ಪ್ರೇಯಸಿಯ ಮದುವೆ ತಡೆಯಲು ಗೆಳೆಯನೊಂದಿಗೆ ಹೋದ, 5 ದಿನದ ಬಳಿಕ ಇಬ್ಬರ ಶವ ಪತ್ತೆ!
ಪ್ರೇಯಸಿಯ ಮದುವೆ ತಡೆಯಲು ಹೊರಟಿದ್ದ ಪ್ರೇಮಿ ಹಾಗೂ ಆತನ ಗೆಳೆಯನನ್ನು ಹತ್ಯೆಗೈಯ್ಯಲಾಗಿದೆ. ಇಬ್ಬರ ಶವ ಐದು ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾಗಿದೆ. ಚಂದ್ರಭಾಗ ನದಿ ತಟದಲ್ಲಿರುವ ಕಾಡಿನಲ್ಲಿ ಇಬ್ಬರು ಯುವಕ ಮೃತದೇಹ ಸಿಕ್ಕಿದೆ. ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಇದೆ ಪೊಲೀಸರು ಮೃತದೇಹ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತರನ್ನು ಡಂಡಾರಿಯ ನಿವಾಸಿ ರಾಜೀವ್ ಸದಾ ಹಾಗೂ ಭಗ್‌ವಾನ್ ಸದಾ ಎಂದು ಗುರುತಿಸಲಾಗಿದೆ.

ಡಂಡಾರಿ ನಿವಾಸಿ ರಾಜೀವ್ ಸದಾ ಬಕ್‌ರೀ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.

ಆಗಸ್ಟ್ 25ರಂದು ಯುವತಿ ರಾಜೀವ್ ಸದಾಗೆ ಕರೆ ಮಾಡಿ ನೀನು ಬರದಿದ್ದರೆ ನಮ್ಮ ಕುಟುಂಬ ಸದಸ್ಯರು ನನ್ನ ಮದುವೆ ಬೇರೊಬ್ಬ ಯುವಕನೊಂದಿಗೆ ಮಾಡುತ್ತಾರೆ ಎಂದಿದ್ದಳು.
ಯುವತಿ ಹೀಗೆ ಹೇಳಿ ಕರೆ ಕಟ್ ಮಾಡಿದ ಬೆನ್ನಲ್ಲೇ ರಾಜೀವ್ ತನ್ನ ಗೆಳೆಯ ಭಗವಾನ್ ಸದಾನನ್ನು ಕರೆದುಕೊಂಡು ಯುವತಿಯ ಮನೆಯತ್ತ ತೆರಳಿದ್ದ. ಇದಾಧ ಬಳಿಕ ರಾಜೀವ್ ಹಾಗೂ ಭಗವಾನ್ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.
ಭಾನುವಾರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾಡಿನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಶವ ಕಂಡು ಬಂದಿದ್ದು, ತನಿಖೆ ನಡೆಸಿದಾಗ ಗುರುತು ಪತ್ತೆಯಾಗಿದೆ.
ಪೊಲೀಸರು ಇಬ್ಬರ ಶವವನ್ನೂ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಜೊತೆಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.