ಬಿಸಿಲಲ್ಲಿ ನಿಂತ್ರೆ ಸೀನು ಬರುತ್ತಾ? ಅಲರ್ಜಿ ಆಗಿರಬಹುದಾ?
ಸೀನು ಬರುವ ಹಾಗಾಗಿ ಅದು ಬರದಿದ್ದರೆ ತುಂಬಾನೆ ಡಿಸ್ಟರ್ಬ್ ಆಗುತ್ತೆ ಅಲ್ವಾ? ಸೀನುವಿಕೆ ಸಂಪೂರ್ಣವಾಗಿ ಹೊರಬರಲು ಸೂರ್ಯನನ್ನು ನೋಡಿ ಎಂದು ಹಿರಿಯರು ಹೇಳೋದನ್ನು ನೀವು ಕೇಳಿರಬಹುದು. ಆದರೆ ನೀವು ಬಿಸಿಲಿನಲ್ಲಿ ಹೊರಗೆ ಹೋದ ತಕ್ಷಣ ನಿರಂತರವಾಗಿ ಸೀನುತ್ತಲೇ ಇದ್ದರೆ ಏನು ಮಾಡೋದು? ಬಿಸಿಲಿನಲ್ಲಿ ಹೊರಗೆ ಹೋದ ಕೆಲವೇ ಸೆಕೆಂಡಿನಲ್ಲಿ ಸೀನು ಬರಲು ಪ್ರಾರಂಭಿಸಿದರೆ, ಅನೇಕ ಜನರು ಇದನ್ನು ಅಲರ್ಜಿ ಎಂದು ಪರಿಗಣಿಸುತ್ತಾರೆ, ಆದರೆ ಇದು ಅಲರ್ಜಿಯಲ್ಲ.
ವರದಿ ಪ್ರಕಾರ, ನಿರಂತರ ಸೀನುವಿಕೆ (Sneezing) ಫೋಟಿಕ್ ಸ್ನಿಜ್ ರಿಫ್ಲೆಕ್ಸ್ ಎಂಬ ಸಿಂಡ್ರೋಮ್‌ನಿಂದ ಉಂಟಾಗುತ್ತೆ. ಇದರಲ್ಲಿ ಸೀನು ಬೆಳಕಿನ ಕಡೆ ನೋಡೋದ್ರಿಂದ ಬರಲು ಪ್ರಾರಂಭಿಸುತ್ತೆ. ಅನೇಕ ಜನರು ಈ ಅಸ್ವಸ್ಥತೆ ಹೊಂದಿದ್ದಾರೆ. ಕೆಲವು ಜನರು ಅದರ ಬಗ್ಗೆ ಸಾಕಷ್ಟು ಅಸಮಾಧಾನಗೊಳ್ಳುತ್ತಾರೆ. ಇದಕ್ಕೆ ಎ.ಸಿ.ಎಚ್.ಒ ಎಂಬ ಮತ್ತೊಂದು ಸಿಂಡ್ರೋಮ್ ಕೂಡ ಕಾರಣವಾಗಿರಬಹುದು. ಈ ಎರಡು ಸಿಂಡ್ರೋಮ್ಸ್ ಬಗ್ಗೆ ತಿಳಿದುಕೊಳ್ಳೋಣ.
ಫೋಟಿಕ್ ಸ್ನೀಸ್ ರಿಫ್ಲಕ್ಸ್ (Photic Sneeze Reflex)
ಇದು ರೋಗವಲ್ಲ. ಒಬ್ಬ ವ್ಯಕ್ತಿಯು ಕತ್ತಲೆಯ ಸ್ಥಳದಿಂದ ಹೊರಬಂದು ಇದ್ದಕ್ಕಿದ್ದಂತೆ ಬೆಳಕು ಅಥವಾ ಸೂರ್ಯನನ್ನು ನೋಡಿದಾಗ, ಇದ್ದಕ್ಕಿದ್ದಂತೆ ಸೀನು ಬರಲು ಪ್ರಾರಂಭಿಸುತ್ತೆ. ಬ್ರೈಟ್ ಲೈಟ್ ಬಿದ್ದ ತಕ್ಷಣ, ಕಣ್ಣುಗಳ ನರ ಮೆದುಳನ್ನು ಸಂಕೇತಿಸುತ್ತೆ ಮತ್ತು ರಿಯಾಕ್ಷನ್ಗಾಗಿ ಸೀನಲು ಪ್ರಾರಂಭಿಸುತ್ತೆ. ಈ ಸ್ಥಿತಿಯನ್ನು ಫೋಟಿಕ್ ಸ್ನಿಜ್ ರಿಫ್ಲಕ್ಸ್ ಎಂದು ಕರೆಯಲಾಗುತ್ತೆ.
10 ರಿಂದ 35% ರಷ್ಟು ಜನರು ಈ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ. ಫೋಟಿಕ್ ಸ್ನಿಜ್ ರಿಫ್ಲಕ್ಸ್ ನ ರೋಗಲಕ್ಷಣ ವಿಶೇಷವಾಗಿ ಮನೆಯಲ್ಲಿ ಒಬ್ಬರಲ್ಲಿ ಕಂಡು ಬಂದರೆ ಇತರ ಸದಸ್ಯರಿಗೂ ಈ ಸಮಸ್ಯೆ ಹರಡುವ ಸಾಧ್ಯತೆ ಇದೆ.
ACHOO ಸಿಂಡ್ರೋಮ್ (ACHOO Syndrome)
ಸೂರ್ಯನಿಂದ ಸೀನಲು ಎರಡನೆಯ ಕಾರಣವೆಂದರೆ ACHOO ಸಿಂಡ್ರೋಮ್. ಇದರ ವೈಜ್ಞಾನಿಕ ಹೆಸರು ಆಟೋಸೋಮಲ್ ಡೆಮಿನೆಂಟಲ್ ಕಂಪಲ್ಸಿವ್ ಹೆಲಿಯೋ -ಒಪ್ತಾಲ್ಮಿಕ್ ಔಟ್ ಬರ್ಸ್ಟ್. ಅಂಕಿಅಂಶಗಳ ಪ್ರಕಾರ, ಈ ಸಮಸ್ಯೆ 10 ರಲ್ಲಿ ಎರಡರಿಂದ ಮೂರು ಜನರಲ್ಲಿ ಕಾಣಬಹುದು.
ಒಬ್ಬ ವ್ಯಕ್ತಿ ಸೀನಿದಾಗ, ಡಯಾಫ್ರಮ್ (Diaphragm)ಇದ್ದಕ್ಕಿದ್ದಂತೆ ಗಣನೀಯವಾಗಿ ಕುಗ್ಗುತ್ತೆ. ಇದು ಸಾಕಷ್ಟು ಬ್ಯಾಕ್ಟೀರಿಯಾಗಳು ಒಂದೇ ಸಮಯದಲ್ಲಿ ದೇಹದಿಂದ ಹೊರಬರಲು ಕಾರಣವಾಗುತ್ತೆ, ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತೆ.
ಸೂರ್ಯನ ನೋಡಿ ಸೀನುವ ಸಮಯದಲ್ಲಿ, ನರವ್ಯೂಹದ (Nervous sytem) ಮೂಲಕ ಮೆದುಳನ್ನು ತಲುಪುವ ಸಂಕೇತದ ಪ್ರಕ್ರಿಯೆಯು ವೇಗಗೊಳ್ಳಲು ಪ್ರಾರಂಭಿಸುತ್ತೆ. ಇದು ನರವ್ಯೂಹದ ಮೇಲೆ ಪರಿಣಾಮ ಬೀರುತ್ತೆ ಮತ್ತು ಒಂದೇ ಬಾರಿಗೆ ಸಾಕಷ್ಟು ಸೀನುವಿಕೆಗೆ ಕಾರಣವಾಗುತ್ತೆ