MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಮದುವೆಯಾಗುವಲ್ಲಿ, ಮಕ್ಕಳಾಗುವಲ್ಲಿ ಸಮಸ್ಯೆಯೆ? ಅಂದ್ರೆ ಮನೆಯಲ್ಲಿ ಪಿತೃ ದೋಷ ಇದೆ ಎಂದರ್ಥ

ಮದುವೆಯಾಗುವಲ್ಲಿ, ಮಕ್ಕಳಾಗುವಲ್ಲಿ ಸಮಸ್ಯೆಯೆ? ಅಂದ್ರೆ ಮನೆಯಲ್ಲಿ ಪಿತೃ ದೋಷ ಇದೆ ಎಂದರ್ಥ

ಒಬ್ಬ ವ್ಯಕ್ತಿಯ ಮರಣದ ನಂತರ ಅಂತ್ಯಕ್ರಿಯೆ ಮಾಡದಿದ್ದರೆ ಅಥವಾ ಯಾರಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ, ಆ ವ್ಯಕ್ತಿಗೆ ಸಂಬಂಧಿಸಿದ ಕುಟುಂಬ ಸದಸ್ಯರು ಪಿತೃದೋಷದ ಭಾರವನ್ನು ಎದುರಿಸಬೇಕಾಗುತ್ತೆ. ಅವುಗಳ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಸ್ಟೋರಿ ಓದಿ.   

1 Min read
Suvarna News
Published : May 26 2023, 05:13 PM IST
Share this Photo Gallery
  • FB
  • TW
  • Linkdin
  • Whatsapp
16

ಪಿತೃಗಳ ಆಶೀರ್ವಾದದಿಂದ, ಕುಟುಂಬ ಮತ್ತು ಮನೆ ಚೆನ್ನಾಗಿರುತ್ತೆ, ಆದರೆ ಪೂರ್ವಜರು ಕೋಪಗೊಂಡರೆ, ಅವರು ಅನೇಕ ತಲೆಮಾರುಗಳವರೆಗೆ ಪಿತೃದೋಷದ ಭಾರವನ್ನು ಹೊರಬೇಕಾಗುತ್ತೆ. ಆದರೆ, ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ,  ಪಿತೃ ದೋಷವನ್ನು(Pitra Dosh) ತೊಡೆದುಹಾಕಬಹುದು, ಮತ್ತು ಸಂತೋಷವು ಮತ್ತೆ ಮನೆಗೆ ಮರಳಬಹುದು.

26

ಪಿತೃ ದೋಷದ ಚಿಹ್ನೆಗಳು ಯಾವುವು?: ಜಾತಕದಲ್ಲಿ ಪಿತೃ ದೋಷವಿದ್ದಾಗ ವ್ಯಕ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅನೇಕ ಬಾರಿ ಕೆಲಸವು ಹದಗೆಡುತ್ತೆ. ವ್ಯವಹಾರದಿಂದ ಉದ್ಯೋಗಕ್ಕೆ(Job) ನಷ್ಟವಾಗುತ್ತೆ.

36

ವೈವಾಹಿಕ ಜೀವನದಲ್ಲಾಗೋ(Married life) ಸಮಸ್ಯೆಗಳು ಯಾವುವು?: ದಂಪತಿಗಳ ಸಾಕಷ್ಟು ಪ್ರಯತ್ನಗಳ ನಂತರವೂ, ಮನೆಯಲ್ಲಿ ಪಿತೃ ದೋಷದಿಂದಾಗಿ ಅವರು ಮಗುವಿನ ಸಂತೋಷವನ್ನು ಪಡೆಯೋದಿಲ್ಲ. ಅಥವಾ ಜನಿಸಿದ ಮಕ್ಕಳು ಬುದ್ಧಿಮಾಂದ್ಯರು, ಅಂಗವಿಕಲರು ಇತ್ಯಾದಿ ಆಗುವರು. ಅನೇಕ ಬಾರಿ ಮಗು ಹುಟ್ಟಿದ ಕೂಡಲೇ ಸಾಯುತ್ತೆ. ಮನೆಯಲ್ಲಿ ಪಿತೃ ದೋಷವಿದೆ ಎಂದು ಈ ಚಿಹ್ನೆಗಳು ಸೂಚಿಸುತ್ತವೆ.

46

ಇನ್ನೂ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು?: ಮನೆಯಲ್ಲಿ ವಾಸಿಸುವ ಜನರ ನಡುವೆ ಒಂದಲ್ಲ ಒಂದು ವಿಷಯದ ಬಗ್ಗೆ ಜಗಳಗಳು ನಡೆಯುತ್ತವೆ. ಮನೆಯಲ್ಲಿ ಉಪಸ್ಥಿತರಿರುವ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ(unhealthy) ಒಳಗಾಗುತ್ತಾರೆ. ಮದುವೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಕುಟುಂಬವು ಅಪಘಾತಗಳನ್ನು ಸಹ ಎದುರಿಸಬೇಕಾಗಬಹುದು. ಈ ಎಲ್ಲಾ ಚಿಹ್ನೆಗಳು ಮನೆಯಲ್ಲಿ ಪಿತೃ ದೋಷವಿದೆ ಎಂದು ಸೂಚಿಸುತ್ತೆ.

56

ಪಿತೃದೋಷವನ್ನು ತಪ್ಪಿಸುವ ಮಾರ್ಗಗಳು ಯಾವುವು?: ನಿಮ್ಮ ಜಾತಕದಲ್ಲಿ ಪಿತೃ ದೋಷವಿದ್ದರೆ, ಪೂರ್ವಜರ ಫೋಟೋವನ್ನು(Photo) ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಇದರೊಂದಿಗೆ, ಪ್ರತಿದಿನ ಹೂಮಾಲೆಗಳನ್ನು ಅರ್ಪಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳಬೇಕು. ಮಧ್ಯಾಹ್ನ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಇದರೊಂದಿಗೆ, ಹೂವು, ಅಕ್ಷತೆ, ಹಾಲು, ಗಂಗಾಜಲ ಮತ್ತು ಕಪ್ಪು ಎಳ್ಳನ್ನು ಸಹ ಅರ್ಪಿಸಬೇಕು ಮತ್ತು ಪೂರ್ವಜರನ್ನು ಸ್ಮರಿಸಬೇಕು.

66

ಪ್ರತಿದಿನ ಸಂಜೆ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿ. ಪ್ರತಿದಿನ ದೀಪವನ್ನು ಬೆಳಗಿಸಲು ಸಾಧ್ಯವಾಗದಿದ್ದರೆ, ಪಿತೃ ಪಕ್ಷದ ಸಮಯದಲ್ಲಿ ಖಂಡಿತವಾಗಿಯೂ ಅದನ್ನು ಬೆಳಗಿಸಿ. ಪಿತೃದೋಷವನ್ನು ತೊಡೆದುಹಾಕಲು, ಬಡ ಹುಡುಗಿಯರನ್ನು ಮದುವೆಯಾಗಿ. ಬೇರೆಯೋಬ್ಬರ ವಿವಾಹದಲ್ಲಿ(Marriage) ಸಹಾಯ ಮಾಡುವುದು ಸಹ ಪಿತೃದೋಷವನ್ನು ನಿವಾರಿಸುತ್ತೆ.
 

About the Author

SN
Suvarna News
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved