Party Hangover ಇನ್ನೂ ಇಳಿದಿಲ್ವಾ? ಆಫೀಸ್‌ಗೂ ಹೋಗಲೂ ತೊಂದರೆ ಕೊಡುತ್ತಿದ್ದರೆ ಹೀಗ್ ಮಾಡಿ
ಬರ್ತ್ ಡೇ, ನ್ಯೂ ಇಯರ್, ಲವ್ ಸಕ್ಸಸ್, ಲವ್ ಫೈಲ್ಯುವರ್, ಮದುವೆ ಸೆಟ್… ಕಾರಣ ಏನೇ ಇರ್ಲಿ, ಜನ ಪಾರ್ಟಿ ಮಾಡದೆ ಸೆಲೆಬ್ರೇಟ್ ಮಾಡೋದು ತುಂಬಾ ಕಡಿಮೆ. ಅದರಲ್ಲೂ ಡ್ರಿಂಕ್ಸ್ ಪಾರ್ಟಿ ಇದ್ದೇ ಇರುತ್ತೆ. ಜನರು ಹೆಚ್ಚಾಗಿ ಆಲ್ಕೋಹಾಲ್ ಸೇವಿಸುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ. ಆಲ್ಕೋಹಾಲ್ ಮತ್ತು ಇತರ ಮಾದಕದ್ರವ್ಯಗಳ ಸೇವನೆಯು ಆರೋಗ್ಯದ ಮೇಲೆ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಬೀರಬಹುದು.ಈ ಹ್ಯಾಂಗ್ ಓವರ್ ನಿಂದ ಹೊರ ಬರಲು ಇಲ್ಲಿದೆ ಉಪಾಯ.
ಯಾವುದೇ ಪಾರ್ಟಿಯಲ್ಲಿ ನೀವು ಆಲ್ಕೋಹಾಲ್ ಸೇವಿಸಿದರೆ, ನೀವು ಎಷ್ಟು ಕುಡಿದಿದ್ದೀರಿ, ಅದರ ಪ್ರಮಾಣವನ್ನು ನೆನಪಿನಲ್ಲಿಡಿ. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ, ಹ್ಯಾಂಗೋವರ್ ಉಂಟಾಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಅನೇಕ ಸಂದರ್ಭಗಳಲ್ಲಿ, ಇದು ಆರೋಗ್ಯಕ್ಕೆ ಗಂಭೀರ ಸಮಸ್ಯೆ ಉಂಟುಮಾಡಬಹುದು. ನೀವು ಆಲ್ಕೋಹಾಲ್ ನ ಹ್ಯಾಂಗೋವರ್ (hangover) ಹೊಂದಿದ್ದೀರಿ ಎಂದು ಹೇಗೆ ತಿಳಿಯುವುದು ಮತ್ತು ಅದನ್ನು ಸುಲಭವಾಗಿ ಗುಣಪಡಿಸುವುದು ಹೇಗೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಆರೋಗ್ಯ ತಜ್ಞರು ಏನು ಹೇಳುತ್ತಾರೆ?
ನೀವು ಸಣ್ಣ ಪ್ರಮಾಣದಲ್ಲಿ ಮದ್ಯಪಾನ (alcohol) ಮಾಡುತ್ತಿದ್ದರೂ, ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅನ್ನೋದು ಸುಳ್ಳಲ್ಲ. ಆಲ್ಕೋಹಾಲ್ ನಲ್ಲಿರುವ ಪದಾರ್ಥಗಳು ಯಕೃತ್ತಿನಂತಹ ಅಂಗಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಹಾಗಾಗಿ ಪಾರ್ಟಿ ಮಾಡುವಾಗ ಆರೋಗ್ಯವನ್ನು ನಿರ್ಲಕ್ಷ್ಯಿಸಬಾರದು.
ಆಲ್ಕೊಹಾಲ್ ನಿಂದ ಆರೋಗ್ಯಕ್ಕೆ ಹಾನಿಯಾಗುತ್ತೆ (effect on health) ಅಂತ ತಿಳಿದಿದ್ದರೂ, ಜನರು ಆಚರಣೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮರೆಯುತ್ತಾರೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಹ್ಯಾಂಗೋವರ್ ಗಳು ಅನೇಕ ಸಂದರ್ಭಗಳಲ್ಲಿ ತೀವ್ರವಾಗಿರಬಹುದು, ಆದ್ದರಿಂದ ಅದರ ರೋಗಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಮತ್ತು ಅದನ್ನು ಗುಣಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ.
ಹ್ಯಾಂಗೋವರ್ ಗುರುತಿಸುವುದು ಹೇಗೆ?
ಹ್ಯಾಂಗೋವರ್ ಗೆ ಕಾರಣವಾಗುವ ಆಲ್ಕೋಹಾಲ್ ಸೇವನೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹ್ಯಾಂಗೋವರ್ ಕಾರಣದಿಂದಾಗಿ, ಜನರು ತೀವ್ರವಾದ ತಲೆನೋವು, ಒಣ ಗಂಟಲು, ವಾಕರಿಕೆ ಮತ್ತು ಮೂರ್ಛೆಯಂತಹ ಸಮಸ್ಯೆಗಳನ್ನು ಹೊಂದಬಹುದು. ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸಬಾರದು, ಈ ಕಾರಣದಿಂದಾಗಿ, ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಈಗಾಗಲೇ ಮಧುಮೇಹದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಹ್ಯಾಂಗ್ ಓವರ್ ಗಂಭೀರ ರೋಗ ಲಕ್ಷಣಗಳನ್ನು ಹೊಂದಿರಬಹುದು, ಇದು ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು (blood sugar level) ಕಡಿಮೆ ಮಾಡುತ್ತದೆ, ಇದನ್ನು ಆರೋಗ್ಯಕ್ಕೆ ಗಂಭೀರ ಸ್ಥಿತಿ ಎಂದು ಪರಿಗಣಿಸಲಾಗಿದೆ.
ಹ್ಯಾಂಗೋವರ್ ಅನ್ನು ತೆಗೆದುಹಾಕುವುದು ಹೇಗೆ?
ನೀವು ಹ್ಯಾಂಗೋವರ್ ಲಕ್ಷಣ ನೋಡಿದಾಗ ಮೊದಲು ಆಲ್ಕೋಹಾಲ್‌ನಿಂದ ದೂರವಿರಿ. ಹ್ಯಾಂಗೋವರ್ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ (dehydration problem) ಉಂಟುಮಾಡಬಹುದು, ಅದನ್ನು ತಪ್ಪಿಸಲು ಸಾಧ್ಯವಾದಷ್ಟು ನೀರು ತೆಗೆದುಕೊಳ್ಳಿ. ದೇಹದಿಂದ ವಿಷ ಹೊರಹಾಕಲು ಮತ್ತು ದೇಹವನ್ನು ಹೈಡ್ರೇಟ್ ಮಾಡಲು ನೀರು ಕುಡಿಯೋದು ಉತ್ತಮ. ನೀವು ಜ್ಯೂಸ್, ಎಳನೀರು ಮತ್ತು ಸೂಪ್ ಸಹ ಕುಡಿಯಬಹುದು. ಇದಲ್ಲದೆ, ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ, ಉತ್ತಮ ನಿದ್ರೆ ಮಾಡಿ, ಇದು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನು ಟ್ರೈ ಮಾಡಿ ನೋಡಿ
ಬಾಳೆಹಣ್ಣು ತಿನ್ನಿ- ಬಾಳೆಹಣ್ಣುಗಳು ಪೊಟ್ಯಾಷಿಯಮ್‌ನ ಉತ್ತಮ ಮೂಲ. ದೇಹದ ಎಲೆಕ್ಟ್ರೋಲೈಟ್ ಗಳನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಕಡಿಮೆ ಎಲೆಕ್ಟ್ರೋಲೈಟ್ ಮಟ್ಟದಿಂದಾಗಿ, ಆಯಾಸ, ತಲೆನೋವು, ವಾಕರಿಕೆ, ಸ್ನಾಯು ಸೆಳೆತ ಮತ್ತು ಶಕ್ತಿಯ ಕೊರತೆಯಂತಹ ಸಮಸ್ಯೆ ಉಂಟಾಗುತ್ತದೆ, ಈ ಟೈಮ್ ಲ್ಲಿ ಬಾಳೆಹಣ್ಣನ್ನು ತಿಂದರೆ ಹೆೆಚ್ಚು ಪರಿಣಾಮಕಾರಿ.
ಲಿಂಬೆರಸ ಕುಡಿಯಿರಿ (lemon juice) :
ಹ್ಯಾಂಗೋವರ್ ಕಡಿಮೆ ಮಾಡಲು ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಆಲ್ಕೋಹಾಲ್ ನಶೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸಿಟ್ರಿಕ್ ಹಣ್ಣುಗಳನ್ನು ಸೇವಿಸುವುದು ಸಹ ಪ್ರಯೋಜನಕಾರಿಯಾಗಿದೆ.
ಕಾರ್ಬೋಹೈಡ್ರೇಟ್ (carbohydrates) ಸೇವನೆ
ಹ್ಯಾಂಗೋವರ್ ಕಡಿಮೆ ಮಾಡಲು ಕಾರ್ಬೋಹೈಡ್ರೇಟ್ ಸೇವನೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಸಾಮಾನ್ಯವಾಗಿ ಆಯಾಸ ಮತ್ತು ದೌರ್ಬಲ್ಯದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತೆ.
espressos
ಕಾಫಿ ಕುಡಿಯಿರಿ (drink coffee): ಕಾಫಿ ಅಥವಾ ಚಹಾ ಕುಡಿಯುವುದರಿಂದ ಹ್ಯಾಂಗೋವರ್ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಹ್ಯಾಂಗೋವರ್ ಗಳಿಂದಾಗಿ ಆಯಾಸ ಮತ್ತು ತಲೆನೋವನ್ನು ನಿವಾರಿಸಲು ಇದು ಬೆಸ್ಟ್. ಆದಾಗ್ಯೂ, ಕೆಫೀನ್‌ಯುಕ್ತ ಪಾನೀಯಗಳು ಮೂತ್ರ ವರ್ಧಕಗಳಾಗಿವೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಅದರ ಅತಿಯಾದ ಸೇವನೆಯು ನಿಮ್ಮನ್ನು ಹೆಚ್ಚು ನಿರ್ಜಲೀಕರಣಗೊಳಿಸುತ್ತದೆ.
ಜೇನುತುಪ್ಪ ಸೇವಿಸಿ (honey): ಜೇನುತುಪ್ಪವು ಆಲ್ಕೋಹಾಲ್ ನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಜೇನುತುಪ್ಪ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಹಾಗಾಗಿ ಹ್ಯಾಂಗ್ ಓವರ್ ಆದಾಗ ಜೇನುತುಪ್ಪ ಕುಡಿಯೋದನ್ನು ಮರೆಯಬೇಡಿ.
ಹ್ಯಾಂಗೋವರ್ ಅನ್ನು ತೆಗೆದುಹಾಕಲು ಶುಂಠಿ
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಶುಂಠಿಯು ಹ್ಯಾಂಗ್ ಓವರ್ ನಿವಾರಿಸುವ ಗುಣಗಳನ್ನು ಹೊಂದಿದೆ. ಶುಂಠಿಯು ಆಲ್ಕೋಹಾಲ್ ಅನ್ನು ಬಹಳ ಬೇಗನೆ ಜೀರ್ಣಿಸಿಕೊಳ್ಳುತ್ತದೆ, ಇದು ಹ್ಯಾಂಗೋವರ್ ಬೇಗನೆ ಕಡಿಮೆ ಮಾಡಲು ಕಾರಣವಾಗುತ್ತದೆ.
ಪುದೀನ ಕೂಡ ಪರಿಣಾಮಕಾರಿ:
ಹ್ಯಾಂಗೋವರ್ ತೊಂದರೆಗೀಡಾಗಿದ್ದರೆ, ಬಿಸಿ ನೀರಿನಲ್ಲಿ ಪುದೀನದ 3-4 ಎಲೆಗಳನ್ನು ಹಾಕುವ ಮೂಲಕ ನೀವು ಪರಿಹಾರ ಪಡೆಯಬಹುದು. ಪುದೀನವು ಹೊಟ್ಟೆಯ ತೊಂದರೆಗಳನ್ನು ತೆಗೆದು ಹಾಕುತ್ತದೆ ಮತ್ತು ಕರುಳುಗಳನ್ನು ಸಡಿಲಗೊಳಿಸುತ್ತದೆ. ಹ್ಯಾಂಗೋವರ್ ನಿವಾರಿಸಲು ಪುದೀನಾ ಪರಿಣಾಮಕಾರಿ ಔಷಧಿಯಾಗಿದೆ.