ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಯೋಜಿತ ಕೊಲೆ, ಪೋಟೋ ಸಾಕ್ಷ್ಯದ ಸತ್ಯ!
ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಇದೊಂದು ಕೊಲೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಲೇ ಇವೆ. #justiceforSushant ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದ್ದು ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದೆ. ಸುಶಾಂತ್ ಸಾವಿನ ನಂತರದ ಪೋಟೋಗಳ ಆಧಾರದಲ್ಲಿ ಸೋಶಿಯಲ್ ಮೀಡಿಯಾ ಮಾಡಿರುವ ತನಿಖಾ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಕಿರುತೆರೆ ಕಲಾವಿದ ಶೇಖರ್ ಸುಮನ್ ಸುಶಾಂತ್ ಸಾವಿಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸುಶಾಂತ್ ಸಿಂಗ್ ಅಭಿಮಾನಿಗಳು ತಮ್ಮ ಆಕ್ರೋಶ ನಿಲ್ಲಿಸಬಾರದು ಅವರ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಬೇಕು ಎಂದು ನಟ ಕೇಳಿಕೊಂಡಿದ್ದಾರೆ.
ಇನ್ನೊಂದು ಕಡೆ ಸೋಶಿಯಲ್ ಮೀಡಿಯಾ ಪೋಟೋಗಳ ಆಧಾರದಲ್ಲಿ ಒಂದು ತನಿಖಾ ವರದಿಯನ್ನು ಮಾಡಿದಸುಶಾಂತ್ ಸಿಂಗ್ ಅವರ ಹಣೆಯ ಭಾಗಕ್ಕೆ ಗಾಯವಾಗಿತ್ತು. ಬಿಡುಗಡೆಯಾಗಿದ್ದ ಪೋಟೋಗಳು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದವು. ಆದರೆ ಪೊಲೀಸರು ಸುಶಾಂತ್ ದೇಹದ ಮೇಲೆ ಯಾವುದೇ ಗಾಯ ಆಗಿಲ್ಲ ಎಂದು ಹೇಳಿದ್ದು ಯಾಕೆ?
ಸುಶಾಂತ್ ಸಿಂಗ್ ಅವರ ಕಾಲಿನ ಪಾದಗಳು ಸಾಮಾನ್ಯ ಸ್ಥಿತಿಯಲ್ಲಿಯೇ ಇದ್ದವು. ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಆತನ ಪಾದ ನೆಲಕ್ಕೆ ಅಭಿಮುಖವಾಗಿ ಇರಬೇಕು. ಆದರೆ ಇಲ್ಲಿ ಹಾಗಾಗಿಲ್ಲ
ಯಾರಾದರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ನಾಲಿಗೆ ಹೊರಗೆ ಬರಬೇಕು. ಆದರೆ ಇಲ್ಲಿ ಹಾಗಾಗಿಲ್ಲ.
ಸುಶಾಂತ್ ಕುತ್ತಿಗೆ ಮೇಲೆ ಎರಡು ಗಾಯದ ಗುರುತುಗಳಿವೆ. ಒಂದು ವೇಳೆ ನೇಣು ಹಾಕಿಕೊಂಡಿದ್ದರೆ ಎರಡು ಗುರುತು ಹೇಗೆ ಸಾಧ್ಯ
ಕುತ್ತಿಗೆ ಮೇಲೆ ಇರುವುದು ಹಗ್ಗದ ಗುರುತು. ಆದರೆ ಪೊಲೀಸರು ಸುಶಾಂತ್ ಬೆಡ್ ಶೀಟ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಯಾವುದು ನಿಜ?
ಇದೊಂದು ಕೊಲೆ ಪ್ರಕರಣವಾಗಿದ್ದು ಪೊಲೀಶರು ಶಾಮೀಲಾಗಿದ್ದಾರೆ ಎಂದು ಪೋಸ್ಟ್ ಆರೋಪಿಸಿದೆ.