ರಾಂಚಿಯಲ್ಲಿ ಇಟಲಿಯಂತಹ ಪರಿಸ್ಥಿತಿ: ಸ್ಮಶಾನದಲ್ಲಿ ಜಾಗವಿಲ್ಲ, ರಸ್ತೆಯಲ್ಲೇ ಚಿತೆ!

First Published Apr 12, 2021, 4:31 PM IST

ದೇಶಾದ್ಯಂತ ಕೊರೋನಾ ಮಹಾಮಾರಿ ಮತ್ತೊಮ್ಮೆ ಅಟ್ಟಹಾಸ ಬೀರುತ್ತಿದ್ದು, ಸದ್ಯದ ಪರಿಸ್ಥಿತಿ ಮೊದಲನೇ ಅಲೆಗಿಂತಲೂ ಗಂಭೀರವಾಗಿದೆ. ಮಹಾಮಾರಿಯ ಎರಡನೇ ಅಲೆ ಅನೇಕ ಜೀವಗಳನ್ನು ಬಲಿ ಪಡೆಯುತ್ತಿದೆ. ಹೀಗಿರುವಾಗ ಝಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಭಾನುವಾರ ಇಟಲಿಯಂತಹ ಪರಿಸ್ಥಿತಿ ಕಂಡು ಬಂದಿದೆ. ಇಲ್ಲಿ ಎಲ್ಲಾ ಸ್ಮಶಾನ ಹಾಗೂ ರುದ್ಧಭೂಮಿ ಶವಗಳಿಂದ ಭರ್ತಿಯಾಗಿದ್ದು, ಅಂತಿಮ ಸಂಸ್ಕಾರ ನೆರವೇರಿಸಲು ಬಂದ ಜನರಿಗೆ ತಮ್ಮ ಪ್ರೀತಿ ಪಾತ್ರರನ್ನು ಸುಡಲೂ ಮುಕ್ತಿಧಾಮದಲ್ಲಿ ಸ್ಥಳ ಸಿಗಲಿಲ್ಲ. ಹಲವಾರು ತಾಸು ಕಾದ ಬಳಿಕ ಬೇರೆ ವಿಧಿ ಇಲ್ಲದೇ, ಶವದೊಂದಿಗೆ ಮರಳಿದ್ದಾರೆ. ಇದಾದ ಬಳಿಕ ಕಂಡು ಬಂದ ದರಶ್ದಯವೊಂದು ಬಹಳ ಭಯಾನಕವಾಗಿತ್ತು. ಹೌದು ಕೆಲ ಮಂದಿ ರಸ್ತೆಯಲ್ಲೇ ಚಿತೆ ನಿರ್ಮಿಸಿ ಶವ ಸುಡಲಾರಂಭಿಸಿದ್ದಾರೆ.