ಪ್ರೇಮಿಗಳಿಗೆ ಬಾನಂಗಳದಲ್ಲಿ ಉಡುಗೊರೆ ನೀಡಿದ ಏರೋ ಇಂಡಿಯಾ: ಚಿತ್ತಾರ ಕಣ್ತುಂಬಿಕೊಂಡ ಜನ
ಬೆಂಗಳೂರು (ಫೆ.14): ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ 14ನೇ ಏರೋ ಇಂಡಯಾ- 2023 ವೈಮಾನಿಕ ಪ್ರದರ್ಶನದಲ್ಲಿ ಇಂದು ಪ್ರೇಮಿಗಳ ದಿನಾಚರಣೆ ಅಂಗವಾಗಿ ಬಾನಂಗಳದಲ್ಲಿ ಮೂರು ಯುದ್ಧ ವಿಮಾನಗಳು ಹೃದಯದ ಚಿತ್ರವನ್ನು ಬಿಡಿಸಿವೆ. ಈ ಮೂಲಕ ಜಗತ್ತಿನ ಎಲ್ಲ ಪ್ರೇಮಿಗಳಿಗೆ ಪ್ರೇಮಿಗಳ ದಿನಾಚರಣೆಯ ಉಡುಗೊರೆಯೊಂದನ್ನು ನೀಡಿದೆ.ಏರೋ ಶೋ 2023 ಎರಡನೇ ದಿನದ ಏರ್ ಶೋ ಇಂದು ಸ್ಪೀಡ್ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಕ್ಷಣಾ ಸಚಿವರು ಸಮ್ಮೇಳನ ಹಾಗೂ ಸೆಮಿನಾರ್ ನಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೂ ವೈಮಾನಿಕ ಪ್ರದರ್ಶನ ನಡೆಸಲಾಯಿತು. ಸ್ವದೇಶಿ, ದೇಶೀಯ ಹಾಗೂ ವಿದೇಶಿ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಅಬ್ಬರಿಸಿದವು. ಸತತ ಒಂದೂವರೆ ಗಂಟೆ ಕಾಲ ತಪಾಸ್ , ಹಾರ್ವರ್ಡ್, ಡಕೋಟ , ಎಫ್ 16, ಎಫ್35, ಎಲ್.ಸಿ.ಹೆಚ್.ಎಲ್.ಸಿ.ಎ ,ಎಲ್ ಯುಹೆಚ್, ಹೆಚ್ ಎಡ್ಲೂಕೆ, ಎಸ್.ಯು.30, ಹೆಚ್ ಟಿಟಿ 40, ರಫೆಲ್ , ಎ.ಎಲ್ .ಹೆಚ್ ಎಂ.ಕೆಐ, ಬಿ/1ಬಿ, ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ನೀಡಿದವು.

ಏರೋ ಇಂಡಿಯಾ ೨೦೨೩ ವೈಮಾನಿಕ ಪ್ರದರ್ಶನದಲ್ಲಿ ಇಂದು ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹಾರ್ಟ್ ಶೇಪ್ ಬಿಡಿಸಿ ಪ್ರೇಮಿಗಳಿಗೆ ಉಡುಗೊರೆ ನೀಡಲಾಯಿತು.
ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಹಾರಾಟದ ಮೂಲಕ ಚಿತ್ತಾರವನ್ನು ಬಿಡಿಸುವುದನ್ನು ಲಲನೆಯರು ಕಣ್ತುಂಬಿಕೊಂಡರು. ಜೊತೆಗೆ, ಮೊಬೈಲ್‌ನಲ್ಲಿ ಸೆರೆ ಹಿಡಿದರು.
ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೂ ಸ್ವದೇಶಿ, ದೇಶೀಯ ಹಾಗೂ ವಿದೇಶಿ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಅಬ್ಬರಿಸಿದವು.
ಮಧ್ಯಾಹ್ನದ ವೇಳೆ ಆಗಸದಲ್ಲಿ ಲೋಹದ ಹಕ್ಕಿಗಳಿಂದ ರಚಿತವಾಗುತ್ತಿದ್ದ ದೃಶ್ಯಗಳನ್ನು ಕಣ್ತಿಂಬಿಕೊಳ್ಳುವಾಗ ಸೂರ್ಯನ ಕಿರಣಗಳು ಕಣ್ಣಿಗೆ ತಾಕದಂತೆ ಬಹುತೇಕರು ಛತ್ರಿಯನ್ನು ಬಳಸಿದರು.
ಯುದ್ಧ ವಿಮಾನಗಳು ಆಗಸದಲ್ಲಿ ವೇಗವಾಗಿ ಸಾಗುವಾಗ ಎದುರುಬದುರಾಗಿ ಹತ್ತಿರದಲ್ಲಿಯೇ ಹಾದು ಹೋಗುತ್ತಿರುವ ದೃಶ್ಯಗಳು ನೋಡುಗರ ಎದೆ ಝಲ್ಲೆನಿಸುವಂತಿತ್ತು.
ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳು ಬಾನಂಗಳದಲ್ಲಿ ವಿವಿಧ ರೀತಿಯ ಚಿತ್ತಾರಗಳನ್ನು ಬಿಡಿಸಿ ನೋಡುಗರ ಸಂತಸವನ್ನು ಹೆಚ್ಚಿಸಿದವು.
ಐದು ಯುದ್ಧ ವಿಮಾನಗಳು ಪರಸ್ಪರ ಎದುರು ಬದುರು ಹಾಗೂ ಅಡ್ಡಾದಿಡ್ಡಿಯಾಗಿ ಚಲಿಸುವ ಮೂಲಕ ನೋಡುಗರನ್ನು ಮೈನವಿರೇಳಿಸುವಂತೆ ಮಾಡಿದವು.
ಆಕಾಶದಲ್ಲಿ ಸತತ ಒಂದೂವರೆ ಗಂಟೆ ಕಾಲ ತಪಾಸ್ , ಹಾರ್ವರ್ಡ್, ಡಕೋಟ , ಎಫ್ 16, ಎಫ್35, ಎಲ್.ಸಿ.ಹೆಚ್.ಎಲ್.ಸಿ.ಎ ,ಎಲ್ ಯುಹೆಚ್, ಹೆಚ್ ಎಡ್ಲೂಕೆ, ಎಸ್.ಯು.30, ಹೆಚ್ ಟಿಟಿ 40, ರಫೆಲ್ , ಎ.ಎಲ್ .ಹೆಚ್ ಎಂ.ಕೆಐ, ಬಿ/೧ಬಿ, ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ನೀಡಿದವು.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ತುಂಬಾ ವಿಶಾಲವಾದ ಬಯಲು ವಾತಾವರಣ ಇದ್ದುದರಿಂದ ಎಲ್ಲಿಯೂ ನೆರಳು ಇರಲಿಲ್ಲ. ಹೀಗಾಗಿ, ಏರೋ ಇಂಡಿಯಾ ಲೋಗೋದ ಬಳಿ ಕುಳಿತು ನೆರಳಿನ ಆಶ್ರಯ ಪಡೆದರು.
ವೈಮಾನಿಕ ಪ್ರದರ್ಶನದ ವೇಳೆ ಆಕಾಶದಲ್ಲಿ ಹಾರಾಟ ನಡೆಸಿದ ನಂತರ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಆಗುವಂತೆ ನಿಲ್ಲಿಸಲಾಗಿತ್ತು.
ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ 14ನೇ ಏರೋ ಇಂಡಯಾ- 2023 ವೈಮಾನಿಕ ಪ್ರದರ್ಶನದಲ್ಲಿ ವೀಕ್ಷಕರ ತಲೆಯ ಮೇಲೆ ನಿರ್ಮಾಣವಾದ ಚಿತ್ತಾರ.