ನ್ಯೂಸ್ ಪೇಪರ್ ನಲ್ಲಿರುವ ನಾಲ್ಕು ಬಣ್ಣದ ಡಾಟ್ಸ್ ಅರ್ಥವೇನು?

ನ್ಯೂಸ್ ಪೇಪರನ್ನು ನಾವು ಪ್ರತಿ ದಿನ ಬಳಸ್ತೇವೆ. ಆದ್ರೆ ಈ ನ್ಯೂಸ್ ಪೇಪರ್ ನಲ್ಲಿರುವ ಕೆಲ ವಿಷ್ಯಗಳನ್ನು ಸೂಕ್ಷ್ಮವಾಗಿ ಗಮನಿಸೋದಿಲ್ಲ. ಅದ್ರಲ್ಲಿ ನಾಲ್ಕು ಚುಕ್ಕಿ ಕೂಡ ಸೇರಿದೆ. ಅದರ ಅರ್ಥವೇನು ಎಂಬುದನ್ನು ನಾವಿಂದು ಹೇಳ್ತೇವೆ
 

Four colors printed at the bottom of the newspaper pages roo

ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ವಸ್ತುಗಳನ್ನು ಬಳಸುತ್ತೇವೆ. ಆದ್ರೆ ಅದ್ರ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ. ಟೂತ್ ಪೇಸ್ಟ್ನಿಂದ ಹಿಡಿದು ಬ್ಲೇಡ್ ಆಕಾರದವರೆಗೆ ನಾವು ತಿಳಿದುಕೊಳ್ಳುವ ವಿಷ್ಯ ಸಾಕಷ್ಟಿದೆ. ಅದ್ರಲ್ಲಿ ನ್ಯೂಸ್ ಪೇಪರ್ (Newspaper) ಕೂಡ ಸೇರಿದೆ. ಪ್ರತಿ ದಿನ ನಾವು ಪೇಪರ್ ಓದುತ್ತೇವೆ. ಪೇಪರ್ ಕೆಳಗಿರುವ ಬಣ್ಣ ಬಣ್ಣದ ನಾಲ್ಕು ಡಾಟ್ಸ್ (Dots) ಗಳನ್ನು ಕೂಡ ನೀವು ನೋಡಿರ್ತೀರಿ. ಆದ್ರೆ ಈ ಡಾಟ್ಸ್ ಏನನ್ನು ಸೂಚಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ನಾವಿಂದು ಪೇಪರ್ ಕೊನೆಯಲ್ಲಿ ಈ ನಾಲ್ಕು ಬಣ್ಣಗಳ ಚುಕ್ಕಿಯ ಅರ್ಥವೇನು ಎಂಬುದನ್ನು ನಿಮಗೆ ಹೇಳ್ತೇವೆ. 

ಪೇಪರ್ ಕೆಳಭಾಗದಲ್ಲಿರುವ ನಾಲ್ಕು ಬಣ್ಣದ ಚುಕ್ಕೆಗಳನ್ನು ನೋಂದಣಿ (Registration) ಗುರುತುಗಳು ಅಥವಾ ಕ್ರಾಪ್ ಮಾರ್ಕ್ಸ್ (Crop Marks) ಎಂದು ಹೇಳಲಾಗುತ್ತದೆ. ವಿಭಿನ್ನ ಬಣ್ಣಗಳ ಪರಿಪೂರ್ಣ ಹೊಂದಾಣಿಕೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ. ಪೇಪರ್ ಕೊನೆಯಲ್ಲಿ ಕೆಂಪು (Red), ಹಳದಿ (Yellow), ನೀಲಿ (Blue) ಮತ್ತು ಕಪ್ಪು (Black) ಬಣ್ಣದ ಚುಕ್ಕಿ ಇರೋದನ್ನು ನೀವು ಪ್ರತಿ ದಿನ ನೋಡಿರ್ತೀರಿ. ಆದ್ರೆ ಅದ್ರ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಈ ಚುಕ್ಕೆಗಳ ಸಮೃದ್ಧತೆಯು ನಿಖರವಾದ ಬಣ್ಣ ಮುದ್ರಣ ಮತ್ತು ಬಣ್ಣ ಮಿಶ್ರಣದಲ್ಲಿ ಸಹಾಯ ಮಾಡುತ್ತದೆ. ಈ ಬಣ್ಣದ ಚುಕ್ಕೆಗಳು ಮುದ್ರಣದ ಸರಿಯಾದ ಸ್ಥಾನ ಮತ್ತು ದಿಕ್ಕನ್ನು ಸೂಚಿಸಲು ಸಹಾಯ ಮಾಡುತ್ತದೆ. ಇದು ಸರಿಯಾದ ಮುದ್ರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುದ್ರಣದ ಸಮಯದಲ್ಲಿ ಬಣ್ಣದ ಸ್ಥಿರತೆ ಮತ್ತು ಹೊಂದಾಣಿಕೆಯನ್ನು ಪರೀಕ್ಷಿಸಲು ಈ ಚುಕ್ಕೆಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಅತ್ಯುತ್ತಮ ಮುದ್ರಣ ಗುಣಮಟ್ಟವನ್ನು ಒದಗಿಸುತ್ತದೆ ಮತ್ತು ಓದುಗರಿಗೆ ಸ್ಪಷ್ಟತೆಯನ್ನು ನೀಡುತ್ತದೆ.

ತೀವ್ರವಾದ ಮಲಬದ್ಧತೆಗೆ ಕಾರಣವಾಗುವ 7 ಸಾಮಾನ್ಯ ಆಹಾರಗಳು

ಪುಟವನ್ನು ಗಾತ್ರಕ್ಕೆ ಕತ್ತರಿಸಲು ಕ್ರಾಪ್ ಮಾರ್ಕ್ ಉಪಯುಕ್ತವಾಗಿದೆ. ಇದರಿಂದಾಗಿ ಮುದ್ರಣ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಬಹುದಾಗಿದೆ. ಈ ಗುರುತುಗಳನ್ನು ಟ್ರಿಮ್ ಮಾರ್ಕ್ಸ್ ಆಗಿ ಬಳಸಲಾಗುತ್ತದೆ. ಇದು ಮುದ್ರಿತ ಪುಟಗಳನ್ನು ಹೇಗೆ ಕತ್ತರಿಸಬೇಕೆಂದು ಸೂಚಿಸುತ್ತದೆ. ಇದರಿಂದ ಅಂತಿಮ ಮುದ್ರಿತ ಪೇಪರ್ ಆಕಾರ ಸರಿಯಾಗಿ ಬರುತ್ತದೆ. 

ಹೊಸ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ ದೊಮ್ಮರಾಜುಗೆ ಗರ್ಲ್‌ಫ್ರೆಂಡ್‌ ಇದ್ದಾಳಾ?

ಪೇಪರ್ ಪುಟಗಳ ಕೆಳಭಾಗದಲ್ಲಿರುವ ನಾಲ್ಕು ಚುಕ್ಕೆಗಳನ್ನು ಸಿಎಂವೈಕೆ (CMYK) ಎಂದು ಕರೆಯಲಾಗುತ್ತದೆ. ಇದರ ಪೂರ್ಣ ಹೆಸರು ಸಯಾನ್, ಮೆಜೆಂತಾ, ಹಳದಿ, ಕೀ. ಇವುಗಳು ಮುದ್ರಣ ಪ್ರಕ್ರಿಯೆಯಲ್ಲಿ ಬಳಸಲಾಗುವ ನಾಲ್ಕು ಬಣ್ಣಗಳನ್ನು ಸೂಚಿಸುತ್ತವೆ. ಸಯಾನ್ ನೀಲಿ ಬಣ್ಣವನ್ನು ಪ್ರತಿನಿಧಿಸುತ್ತದೆ. ಮೆಜೆಂತಾ ಗುಲಾಬಿಯನ್ನು ಪ್ರತಿನಿಧಿಸುತ್ತದೆ. ಹಳದಿ, ಹಳದಿ ಬಣ್ಣವನ್ನು ಪ್ರತಿನಿಧಿಸುತ್ತದೆ ಮತ್ತು ಕೀ, ಕಪ್ಪು ಬಣ್ಣವನ್ನು ಪ್ರತಿನಿಧಿಸುತ್ತದೆ. ಸಿಎಂವೈಕೆ ಮುದ್ರಣ ಪ್ರಕ್ರಿಯೆಯಲ್ಲಿ, ನಾಲ್ಕು ಬಣ್ಣಗಳ ಮಿಶ್ರಣವನ್ನು ರಚಿಸುವ ಮೂಲಕ ವಿವಿಧ ಬಣ್ಣಗಳನ್ನು ಮುದ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಉತ್ತಮ ಗುಣಮಟ್ಟ ಮತ್ತು ವೈವಿಧ್ಯತೆಯನ್ನು ಸಾಧಿಸಬಹುದು. ಕನ್ನಡ ಪತ್ರಿಕೆ ಮಾತ್ರವಲ್ಲ, ಇಂಗ್ಲೀಷ್, ಹಿಂದಿ ಸೇರಿದಂತೆ ಎಲ್ಲ ಭಾಷೆಯ ಪೇಪರ್ನ ಕೊನೆಯಲ್ಲಿ ನೀವು ಈ ಚುಕ್ಕಿಗಳನ್ನು ನೋಡಬಹುದಾಗಿದೆ. 

Latest Videos
Follow Us:
Download App:
  • android
  • ios