ವಾರದ ಪ್ರತಿದಿನ ಯಾವ್ಯಾವ ದೇವರನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿ..?

First Published Feb 4, 2021, 4:54 PM IST

ಹಿಂದೂಗಳು ವಿವಿಧ ರೂಪಗಳಲ್ಲಿ ವಿವಿಧ ದೇವರನ್ನು ಪೂಜಿಸುತ್ತಾರೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಅವರು ಹಲವಾರು ಆಚರಣೆಗಳನ್ನು ಮಾಡುತ್ತಾರೆ ಮತ್ತು ತಮ್ಮ ದೇವರಿಗೆ ಅರ್ಪಣೆಗಳನ್ನು ಮಾಡುತ್ತಾರೆ. ಆದರೆ ಹಿಂದೂ ಪುರಾಣಗಳಲ್ಲಿ ವಾರದ ಪ್ರತಿ ದಿನವೂ ವಿವಿಧ ದೇವರುಗಳಿಗೆ ಸಮರ್ಪಿತವಾಗಿದೆ. ಇದಷ್ಟೇ ಅಲ್ಲ, ಪ್ರತಿದಿನವೂ ತನ್ನದೇ ಆದ ಆಚರಣೆಗಳು ಮತ್ತು ವಿಧಾನಗಳನ್ನು ಹೊಂದಿದ್ದು, ದೇವರನ್ನು ಪೂಜಿಸಿ, ಅವರನ್ನು ಪ್ರಸನ್ನಗೊಳಿಸುವ ವಿಧಾನಗಳಿವೆ.