ಹಸಿಮೆಣಸಿನ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು, ಇಲ್ಲಿ ಓದಿ

First Published Feb 2, 2021, 3:05 PM IST

ಭಾರತದ ಅಡುಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ವಸ್ತು ಎಂದರೆ ಅದು ಹಸಿಮೆಣಸಿನಕಾಯಿ. ಇಲ್ಲಿ ನಂಬಲಸಾಧ್ಯವಾದ ವೈವಿಧ್ಯಮಯ ಶ್ರೇಣಿಯ ಮೆಣಸಿನ ಕಾಯಿ ಸಿಗುತ್ತವೆ. ಇವೆಲ್ಲವೂ ಅಡುಗೆಯಲ್ಲಿ ತಮ್ಮದೇ ರುಚಿಯನ್ನು ನೀಡುತ್ತದೆ. ಕೆಂಪು ಮೆಣಸಿನಕಾಯಿ ಸಾಮಾನ್ಯವಾಗಿ ಮೃದುವಾಗಿರುತ್ತದೆ, ಆದರೆ ಹಸಿಮೆಣಸಿನಕಾಯಿಗಳು ತೀಕ್ಷ್ಣವಾದ ಮತ್ತು ಖಾರವಾಗಿದ್ದು, ಅಡುಗೆಗೆ ಕಿಕ್ ನೀಡುತ್ತದೆ. ಹಸಿಮೆಣಸು ಖಾರವಾಗಿದ್ದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಇವು ಆರೋಗ್ಯಕ್ಕೂ ಸಹ ಉಪಯೋಗಿಯಾಗಿದೆ. ಈ ಬಗ್ಗೆ ತಿಳಿದುಕೊಂಡಿರದೆ ಇದ್ದರೆ ಈಗಲೇ ಹಸಿಮೆಣಸಿನ ಪ್ರಯೋಜನಗಳನ್ನು ತಿಳಿದುಕೊಳ್ಳಿ.