ಉತ್ತರ ಕನ್ನಡ: ಪತ್ರಕರ್ತರು ಸಾಗುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟ!
ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದಲ್ಲಿ ನಡೆದಿರಿವುದು ಬೆಚ್ಚಿಬಿಳಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
14

ಶಾಸಕ ಆರ್‌ವಿ ದೇಶಪಾಂಡೆ ಸಭೆಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದಿಂದ ತೆರಳುತ್ತಿದ್ದ ಪತ್ರಕರ್ತರು. ಈ ವೇಳೆ ಕಾರಿನ ಟೈರಿಗೆ ಸಿಕ್ಕಿ ಏಕಾಏಕಿ ಸ್ಫೋಟಗೊಂಡಿದೆ.
24
ಸಂದೇಶ್ ದೇಸಾಯಿ ಎಂಬ ಪತ್ರಕರ್ತನಿಗೆ ಸೇರಿದ ಕಾರು. ಕಾರಿನೊಳಗೆ ಹಲವು ಪತ್ರಕರ್ತರಿದ್ದರು. ಕಾರ್ಯಕ್ರಮಕ್ಕೆ ಒಟ್ಟಿಗೆ ತೆರಳುತ್ತಿದ್ದ ವೇಳೆ ನಡೆದ ದುರಂತ ಘಟನೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
34
ಲೋಕಸಭಾ ಚುನಾವಣೆ ಸಮಯದಲ್ಲಿ ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಶಸ್ತ್ರಾಸ್ತ್ರಧಾರಿ ನಕ್ಸಲರ ಓಡಾಟ ನಡೆಸಿದ್ದು ಸುದ್ದಿಯಾಗಿತ್ತು. ಇದೀಗ ನಾಡಬಾಂಬ್ ಇಟ್ಟು ಸ್ಫೋಟಿಸುವ ಸಂಚು ನಡೆಸಿದ್ದಾರಾ ಎಂಬ ಅನುಮಾನ ಮೂಡಿದೆ.
44
ಘಟನೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ ಸ್ಥಳಕ್ಕೆ ದೌಡಾಯಿಸಿದ್ದಾರೆ, ಬಾಂಬ್ ಸ್ಫೋಟಗೊಂಡ ಸ್ಥಳ, ಸ್ಥಳದಲ್ಲಿ ಸಿಕ್ಕ ಸ್ಫೋಟಕ ವಸ್ತುಗಳ ಪರಿಶೀಲನೆ ನಡೆಸಿರುವ ಪೊಲೀಸರು.
Latest Videos