ವೆಂಟಿಲೇಟರ್‌ನಲ್ಲಿ ಪ್ರಣಬ್ ಮುಖರ್ಜಿ, ಮೆದುಳಿನ ಸರ್ಜರಿ ಯಶಸ್ವಿ!
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಬೆಳಗ್ಗೆ ತಮಗೆ ಕೊರೋನಾ ಸೋಂಕು ಇರುವುದಾಗಿ ಸ್ವತಃ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದರು, ಇದರ ಬೆನ್ನಲ್ಲೇ ಶೀಘ್ರವಾಗಿ ಗುಣಮುಖರಾಗುವಂತೆ ಮಾಜಿ ರಾಷ್ಟ್ರಪತಿಗೆ ಅನೇಕ ರಾಜಕೀಯ ನಾಯಕರು ಹಾರೈಸಿದ್ದರು. ಆದರೀಗ ಮುಖರ್ಜಿಯವರಿಗೆ ಮೆದುಳಿನ ಸರ್ಜರಿ ನಡೆದಿದ್ದು, ಅವರ ಪರಿಸ್ಥಿತಿ ನಾಜೂಕಾಗಿದೆ ಎನ್ನಲಾಗಿದೆ. ಅಲ್ಲದೇ ಅವರು ವೆಂಟಿಲೇಟರ್‌ನಲ್ಲಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ನಡೆಸಿರುವ ಮೆದುಳಿನ ಆಪರೇಷನ್ ಯಸ್ವಿಯಾಗಿದೆ.
ಲಭ್ಯವಾದ ಮಾಹಿತಿ ಅನ್ವಯ ಈ ಸರ್ಜರಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆಯಲು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗಳ ಮೂಲಗಳ ಪ್ರಕಾರ ಆರ್ಮಿ ಆಸ್ಪತ್ರೆಯಲ್ಲಿ ಸದ್ಯ ಅವರನ್ನು ವೆಂಟಿಲೇಟರ್ ಸಪೋರ್ಟ್‌ನಲ್ಲಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಸರ್ಜರಿಗಿಂತ ಮೊದಲು ಪ್ರಣಬ್ ಮುಖರ್ಜಿಯವರ ಕೊರೋನಾ ಟೆಸ್ಟ್ ಕೂಡಾ ಪಾಸಿಟಿವ್ ಬಂದಿದೆ.
84 ವರ್ಷದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಟ್ವಿಟರ್ ಖಾತೆಯಲ್ಲಿ ತಮ್ಮ ಕೊರೀನಾ ಟೆಸ್ಟ್ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿರುವುದಾಗಿ ಸ್ವತಃ ಹೇಳಿದ್ದರು.
ಬೇರೊಂದು ಕಾರಣದಿಂದ ಆಸ್ಪತ್ರೆಗೆ ಬಂದಿದ್ದೆ. ಆದರೆ ಅಲ್ಲಿ ಕೊರೋನಾ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದಿದೆ. ತಮ್ಮನ್ನು ಸಂಪರ್ಕಿಸಿದವರೆಲ್ಲರಿಗೂ ಐಸೋಲೇಷನ್‌ನಲ್ಲಿರುವಂತೆ ಮನವಿ ಮಾಡಿಕೊಂಡಿದ್ದರು ಹಾಗೂ ಕೊರೋನಾ ಟೆಸ್ಟ್ ನಡೆಸುವಂತೆಯೂ ಹೇಳಿದ್ದರು.
ಪ್ರಣಬ್ ಮುಖರ್ಜಿಯವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ದೇಶದ ಅನೇಕ ರಾಜಕೀಯ ನಾಯಕರು ಟ್ವೀಟ್ ಮಾಡಿ ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದರು.
ಈಗಾಗಲೇ ರಕ್ಷಣಾ ಸಚಿವ ಆರ್ಮಿ ಆಸ್ಪತ್ರೆಗೆ ಭೇಟಿ ನೀಡಿ ಪ್ರಣಬ್ ಮುಖರ್ಜಜಿಯವರ ಆರೋಗ್ಯ ವಿಚಾರಿಸಿದ್ದಾರೆ