MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • News
  • India News
  • ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!

ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!

ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದ ಗರ್ಭಿಣಿ ಬಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗೆ ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೀವಮಾನವಿಡೀ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುವುದಾಗಿ ಘೋಷಣೆ ಮಾಡಿದೆ.

2 Min read
Author : Sathish Kumar KH
Published : Aug 21 2024, 03:57 PM IST
Share this Photo Gallery
  • FB
  • TW
  • Linkdin
  • Whatsapp
15

ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಸಮೀಪದಲ್ಲಿ ಯಾವುದೇ ಆಸ್ಪತ್ರೆಗಳು ಲಭ್ಯವಿರಲಿಲ್ಲ. ಆದರೆ, ದೇವರು ಆ ಬಸ್ಸಿನಲ್ಲಿ ಮಹಿಳಾ ಕಂಡಕ್ಟರ್ ಕರ್ತವ್ಯದಲ್ಲಿದ್ದರು. ಜೊತೆಗೆ, ಅದೇ ಬಸ್ಸಿನಲ್ಲಿ ನರ್ಸ್ ಕೂಡ ಪ್ರಯಾಣ ಮಾಡುತ್ತಿದ್ದರು. ಹೀಗಾಗಿ, ತುರ್ತು ವೈದ್ಯಕೀಯ ಸೌಲಭ್ಯ ಸಿಗದ ಪರಿಸ್ಥಿತಿಯಲ್ಲಿ, ಇತರೆ ಪ್ರಯಾಣಿಕರನ್ನು ಕೆಳಗಿಳಿಸಿ ಮಹಿಳಾ ಕಂಡಕ್ಟರ್ ಹಾಗೂ ನರ್ಸ್ ಸೇರಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇದರ ಪರಿಣಾಮವಾಗಿ ಗರ್ಭಿಣಿ ಬಸ್ಸಿನಲ್ಲಿ ಮುದ್ದಾದ ಆರೋಗ್ಯವಂತ ಹೆಣ್ಣು ಮಗಿವಿಗೆ ಜನ್ಮ ನೀಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25

ನಿನ್ನೆ (ಸೋಮವಾರ) ಗದ್ವಾಲ ಡಿಪೋಗೆ ಸೇರಿದ ಆರ್ ಟಿಸಿ ಬಸ್ ವನಪರ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ನಡೆದಿದೆ. ರಾಖಿ ಪೌರ್ಣಮಿಯಂದು ವನಪರ್ತಿಯ ತುಂಬು ಗರ್ಭಿಣಿ ಸಂಧ್ಯಾ ತನ್ನ ಸಹೋದರರಿಗೆ ರಾಖಿ ಕಟ್ಟಲು ಹೋಗುತ್ತಿದ್ದರು. ಆದರೆ, ಬಸ್‌ನಲ್ಲಿದ್ದಾಗ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಸಮೀಪದಲ್ಲಿ ಆಸ್ಪತ್ರೆ ಇಲ್ಲದ ಕಾರಣ ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿ ಅದರಲ್ಲಿಯೇ ಹೆರಿಗೆ ಮಾಡಿಸಲಾಗಿದೆ.

35

ಬಸ್ ಕಂಡಕ್ಟರ್ ಭಾರತಿ ಹಾಗೂ ಪ್ರಯಾಣಿಕರೊಬ್ಬರಾದ ನರ್ಸ್ ಅಲಿವೇಲು ಮಂಗಮ್ಮ ಅವರು ಸಂಧ್ಯಾ ಅವರಿಗೆ ಜನ್ಮ ನೀಡಿದ್ದಾರೆ. ಬಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ ಇಬ್ಬರ ಜೀವ ಉಳಿಸಿದ ಕಂಡಕ್ಟರ್ ಹಾಗೂ ನರ್ಸ್ ರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಆರ್‌ಟಿಸಿ ಎಂಡಿ ಸಜ್ಜನರ್‌ಗೆ ತಲುಪಿತ್ತು. ಹೀಗಾಗಿ ಆ ಮಗುವಿನ ಜೊತೆಗೆ ಕಂಡಕ್ಟರ್ ಭಾರತಿ ಮತ್ತು ನರ್ಸ್ ಅಲಿವೇಲು ಅವರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಬಸ್ಸಿನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೀವನ ಪರ್ಯಂತ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ತೆಲಂಗಾಣದ ಡೀಲಕ್ಸ್ ಮತ್ತು ಸೂಪರ್ ಐಷಾರಾಮಿ ಬಸ್‌ಗಳಲ್ಲಿ ಒಂದು ವರ್ಷದವರೆಗೆ ಕಂಡಕ್ಟರ್ ಮತ್ತು ನರ್ಸ್ ಕೂಡ ಉಚಿತವಾಗಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು. ಜೊತೆಗೆ ಇದೇ ವೇಳೆ ಟಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್ ಅವರು, ಕಂಡಕ್ಟರ್ ಭಾರತಿ ಮತ್ತು ಅಲಿವೇಲು ಅವರಿಗೆ ಒಂದು ವರ್ಷದ ಉಚಿತ ಬಸ್ ಪಾಸ್‌ಗಳನ್ನು ಹಸ್ತಾಂತರಿಸಿದರು.

45

ಇನ್ನುಮುಂದೆ ಟಿಎಸ್‌ಆರ್‌ಟಿಸಿ ಬಸ್ಸಿನಲ್ಲಿ ಜನಿಸಿದ ಯಾವುದೇ ಹೆಣ್ಣು ಮಗುವಿಗೆ ಆರ್‌ಟಿಸಿ ಬಸ್ಸಿನಲ್ಲಿ ಜೀವಮಾನದ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡಲು ಆರ್‌ಟಿಸಿ ಸಂಸ್ಥೆ ನಿರ್ಧರಿಸಿದೆ ಎಂದು ಸಜ್ಜನರ್ ಹೇಳಿದರು. ಹಾಗಾಗಿ ಗದ್ವಾಲ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಈ ಅಪರೂಪದ ಅವಕಾಶ ಕಲ್ಪಿಸಲಾಗಿದೆ ಎಂದರು.

55

ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸಜ್ಜನರ್ ಅವರು, ಬಸ್ ಚಾಲಕ ಅಂಜಿ, ಕಂಡಕ್ಟರ್ ಭಾರತಿ ಮತ್ತು ನರ್ಸ್ ಅಲಿವೇಲು ಮಂಗಮ್ಮ ಅವರನ್ನು ಹೈದರಾಬಾದ್‌ ಕರೆಸಿಕೊಂಡು ಸನ್ಮಾನಿಸಿದರು. ಬಸ್ ಭವನದಲ್ಲಿ ಟಿಎಸ್ ಆರ್ ಟಿಸಿಯ ಉನ್ನತಾಧಿಕಾರಿಗಳ ನಡುವೆ ಸನ್ಮಾನಿಸಲಾಯಿತು. ಆರ್‌ಟಿಸಿ ಚಾಲಕ ಮತ್ತು ಕಂಡಕ್ಟರ್‌ಗೆ ನಗದು ಉಡುಗೊರೆ ನೀಡಿದ ಎಂಡಿ ಅವರು ಗದ್ವಾಲ ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮುರಳಿಕೃಷ್ಣ ಅವರಿಗೆ ಶಿಶು ಮತ್ತು ನರ್ಸ್‌ಗೆ ಉಚಿತ ಪ್ರಯಾಣದ ಪಾಸ್‌ಗಳನ್ನು ನೀಡುವಂತೆ ಸೂಚಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
26 ದಿನದ ಮಗುವನ್ನು ಕೈಯಲ್ಲಿ ಹಿಡಿದು ಇಂಟರ್ವ್ಯೂ ಕೊಠಡಿಗೆ ಹೋದ ಮಹಿಳೆ ಮುಂದೆ ಏನಾಯ್ತು ಗೊತ್ತಾ?
Recommended image2
38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್: ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ
Recommended image3
'ಕಳ್ಳನಿಗೊಂದು ಪಿಳ್ಳೆ ನೆಪ' ನಾನು ಭಾರತಕ್ಕೆ ಬರಲು ಲಂಡನ್‌ ಬಿಡ್ತಿಲ್ಲ, ಸಾಲಗಾರ ಅನ್ಬೇಡಿ: ವಿಜಯ್ ಮಲ್ಯ ಸರಣಿ ಟ್ವೀಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved