MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಈ ದಿನ ಜನಿಸಿದವರು ಬಾಲ್ಯದಲ್ಲಿ ಬಡವರಾಗಿದ್ರೂ, ಯೌವ್ವನದಲ್ಲಿ ಐಷಾರಾಮಿ ಜೀವನ ನಡೆಸ್ತಾರೆ

ಈ ದಿನ ಜನಿಸಿದವರು ಬಾಲ್ಯದಲ್ಲಿ ಬಡವರಾಗಿದ್ರೂ, ಯೌವ್ವನದಲ್ಲಿ ಐಷಾರಾಮಿ ಜೀವನ ನಡೆಸ್ತಾರೆ

ಸಂಖ್ಯಾ ಶಾಸ್ತ್ರದ ಪ್ರಕಾರ ಯಾರೆಲ್ಲಾ ಈ ನಾಲ್ಕು ದಿನಾಂಕಗಳಂದು ಜನಿಸಿರುತ್ತಾರೋ, ಅವರು ಬಾಲ್ಯದಲ್ಲಿ ಬಡತನ ನೋಡಿದ್ರೂ, ಯೌವ್ವನದಲ್ಲಿ ಐಷಾರಾಮಿ ಜೀವನ ನಡೆಸ್ತಾರೆ.  

2 Min read
Author : Pavna Das
| Updated : May 13 2025, 09:54 AM IST
Share this Photo Gallery
  • FB
  • TW
  • Linkdin
  • Whatsapp
17

ಸಂಖ್ಯಾಶಾಸ್ತ್ರದ (Numerology) ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಅವನ ಮೂಲ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಪ್ರತಿಯೊಂದು ಮೂಲ ಸಂಖ್ಯೆಯು ಆಳುವ ಗ್ರಹವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.

27

ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ, 1 ರಿಂದ 9 ರವರೆಗಿನ ಮೂಲಾಂಕಗಳಿವೆ (Radix) ಮತ್ತು ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ಉತ್ತಮವಾದ ಹಾಗೂ ಕೆಟ್ಟ ಗುಣಗಳಿರುತ್ತವೆ. ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಹೋರಾಟದ ಜೀವನವನ್ನು ಹೊಂದಿರುತ್ತಾರೆ. ಅವರ ಬಾಲ್ಯವು ಬಡತನ ಮತ್ತು ಕಷ್ಟಗಳಲ್ಲಿ ಕಳೆಯುತ್ತದೆ ಆದರೆ ಅವರ ಯೌವನದಲ್ಲಿ ಅವರು ಜೀವನದ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ.
 

Related Articles

Related image1
ಈ ದಿನಗಳಲ್ಲಿ ಹುಟ್ಟಿದವರು ಬಿಸಿನೆಸ್‌ನಲ್ಲಿ ಮುಂದಿರುತ್ತಾರೆ!
Related image2
ಈ ದಿನಾಂಕದಲ್ಲಿ ಹುಟ್ಟಿದ ಹೆಂಗಸರು ಬಹಳ ಡೇಂಜರ್, ಗಂಡಸರು ಹುಷಾರ್
37

ಈ 4 ದಿನಾಂಕಗಳಲ್ಲಿ ಜನಿಸಿದ ಜನರ ಜೀವನ ಹೀಗಿರಲಿದೆ
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದ ಜನರ ಮೂಲಂಕ 3 ಆಗಿರುತ್ತೆ. ಈ ರಾಡಿಕ್ಸ್ ಸಂಖ್ಯೆಯ ಆಡಳಿತ ಗ್ರಹ ಗುರು. ಇದನ್ನು ಶಿಕ್ಷಣ (education), ಜ್ಞಾನ, ಮಕ್ಕಳು ಮತ್ತು ಧಾರ್ಮಿಕ ಚಟುವಟಿಕೆಗಳ ಅಂಶವೆಂದು ಪರಿಗಣಿಸಲಾಗುತ್ತೆ. ಮೂಲಾಂಕ 3 ಹೊಂದಿರುವ ಜನರು ಗುರುವಿನಿಂದ ಪ್ರಭಾವಿತರಾಗುತ್ತಾರೆ.

47

ಬಾಲ್ಯವು ಕಷ್ಟಗಳಲ್ಲಿ ಕಳೆಯುತ್ತದೆ
ಮೂಲಾಂಕ 3ರ ಜನರ ಬಾಲ್ಯವು ತುಂಬಾನೆ ಕಷ್ಟಕರವಾಗಿರುತ್ತೆ, ಇವರದ್ದು ಹೋರಾಟದ ಬದುಕಾಗಿರುತ್ತೆ. ಈ ಮೂಲಾಂಕ ಹೊಂದಿರುವ ಜನರು ತಮ್ಮ ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅನೇಕ ಬಾರಿ ಅವರು ತುಂಬಾ ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ  (financial status) ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

57

ಯೌವನದಲ್ಲಿ ಐಷಾರಾಮಿ ಜೀವನ
ಬಾಲ್ಯದಲ್ಲಿ ಬಡತನವನ್ನೇ ನೋಡಿದ ಈ ಜನರು ತಮ್ಮ ಯೌವನದಲ್ಲಿ ಸುಖ ಮತ್ತು ಐಷಾರಾಮ ಜೀವನವನ್ನು (luxury life) ಅನುಭವಿಸುತ್ತಾರೆ. ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಈ ಜನರು ಬಹಳಷ್ಟು ಹಣ ಗಳಿಸುತ್ತಾರೆ ಮತ್ತು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸಂತೋಷವಾಗಿಡುತ್ತಾರೆ.

67

ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ
ಮೂಲಾಂಕ 3 ಹೊಂದಿರುವ ಜನರು ಪ್ರತಿಯೊಂದು ಕಷ್ಟವನ್ನೂ ಧೈರ್ಯದಿಂದ ಎದುರಿಸುತ್ತಾರೆ ಮತ್ತು ಯಾರ ಸಹಾನುಭೂತಿ, ಸಹಾಯವನ್ನು ಪಡೆಯಲು ಇವರು ಇಷ್ಟಪಡುವುದಿಲ್ಲ. ಈ ಜನರು ತಮ್ಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನೂ ಇಷ್ಟಪಡುವುದಿಲ್ಲ ಮತ್ತು ತಮ್ಮ ಇಷ್ಟದಂತೆ ಜೀವನ ಸಾಗಿಸುತ್ತಾರೆ. 

77

ತಮ್ಮ ಒಡಹುಟ್ಟಿದವರನ್ನು ತುಂಬಾ ಪ್ರೀತಿಸುತ್ತಾರೆ
ಮೂಲಾಂಕ 3ರ ಜನರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ, ವಿಶೇಷವಾಗಿ ಅವರ ಒಡಹುಟ್ಟಿದವರನ್ನು ಇಷ್ಟಪಡ್ತಾರೆ. ಅವರ ಒಡಹುಟ್ಟಿದವರೊಂದಿಗಿನ (siblings) ಅವರ ಸಂಬಂಧವು ತುಂಬಾ ಸ್ಟ್ರಾಂಗ್ ಆಗಿರುತ್ತೆ ಮತ್ತು ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ತಮ್ಮ ಒಡಹುಟ್ಟಿದವರ ಜೊತೆಗೆ ನಿಲ್ಲುತ್ತಾರೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಖ್ಯಾಶಾಸ್ತ್ರ
ವಾಸ್ತು ಸಲಹೆಗಳು

Latest Videos
Recommended Stories
Recommended image1
ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ: ಎಚ್‌ಡಿ ಕುಮಾರಸ್ವಾಮಿ ಸೇರಿ ಗಣ್ಯರಿಗೆ 'ರಾಯರ ಅನುಗ್ರಹ' ಪ್ರಶಸ್ತಿ ಪ್ರದಾನ!
Recommended image2
ಫೆಬ್ರವರಿ 23 ರಿಂದ ಮಾರ್ಚ್ 1 2026 ರವರೆಗೆ ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ವೃತ್ತಿ ಪ್ರಗತಿ ಮತ್ತು ಆರ್ಥಿಕ ಲಾಭ
Recommended image3
ಮಾರ್ಚ್ 3 ರಂದು ಚಂದ್ರಗ್ರಹಣ, ಈ ಆರು ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ಉದ್ಯೋಗ ಲಾಭ, ಆಸ್ತಿ ಲಾಭ!
Related Stories
Recommended image1
ಈ ದಿನಗಳಲ್ಲಿ ಹುಟ್ಟಿದವರು ಬಿಸಿನೆಸ್‌ನಲ್ಲಿ ಮುಂದಿರುತ್ತಾರೆ!
Recommended image2
ಈ ದಿನಾಂಕದಲ್ಲಿ ಹುಟ್ಟಿದ ಹೆಂಗಸರು ಬಹಳ ಡೇಂಜರ್, ಗಂಡಸರು ಹುಷಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved