ಶಿಕ್ಷಕಿಯ ಭೀಕರ ಅಂತ್ಯ: ಛಿದ್ರವಾದ ದೇಹ, ಕ್ಷಣಾರ್ಧದಲ್ಲಿ ಕನಸುಗಳೆಲ್ಲಾ ನುಚ್ಚುನೂರು!

First Published Apr 5, 2021, 4:10 PM IST

ರಾಜಸ್ಥಾನದ ನಾಗೌರ್‌ನಲ್ಲಿ ಸೋಮವರಾದ ಬೆಳಗ್ಗೆ ಭಯಾನಕ ಅಪಘಾತ ಸಂಭವಿಸಿದೆ. ಇದನ್ನು ಕಂಡವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಇಲ್ಲೊಬ್ಬ ಮುಖ್ಯ ಶಿಕ್ಷಕಿಗೆ ಮೇಲೆ ಡಂಪರ್ ಹಾದು ಹೋಗಿದೆ. ಚಕ್ರದಡಿ ಸಿಲುಕಿದ ಶಿಕ್ಷಕಿ ಕ್ಷಣಾರ್ಧದಲ್ಲಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಡಂಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕೊಂಡೊಯ್ದು ಶವಾಗಾರದಲ್ಲಿರಿಸಿದ್ದಾರೆ.