ಮೈಮಾಟದಿಂದ ಅಧಿಕಾರಿಗಳು ಬುಟ್ಟಿಗೆ, ಸ್ವಪ್ನಾ ಅಕ್ರಮ ಚಿನ್ನ ಸಾಗಣೆಗೆ ಬಳಸಿಕೊಂಡಿದ್ದ ಮಾರ್ಗ!
ಜು.5ರಂದು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗೇಜ್‌ವೊಂದು ಸಿಕ್ಕಿತ್ತು. ತಿರುವನಂತಪುರದ ಯುಎಇ ರಾಯಭಾರ ಕಚೇರಿಯ ವಿಳಾಸ ಹೊಂದಿದ್ದ ಆ ಬ್ಯಾಗ್ ಅನ್ನು ಪಡೆಯಲು ಯಾರೂ ಬಂದಿರಲಿಲ್ಲ. ಸೀಮಾಸುಂಕ ಅಧಿಕಾರಿಗಳು ಪರಿಶೀಲಿಸಿದಾಗ, ಸ್ನಾನಗೃಹ ಸಾಧನಗಳ ಒಳಗೆ 30 ಕೆ.ಜಿ. ಚಿನ್ನ ದೊರೆತಿತ್ತು. ತನಿಖೆ ನಡೆಸಿದಾಗ ಯುಎಇ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಿತ್ ಎಂಬಾತನ ಬಂಧನವಾಗಿತ್ತು. ಪ್ರಕರಣವನ್ನು ಮತ್ತಷ್ಟುತನಿಖೆಗೆ ಒಳಪಡಿಸಿದಾಗ ಈ ಹಿಂದೆ ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಾ ಸುರೇಶ್ ಹೆಸರು ಕೇಳಿ ಬಂದಿತ್ತು. ಆದರೀಗ ಸಿಕ್ಕಿಬಿದ್ದ ಸ್ವಪ್ನಾ ಕುರಿತಾಗಿ ದಿನೇ ದಿನೇ ಶಾಕಿಂಗ್ ಮಾಹಿತಿಗಳು ಲಭ್ಯವಾಗಲಾರಂಭಿಸಿವೆ.
ಯುಎಇ ರಾಯಭಾರ ಕಚೇರಿ ಕೆಲಸ ತೊರೆದ ಮೇಲೆ ಸ್ವಪ್ನಾ ಸುರೇಶ್ ಕೇರಳ ಮುಖ್ಯಮಂತ್ರಿಗಳ ಅಧೀನದಲ್ಲಿರುವ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ನಿಗಮದ ಉದ್ಯೋಗಿಯಾಗಿದ್ದಳು
ಈಕೆ ಮುಖ್ಯಮಂತ್ರಿಗಳ ಜತೆಗಿರುವ ಸಾಕಷ್ಟುಫೋಟೋಗಳು ಹರಿದಾಡಿದ್ದವು. ಸರಿತ್ ಬಂಧನವಾದ ಬಳಿಕ ಸ್ವಪ್ನಾ ನಾಪತ್ತೆಯಾಗಿದ್ದಳು.
ಕೇರಳ ಮುಖ್ಯಮಂತ್ರಿಗಳ ಪಾತ್ರ ಈ ಹಗರಣದಲ್ಲಿ ಇದೆ ಎಂಬ ಆರೋಪ ವ್ಯಕ್ತವಾಗಿ, ಕೇರಳಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ರಾಜತಾಂತ್ರಿಕ ಬ್ಯಾಗ್‌ಗೆ ತಪಾಸಣೆಯಿಂದ ವಿನಾಯಿತಿ ಇದ್ದು, ಅದರ ಲಾಭ ಪಡೆದು ಸ್ವಪ್ನಾ ಚಿನ್ನ ಕಳ್ಳ ಸಾಗಣೆ ದಂಧೆ ನಡೆಸುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು.
ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿತ್ತು. ಶುಕ್ರವಾರವಷ್ಟೇ ಎಫ್‌ಐಆರ್ ದಾಖಲಿಸಿದ್ದ ಎನ್‌ಐಎ, ಒಂದೇ ದಿನದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿತ್ತು.
ಸರಿತ್, ಸ್ವಪ್ನ ಪ್ರಭ ಸುರೇಶ್, ಫೈಜಲ್ ಫರೀದ್ ಮತ್ತು ಸಂದೀಪ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೇರಳ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸ್ವಪ್ನ ಸುರೇಶ್ ಕೆಲಸ ಮಾಡುತ್ತಿದ್ದರು.
ಪಿಯುಸಿ ಮಾತ್ರ ಓದಿರುವ ಸ್ವಪ್ನಾ ಕೈಯಲ್ಲಿ ಫೇಕ್ ಡಿಗ್ರಿ ಸರ್ಟಿಫಿಕೇಟ್ ಇರುವುದರಿಂದಲೇ ಆಕೆ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಸಿಎಂ ಕಾರ್ಯದರ್ಶಿ ಐಎಎಸ್ ಎಂ ಶಿವಶಂಕರ್ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಸ್ವಪ್ನಾಗೆ ಸಿಎಂ ಜೊತೆಗೂ ನಂಟಿತ್ತು. ಸಿಎಂ ಕಾರ್ಯದರ್ಶಿಯೂ ಸ್ವಪ್ನಾ ಮನೆಗೆ ಸದಾ ಬರುತ್ತಿದ್ದ ವ್ಯಕ್ತಿಯಾಗಿದ್ದರು. ಒಂದಷ್ಟು ತನಿಖೆಗಳಿಂದ ತಪಿಸಲು ಸ್ವಪ್ನಾಗೆ ಇದೇ ಅಧಿಕಾರಿ ತಮ್ಮ ಅಧಿಕಾರ ಬಳಸಿಕೊಂಡು ನೆರವಾಗಿದ್ದರು.
ಈಕೆ ಚಿನ್ನ ಕಳ್ಳಸಾಗಣೆ ಮಾಡಲು ರಾಯಭಾರಿ ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳಲು ಲೈಂಗಿಕವಾಗಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳೆಂಬ ಆರೋಪವೂ ಕೇಳಿ ಬಂದಿದೆ.