. ಕಾರಣ ಹೈದರಾಬಾದ್‌ನಲ್ಲಿ ಇದೀಗ 450 ಎಕರೆಯಲ್ಲಿ ಹೊಸ ಹೈಟೆಕ್ ಸಿಟಿ ನಿರ್ಮಾಣ ಮಾಡಲಾಗುತ್ತಿದೆ. ಇದು ಐಟಿ ಹಬ್ ಆಗಿದ್ದು, ಬೆಂಗಳೂರಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಬೆಂಗಳೂರಿಗೆ ಕಾಂಪಿಟೇಶನ್
ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೇ ಜನಪ್ರಿಯವಾಗಿರು ಬೆಂಗಳೂರಿನಲ್ಲಿ ಹಲವು ಅಂತರಾಷ್ಟ್ರೀಯ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು, ಐಟಿ, ಸ್ಟಾರ್ಟ್ಅಪ್ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿದೆ. ಇದೀಗ ಬೆಂಗಳೂರಿನ ಐಟಿ ಬಿಟಿ ಸಿಟಿ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಹೈದರಾಬಾದ್ ಮುಂದಾಗಿದೆ. ತೆಲಂಗಾಣ ಸರ್ಕಾರ ಇದೀಗ ಹೈದರಾಬಾದ್‌ನಲ್ಲಿ 450 ಎಕರೆಯಲ್ಲಿ ಐಟಿ ಹಬ್ ನಿರ್ಮಾಣಕ್ಕೆ ಮುಂದಾಗಿದೆ. ಇದು ಹೈಟೆಕ್ ಸಿಟಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಐಟಿ ಹಬ್ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಹೊಸ ಐಟಿ ಹಬ್ ಆರಂಭಗೊಳ್ಳುತ್ತಿದೆ.
5 ಲಕ್ಷ ಉದ್ಯೋಗ
ರಂಗಾರೆಡ್ಡಿ ಜಿಲ್ಲೆಯ ಗಂಡಿಪೇಟೆ ಮಂಡಲದ ಪುಪ್ಪಾಲಗೂಡದಲ್ಲಿ ಮೊದಲ ಹಂತದಲ್ಲಿ 450 ಎಕರೆಯಲ್ಲಿ ಐಟಿ ನಾಲೆಡ್ಜ್ ಹಬ್ ಸ್ಥಾಪಿಸಲು ಮಂತ್ರಿಮಂಡಲ ಉಪಸಮಿತಿ ನಿರ್ಧರಿಸಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ನೇತೃತ್ವದಲ್ಲಿ ಮಂತ್ರಿಗಳು ದುದ್ದಿಳ್ಳ ಶ್ರೀಧರ್‌ಬಾಬು, ಪೊಂಗುಲೇಟಿ ಶ್ರೀನಿವಾಸರೆಡ್ಡಿ, ಸಿಎಸ್ ಶಾಂತಿಕುಮಾರಿ, ಕೈಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ್ದಾರೆ. 5 ಲಕ್ಷ ಯುವಕರಿಗೆ ಉದ್ಯೋಗ ಕೊಡುವ ಉದ್ದೇಶದಿಂದ 450 ಎಕರೆಯಲ್ಲಿ ಐಟಿ ನಾಲೆಡ್ಜ್ ಹಬ್ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಪುಪ್ಪಾಲಗೂಡದಲ್ಲಿ ಶಾಸಕರು, ಸಂಸದರು, ಐಎಎಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ವಿವಿಧ ಸಂಘಗಳಿಗೆ ಈ ಹಿಂದೆ ಸರ್ಕಾರ 200 ಎಕರೆ ಭೂಮಿಯನ್ನು ಹಂಚಿಕೆ ಮಾಡಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಮಿಯ ಪಕ್ಕದಲ್ಲೇ ಕೈಗಾರಿಕಾ ಮೂಲಸೌಕರ್ಯ ನಿಗಮಕ್ಕೆ ಸೇರಿದ 250 ಎಕರೆ ಭೂಮಿ ಇದ್ದು, ಐಟಿ ನಾಲೆಡ್ಜ್ ಹಬ್ ನಿರ್ಮಾಣಕ್ಕೆ ಒಟ್ಟು 450 ಎಕರೆ ಭೂಮಿ ಲಭ್ಯವಿದೆ. ಈ ಭೂಮಿಯನ್ನು ಐಟಿ ಹಬ್‌ಗಾಗಿ ಬಳಸಿಕೊಳ್ಳಲು ಚಿಂತಿಸಲಾಗುತ್ತಿದೆ.
ಭಟ್ಟಿ ವಿಕ್ರಮಾರ್ಕ
ಕಾಂಗ್ರೆಸ್ ಮುಖ್ಯಮಂತ್ರಿ ನೇದುರುಮಲ್ಲಿ ಜನಾರ್ದನ ರೆಡ್ಡಿ ಅವರ ಅವಧಿಯಲ್ಲಿ ಹೈಟೆಕ್ ಸಿಟಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದರ ಫಲವಾಗಿ ಹಣಕಾಸು ಜಿಲ್ಲೆ ರೂಪುಗೊಂಡಿತು. ಐಟಿ ಕ್ಷೇತ್ರದಲ್ಲಿನ ಪ್ರತಿ ಬದಲಾವಣೆಯಲ್ಲೂ ಹೈದರಾಬಾದ್ ಪಾಲ್ಗೊಂಡಿದೆ. ಈಗ ಎಐ ತಂತ್ರಜ್ಞಾನದೊಂದಿಗೆ ಬರುತ್ತಿರುವ ಬದಲಾವಣೆಗಳನ್ನು ಹೈದರಾಬಾದ್ ಐಟಿ ಕ್ಷೇತ್ರ ಅಳವಡಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ ಎಂದು ಮಂತ್ರಿಗಳ ಸಮಿತಿ ಹೇಳಿದೆ.