ಕಾಶ್ಮೀರಿ ಪಶ್ಮೀನಾದಿಂದ ಸುಂದರ್‌ಬನ್ ಜೇನುತುಪ್ಪದವರೆಗೆ, ಜಿ20 ನಾಯಕರಿಗೆ ನೀಡಿದ ಉಡುಗೊರೆಯ ಬಾಕ್ಸ್‌ನಲ್ಲಿ ಇದ್ದಿದ್ದೇನು?
ಕಾಶ್ಮೀರಿ ಪಶ್ಮಿನಾದಿಂದ ಹಿಡಿದು ಸುಂದರಬನ್ ಜೇನುತುಪ್ಪದವರೆಗೆ ಜಿ 20 ಶೃಂಗಸಭೆಗೆ ಆಗಮಿಸಿದ್ದ ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯ ಬಾಕ್ಸ್‌ಗಳನ್ನು ನೀಡಿದ್ದರು. ಈ ಬಾಕ್ಸ್‌ನಲ್ಲಿರುವ ವಸ್ತುಗಳನ್ನು ಆಯ್ಕೆಮಾಡುವಾಗ, ಅವು ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳೊಂದಿಗೆ ಜಗತ್ತನ್ನು ಬೆಳಗಿಸುವಂತೆ ವಿಶೇಷ ಕಾಳಜಿ ವಹಿಸಲಾಗಿದೆ.
ಹಿತ್ತಾಳೆಯ ಬ್ಯಾಂಡ್ ಹೊಂದಿದ್ದ ಶೀಶಮ್ ವುಡ್‌ನ ಪೆಟ್ಟಿಗೆ: ಪ್ರಧಾನಿ ನರೇಂದ್ರ ಮೋದಿ ಶೀಶಮ್ ವುಡ್‌ನಿಂದ ನಿರ್ಮಾಣ ಮಾಡಲಾಗಿದ್ದ ಪೆಟ್ಟಿಗೆಅನ್ನು ಗಿಫ್ಟ್ ಹ್ಯಾಂಪರ್ ಎನ್ನುವ ರೀತಿಯಲ್ಲಿ ಅತಿಥಿಗಳಿಗೆ ನೀಡಿದರು. ಇದು ಹಿತ್ತಾಳೆಯ ಬ್ಯಾಂಡ್‌ಅನ್ನು ಒಳಗೊಂಡಿತ್ತು. ಕರಕುಶಲದಿಂದ ತಯಾರಿಸಲಾದ ಈ ಪೆಟ್ಟಿಗೆಗೆ ವಿಶೇಷವಾದ ವಿನ್ಯಾಸ ಮಾಡಲಾಗಿದೆ.
Sheesham wood Chest
ಭಾರತೀಯ ಸಾಂಸ್ಕೃತಿಕ ಮತ್ತು ಜಾನಪದದಲ್ಲಿ ಪೆಟ್ಟಿಗೆ ವಿಶೇಷ ಸ್ಥಾನವನ್ನು ಹೊಂದಿದೆ. ಮೊದಲು ಇದನ್ನು ನಿಧಿ ಇಡಲು ಬಳಸಲಾಗುತ್ತಿತ್ತು. ಪ್ರಧಾನಿ ನೀಡಿದ ಉಡುಗೊರೆ ಎಷ್ಟು ಭವ್ಯವಾಗಿದೆ ಎಂದರೆ ಅದು ನಿಧಿಗಿಂತ ಕಡಿಮೆಯಿಲ್ಲ.
Kashmiri Pashmina
ಕಾಶ್ಮೀರಿ ಪಶ್ಮಿನಾ: ಇಡೀ ವಿಶ್ವದಲ್ಲಿಯೇ ಪ್ರಖ್ಯಾತವಾಗಿರುವ ಕಾಶ್ಮೀರಿ ಪಶ್ಮಿನಾ ಶಾಲುಗಳು ಅದಕ್ಕೆ ಬಳಸುವ ಐಷಾರಾಮಿ ಬಟ್ಟೆ ಹಾಗೂ ಅದನ್ನು ದೇಹದ ಮೇಲೆ ಹಾಕಿಕೊಂಡಾಗ ಉಂಟಾಗುವ ಬೆಚ್ಚಗಿನ ಭಾವದಿಂದ ಪ್ರಸಿದ್ಧಿಯಾಗಿದೆ. ಪಶ್ಮಿನಾ ಶಾಲ್ ಅನ್ನು ಅಪರೂಪದ ಬಟ್ಟೆಯಿಂದ ತಯಾರಿಸಲಾಗುತ್ತದೆ. ಈ ಉಣ್ಣೆಯನ್ನು ಚಾಂಗ್ತಂಗಿ ಮೇಕೆಯಿಂದ ಪಡೆಯಲಾಗುತ್ತದೆ. ಇದಕ್ಕಾಗಿ ಆಡಿನ ಕೂದಲು ಕತ್ತರಿಸುವುದಿಲ್ಲ. ಬಾಚಣಿಗೆಯಿಂದ ತೆಗೆಯಲಾಗುತ್ತದೆ. ಚಾಂಗ್ತಂಗಿ ಮೇಕೆ 14,000 ಅಡಿ ಎತ್ತರದಲ್ಲಿ ಮಾತ್ರ ಕಂಡುಬರುತ್ತದೆ. ಪಾಶ್ಮಿನಾ ಶಾಲುಗಳನ್ನು ಅತ್ಯಂತ ಹಳೆಯ ಪ್ರಕ್ರಿಯೆಗಳನ್ನು ಬಳಸಿಕೊಂಡು ನುರಿತ ಕುಶಲಕರ್ಮಿಗಳು ರಚಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗುತ್ತದೆ.
Jigrana Perfume
ಜಿಗ್ರಾನಾ ಸುಗಂಧ ದ್ರವ್ಯ: ಉತ್ತರ ಪ್ರದೇಶದ ಕನೌಜ್‌ನಲ್ಲಿ ಮಾತ್ರವೇ ಸಿಗುವಂಥದು ಜಿಗ್ರಾನಾ ಸುಗಂಧದ್ರವ್ಯ. ಇದು ಈ ಪ್ರದೇಶದ ಅತ್ಯಂತ ಶ್ರೇಷ್ಠ ಉತ್ಪಾದನೆ. ಇದನ್ನು ಶತಮಾನಗಳ ಹಳೆಯ ಸಂಪ್ರದಾಯದ ಪ್ರಕಾರ ತಯಾರಿಸಲಾಗುತ್ತದೆ. ಕುಶಲಕರ್ಮಿಗಳು ಮಲ್ಲಿಗೆ ಮತ್ತು ಗುಲಾಬಿಯಂತಹ ಹೂವುಗಳಿಂದ ಈ ಸುಗಂಧವನ್ನು ತಯಾರಿಸುತ್ತಾರೆ.
sundarban multiflora mangrove honey
ಸುಂದರಬನ್ ಮಲ್ಟಿಫ್ಲೋರಾ ಮ್ಯಾಂಗ್ರೋವ್ ಜೇನು: ಸುಂದರಬನ್ಸ್ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯ ಹೊಂದಿರುವ ತಾಣ. ಇದು ಬಂಗಾಳಕೊಲ್ಲಿಯಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಸಂಗಮದಿಂದ ರೂಪುಗೊಂಡ ನದಿ ಮುಖಜಭೂಮಿ. ಇಲ್ಲಿನ ಕಾಡು ಜೇನುನೊಣಗಳಿಂದ ಸ್ಥಳೀಯ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜೇನು ತೆಗೆಯುತ್ತಾರೆ. ಮ್ಯಾಂಗ್ರೋವ್ ಜೇನು ಕಡಿಮೆ ಜಿಗುಟು ಹೊಂದಿರುತ್ತದೆ. ಇದು ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡ್ಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯ ಜೇನು ಎನ್ನಲಾಗುತ್ತದೆ.
Araku Coffee
ಅರಕು ಕಾಫಿ: ಅರಕು ಕಾಫಿ ಪ್ರಪಂಚದ ಮೊದಲ ಟೆರೊಯರ್ ಮ್ಯಾಪ್ ಮಾಡಿದ ಕಾಫಿಯಾಗಿದೆ. ಇದನ್ನು ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿ ಸಾವಯವ ತೋಟಗಳಲ್ಲಿ ಬೆಳೆಯಲಾಗುತ್ತದೆ. ರೈತರು ಯಂತ್ರಗಳು ಅಥವಾ ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಕಾಫಿ ಬೆಳೆಯುತ್ತಾರೆ. ಅರಕು ಕಾಫಿಯ ಪರಿಮಳ ಬಹಳ ವಿಶೇಷ. ಅರಕು ಕಾಫಿ ಅದರ ವಿಶಿಷ್ಟ ವಿನ್ಯಾಸ ಮತ್ತು ಉತ್ತಮ ರುಚಿಗೆ ಹೆಸರುವಾಸಿಯಾಗಿದೆ.
Peko Darjeeling and Nilgiri Tea
ಪೆಕೊ ಡಾರ್ಜಿಲಿಂಗ್ ಮತ್ತು ನೀಲಗಿರಿ ಟೀ: ಡಾರ್ಜಿಲಿಂಗ್ ಚಹಾವು ವಿಶ್ವದ ಅತ್ಯಂತ ದುಬಾರಿ ಚಹಾವಾಗಿದೆ. ಇದನ್ನು 3000-5000 ಅಡಿ ಎತ್ತರದಲ್ಲಿರುವ ಡಾರ್ಜಿಲಿಂಗ್‌ನ ಮಂಜಿನ ಬೆಟ್ಟಗಳಲ್ಲಿರುವ ಚಹಾ ತೋಟಗಳಿಂದ ಕಿತ್ತ ಎಲೆಗಳಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ ನವಿರಾದ ಚಿಗುರುಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ನೀಲಗಿರಿ ಚಹಾವನ್ನು ದಕ್ಷಿಣ ಭಾರತದಲ್ಲಿ ಬೆಳೆಯಲಾಗುತ್ತದೆ. ಇದನ್ನು 1000-3000 ಅಡಿ ಎತ್ತರದಲ್ಲಿ ಬೆಳೆಯಲಾಗುತ್ತದೆ.
kashmiri saffron
ಕಾಶ್ಮೀರಿ ಕೇಸರಿ: ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥ. ಕಾಶ್ಮೀರಿ ಕೇಸರಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದರ ಬೆಲೆ ತುಂಬಾ ಹೆಚ್ಚಿದ್ದು ಇದನ್ನು ಕೆಂಪು ಚಿನ್ನ ಎಂದೂ ಕರೆಯುತ್ತಾರೆ. ಕೇಸರಿ ಕೃಷಿಯ ಸಂಪೂರ್ಣ ಕೆಲಸವನ್ನು ಕೈಯಿಂದ ಮಾಡಲಾಗುತ್ತದೆ. ಒಂದು ಔನ್ಸ್ ಕೇಸರಿ ಪಡೆಯಲು ಸಾವಿರಾರು ಹೂವುಗಳನ್ನು ಕೈಯಿಂದ ಕೊಯ್ಲು ಮಾಡಲಾಗುತ್ತದೆ.
khadi clothes
ಖಾದಿ ಬಟ್ಟೆ: ಖಾದಿ ಬಟ್ಟೆಗಳು ಪರಿಸರ ಸ್ನೇಹಿ. ಇದನ್ನು ಹತ್ತಿ, ರೇಷ್ಮೆ, ಸೆಣಬು ಅಥವಾ ಉಣ್ಣೆಯಿಂದ ನೇಯಬಹುದು. ಇದು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ.
coin box
ನಾಣ್ಯ ಫಲಕ: ಭಾರತದ G20 ಅಧ್ಯಕ್ಷ ಸ್ಥಾನದ ಸ್ಮರಣಾರ್ಥ, PM ನರೇಂದ್ರ ಮೋದಿ ಅವರು 26 ಜುಲೈ 2023 ರಂದು ವಿಶೇಷ ಜಿ20 ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿದರು. ಅವರ ವಿನ್ಯಾಸಗಳು ಭಾರತದ ಜಿ20 ಲೋಗೋ ಮತ್ತು 'ವಸುಧೈವ ಕುಟುಂಬಕಂ' ವಿಷಯದ ಮೇಲೆ ಇವೆ.