ಮಸೂದೆ ಹಿಂಪಡೆಯಲ್ಲ, ಸುಪ್ರೀಂ ಕೋರ್ಟ್‌ಗೆ ಹೋಗಿ; ಈ ಮಾತಿನಿಂದ ವಿಫಲವಾಯ್ತಾ ಸಂಧಾನ?
First Published Jan 4, 2021, 8:53 PM IST
ಕೇಂದ್ರ ಸರ್ಕಾರ ಮತ್ತು ರೈತರ ಜೊತೆಗಿನ 7ನೇ ಸುತ್ತಿನ ಸಂಧಾನ ವಿಫಲಗೊಂಡಿದೆ. ಈ ಮೂಲಕ ರೈತ ಪ್ರತಿಭಟನೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕೇಂದ್ರ ಸಚಿವರು ಹಾಗೂ 41 ರೈತ ಸಂಘಟನೆಗಳ ಮುಖಂಡರ ನಡೆಸಿದ ಮಾತುಕತೆ ವಿಫಲಕ್ಕೆ ಕಾರಣವಾದ ಪ್ರಮುಖ ಅಂಶ ಏನು ? ಇಲ್ಲಿದೆ ವಿವರ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ 7ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದಕ್ಕೆ ಕಾರಣವೇನು ಅನ್ನೋ ಕುತೂಹಲ ಸಭೆಯ ಪ್ರಮುಖಾಂಶಗಳು ಉತ್ತರ ನೀಡುತ್ತಿದೆ.

ರೈತರು ಕೇಂದ್ರದ 3 ಕೃಷಿ ಮಸೂದೆ ಹಿಂಪಡೆಯಲೇಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?