ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಲ್ಲಿಸಿದ ಹೆಂಡ್ತಿ..!
ಬೆಳಗಾವಿ(ಫೆ.25): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಹೆಂಡತಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನ ಬೆಳಗಾವಿ ತಾಲೂಕಿನ ಕೋಳ್ಯಾನಟ್ಟಿ ಗ್ರಾಮದ ಕೊಲೆಯಾದವನ ಪತ್ನಿಯ ಪ್ರಿಯಕರ ಸೇರಿ ಬಾಳಪ್ಪ ದಿನ್ನಿ, ಬಸವರಾಜ ಉಪ್ಪಾರ, ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಮಂಜುನಾಥ ಬೀಡಿ ಎಂದು ಗುರುತಿಸಲಾಗಿದೆ.
ಫೆ. 11ರಂದು ಕಾಣೆಯಾಗಿದ್ದ ಸಾಗರ ಪೂಜೇರಿ ಫೆ. 22ರಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಉಳವಿ ಬಳಿ ಕಂದಕದಲ್ಲಿ ಶವವಾಗಿ ಪತ್ತೆ
ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದ ಕೊಲೆಯಾದ ಸಾಗರ್ ತಂದೆ ಗಂಗಪ್ಪ
ಕೊಲೆಯಾದ ಸಾಗರ್ ಪತ್ನಿ ಜೊತೆ ಅವಳ ಸೋದರ ಮಾವನಾಗಿದ್ದ ಬಾಳಪ್ಪ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಗಂಡ ಸಾಗರ್‌ನನ್ನು ಕೊಲ್ಲುವಂತೆ ಸಾಗರ್ ಪತ್ನಿ ತನ್ನ ಪ್ರಿಯಕರ ಬಾಳಪ್ಪಗೆ ತಿಳಿಸಿದ್ದಳು.
ಗಂಡ ಸಾಗರ್‌ನ ಕೊಂದರೆ ತನ್ನ ಬಳಿಯ ಚಿನ್ನಾಭರಣ ನೀಡೋದಾಗಿ ಹೇಳಿದ್ದ ಮಹಿಳೆ. ಸ್ನೇಹಿತರಿಬ್ಬರ ಜೊತೆಗೂಡಿ ಸಾಗರ್‌ನನ್ನು ಉಳವಿಗೆ ಕರೆದೊಯ್ದು ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದ ಆರೋಪಿಗಳು.
ಹತ್ಯೆಯ ಬಳಿಕ ಕಾಡಿನಲ್ಲಿ ಸಾಗರ್‌ನ ಶವವನ್ನ ಬಿಸಾಡಿ ಬಂದಿದ್ದ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.