ಕ್ರೂರಿಗಳಂತೆ ವರ್ತಿಸುವ 4 ರಾಶಿಗಳು
ಇವರಿಗೆ ಕೋಪ ಬಂದ್ರೆ, ಎದುರಿಗೆ ಯಾರಿದ್ದಾರೆ ಅಂತನೂ ನೋಡಲ್ಲ. ಕರುಣೆ, ದಯೆ ತೋರಿಸಲ್ಲ. ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಕ್ರಿಯೆಯಲ್ಲದಿದ್ದರೂ ಮಾತಿನಲ್ಲಾದರೂ ತಮ್ಮ ಕ್ರೌರ್ಯವನ್ನು ತೋರಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಕೆಲವು ವಿಶೇಷ ಲಕ್ಷಣಗಳಿವೆ. ಕೆಲವು ರಾಶಿಯವರು ಕರುಣೆ, ದಯೆಯಿಂದ ತುಂಬಿದ್ದರೆ.. ಇನ್ನು ಕೆಲವರು ತುಂಬಾ ನಿರ್ದಯಿಗಳು, ಕ್ರೂರಿಗಳೂ ಆಗಿರುತ್ತಾರೆ. ಹಾಗಾದರೆ, ತಮ್ಮ ಮಾತು, ಕ್ರಿಯೆಗಳಿಂದ ಕ್ರೂರವಾಗಿ ವರ್ತಿಸುವ ಆ ರಾಶಿಗಳಾವುವು ಎಂದು ನೋಡೋಣ..
ಮಕರ ರಾಶಿಯವರು ಸ್ವಭಾವತಃ ಒಳ್ಳೆಯವರೇ. ಆದರೆ, ಕೆಲವೊಮ್ಮೆ ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಈ ರಾಶಿಯವರು ಯಾವಾಗಲೂ ಶಿಸ್ತನ್ನು ಬಯಸುತ್ತಾರೆ. ಇವರನ್ನು ಶನಿ ಗ್ರಹವು ಆಳುತ್ತದೆ. ಜೀವನದಲ್ಲಿ ಗುರಿ ತಲುಪಲು ತುಂಬಾ ಶ್ರಮಪಡುತ್ತಾರೆ. ಭಾವನೆಗಳನ್ನು ಬದಿಗೊತ್ತಿ ಗುರಿಗಾಗಿ ಓಡುತ್ತಿರುತ್ತಾರೆ. ಇತರರ ಆಲೋಚನೆ, ಅಭಿಪ್ರಾಯಗಳಿಗೆ ಬೆಲೆ ಕೊಡುವುದಿಲ್ಲ. ತಮಗೆ ಇಷ್ಟವಾದ್ದನ್ನು ಮಾಡುತ್ತಾರೆ. ಇತರರ ಭಾವನೆಗಳನ್ನು ಲೆಕ್ಕಿಸದೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೋಪ ಬಂದರೆ ಎದುರಿಗೆ ಯಾರಿದ್ದಾರೆ ಅಂತ ನೋಡುವುದಿಲ್ಲ. ಕರುಣೆ, ದಯೆ ತೋರಿಸುವುದಿಲ್ಲ. ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಕ್ರಿಯೆಯಲ್ಲದಿದ್ದರೂ ಮಾತಿನಲ್ಲಾದರೂ ತಮ್ಮ ಕ್ರೌರ್ಯವನ್ನು ತೋರಿಸುತ್ತಾರೆ. ಮಾನಸಿಕವಾಗಿ ನೋವು ಕೊಡುವುದರಲ್ಲಿ ಮುಂದಿರುತ್ತಾರೆ.
ವೃಶ್ಚಿಕ ರಾಶಿಯವರು ತೀವ್ರವಾದ ವ್ಯಕ್ತಿತ್ವ ಮತ್ತು ಭಾವನೆಗಳಿಗೆ ಹೆಸರುವಾಸಿ. ಈ ರಾಶಿಯನ್ನು ಮಂಗಳ ಗ್ರಹವು ಆಳುತ್ತದೆ. ಈ ರಾಶಿಯವರು ತಮ್ಮ ಗುರಿಗಳನ್ನು ಸಾಧಿಸಲು ಅಥವಾ ತಮ್ಮ ನಂಬಿಕೆಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೂ, ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ತಮ್ಮ ಸ್ವಂತ ಲಾಭಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ತಮಗೆ ಬೇಕಾದ್ದು ಆಗದಿದ್ದರೆ, ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಮಾನಸಿಕವಾಗಿ ದಾಳಿ ಮಾಡುತ್ತಾರೆ.
ಕುಂಭ ರಾಶಿಯವರು ತುಂಬಾ ಸ್ವತಂತ್ರರು. ಈ ರಾಶಿಯವರನ್ನು ಶನಿ ಗ್ರಹವು ಆಳುತ್ತದೆ. ಈ ರಾಶಿಯವರು ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಈ ರಾಶಿಯವರು ಭಾವನೆಗಳಿಗಿಂತ ಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ಕ್ರಮದಲ್ಲಿ ಅವರು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು. ಅವರಿಗೆ ಇಷ್ಟವಾಗದ ಸಂಗತಿಗಳು ನಡೆದಾಗ, ಅವರು ತಮ್ಮ ಭಾವನೆಗಳನ್ನು ಬದಿಗಿಟ್ಟು ಜನರನ್ನು ನಿರ್ಲಕ್ಷಿಸುತ್ತಾರೆ. ಮನಸ್ಸಿನಿಂದ ಯೋಚಿಸುವುದಿಲ್ಲ. ಏನೇ ಮಾತು ಬೇಕಾದರೂ ಆಡುತ್ತಾರೆ. ಸ್ವಲ್ಪವೂ ಕರುಣೆ ತೋರಿಸುವುದಿಲ್ಲ.
ಮೇಷ ರಾಶಿಯವರು ಧೈರ್ಯಶಾಲಿಗಳು, ಮಹತ್ವಾಕಾಂಕ್ಷಿಗಳು ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರ ಆಡಳಿತ ಗ್ರಹ ಮಂಗಳ. ಈ ರಾಶಿಯವರು ತಮ್ಮ ಗುರಿಗಳನ್ನು ತಲುಪಲು ತುಂಬಾ ಶ್ರಮಪಡುತ್ತಾರೆ. ಅವರು ಇತರರ ಭಾವನೆಗಳನ್ನು ಪರಿಗಣಿಸದೆ ಮುಂದುವರಿಯುತ್ತಾರೆ. ಅವರ ನೇರ ವಿಧಾನವು ಕೆಲವೊಮ್ಮೆ ಇತರರಿಗೆ ಕಠಿಣ ಅಥವಾ ದಯೆಯಿಲ್ಲದಂತೆ ಕಾಣಿಸಬಹುದು. ಯಾರಾದರೂ ಈ ರಾಶಿಯವರನ್ನು ಕೆಣಕಿದರೆ, ಅವರಲ್ಲಿ ಕ್ರೂರ ವ್ಯಕ್ತಿತ್ವ ಹೊರಬರುತ್ತದೆ. ಕೋಪದಲ್ಲಿ ಏನನ್ನೂ ಯೋಚಿಸದೆ ಮಾತನಾಡುತ್ತಾರೆ. ಇತರರನ್ನು ತಮ್ಮ ಮಾತುಗಳಿಂದ ಖಂಡಿತವಾಗಿಯೂ ನೋಯಿಸುತ್ತಾರೆ.