ವಿಕಾಸ್‌ ದುಬೆ ಎನ್‌ಕೌಂಟರ್‌, ಅನುಮಾನಕ್ಕೆ ಕಾರಣವಾಗಿದೆ ಆ ಒಂದು ವಿಡಿಯೋ!

First Published 10, Jul 2020, 6:45 PM

ಕಾನ್ಪುರದ ಬಿಕ್ರೂ ಹಳ್ಳಿಯಲ್ಲಿ ಜುಲೈ 2 ರಂದು ರಾತ್ರಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಉತ್ತರ ಪ್ರದೇಶದ ಮೋಸ್ಟ್‌ ವಾಂಟೆಡ್ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಇಂದು, ಶುಕ್ರವಾರ ಎನ್‌ಕೌಂಟರ್‌ನಲ್ಲಿ ಹತ್ಯಗೀಡಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಎಸ್‌ಎಸ್‌ಪಿ ದಿನೇಶ್ ಕುಮಾರ್ ಈ ಎನ್‌ಕೌಂಟರ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಾಸ್ ದುಬೆಯನ್ನು ಕೊಂಡೊಯ್ಯುತ್ತಿರುವ ವೇಳೆ ಬೆಂಗಾವಲು ವಾಹನ ಇದ್ದಕ್ಕಿದ್ದಂತೆಯೇ ಅಪಘಾತಕ್ಕೀಡಾಗಿದೆ. ಈ ವೇಳೆ ವಿಕಾಸ್ ಪೊಲೀಸರ ಕೈಯ್ಯಲ್ಲಿದ್ದ ಗನ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಆತನಿಗೆ ಸರೆಂಡರ್ ಆಗಲು ಅವಕಾಶ ನೀಡಲಾಗಿತ್ತಾದರೂ, ಆತ ಪರಾರಿಯಾಗಲು ತಯತ್ನಿಸಿದ್ದ. ಹೀಗಾಗಿ ಆತನನ್ನು ಶೂಟ್ ಮಾಡಲಾಯ್ತು ಎಂದಿದ್ದಾರೆ. ಆದರೀಗ ಎನ್‌ಕೌಂಟರ್‌ ಸಂಬಂಧ ಹಲವಾರು ಅನುಮಾನ ಹಾಗೂ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಉತ್ತರಿಸಬೇಕಿದೆ.

ಕಾನ್ಪುರ ಗಡಿಗೆ ಬಂದ ಬಳಿಕ ಎಸ್‌ಟಿಎಫ್‌ ವಾಹನ ಹೇಗೆ ಉರುಳಿತು? ಯಾವ ಪರಿಸ್ಥಿತಿಯಲ್ಲಿ ಅಪಘಾತ ನಡೆಯಿತು?

ನಿರಂತರವಾಗಿ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆ ಪೊಲೀಸರ ಕೈಯ್ಯಲ್ಲಿದ್ದ ಗನ್ ಕಸಿದು ಓಡಿ ಹೋಗುವಷ್ಟು ಸಮರ್ಥನಾಗಿದ್ದನೇ?

ಇನ್ನು ದೆಹಲಿಯ ಉಜ್ಜಯನಿಯಲ್ಲಿ ಮಾಧ್ಯಮಗಳೆದುರು ಜೋರಾಗಿ ಕೂಗುತ್ತಾ ಪೊಲೀಸರಿಗೆ ಶರಣಾಗಿದ್ದ ವಿಕಾಸ್ ಮನಸ್ಸು ಅಷ್ಟು ಬೇಗ ಬದಲಾಯ್ತಾ?

ಖುದ್ದು ಸರೆಂಡರ್ ಆದ ವಿಕಾಸ್ ಯಾಕಾಗಿ ಗನ್ ಹಿಡಿದು ಓಡಿ ಹೋದ?

ವಿಕಾಸ್ ದುಬೆ ಮೊದಲು ಫೈರಿಂಗ್ ನಡೆಸಿದನೋ ಅಥವಾ ಆತನನ್ನು ಓಡಿ ಹೋಗದಂತೆ ತಡೆಯಲು ಪೊಲೀಸರು ಫೈರಿಂಗ್ ನಡೆಸಿದ್ರೋ?

ಎರಡೂ ಕಡೆಯಿಂದ ಈ ಎನ್‌ಕೌಂಟರ್ ವೇಳೆ ಎಷ್ಟು ಗುಂಡು ಹಾರಿಸಲಾಯ್ತು?

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪೊಲೀಸರ ಒಂದು ವಾಹನ ಪಂಕ್ಚರ್ ಆದರೆ ಮತ್ತೊಂದು ಪಲ್ಟಿ ಹೊಡೆಯಿತು.

ವಿಕಾಸ್ ಕೈಗೆ ಕೋಳ ಹಾಕಿರಲಿಲ್ಲವೇ? ಅಷ್ಟು ನಿರ್ಲಕ್ಷ್ಯ ವಹಿಸಲಾಗಿತ್ತಾ?

ಗುಂಡಿನ ಕಾಳಗದಲ್ಲಿ ತಲೆಗೆ ಗುಂಡು ಹೊಡೆಯುತ್ತಾರಾ?

ಕಾನ್ಪುರಕ್ಕೆ ಎಂಟ್ರಿ ಆದ ಬಳಿಕವೇ ಆತ ಯಾಕೆ ಓಡಿದ?

ಇನ್ನು ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಿಕಾಸ್ ಕರೆದೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮ ಸೇರಿದಂತೆ ಎಲ್ಲಾ ವಾಹನಗಳನ್ನು ಮೊದಲೇ ನಿಲ್ಲಿಸಲಾಗಿತ್ತು. ಬಳಿಕ ಈ ಎನ್‌ಕವಂಟರ್‌ ನಡೆದಿದೆ. ಹೀಗಿರುವಾಗ ಈ ವಾಹನಗಳನ್ನೆಲ್ಲಾ ಪೊಲೀಸರಿ ಯಾಕೆ  ತಡೆದಿದ್ದರು? ಇದು ಪೂರ್ವ ನಿಯೋಜಿತವೇ ಎಂಬ ಪ್ರಶ್ನೆಗಗಳು ಸೋಶಿಯ್ ಮಿಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

loader