ಆನ್‌ಲೈನ್‌ ಕ್ಲಾಸ್‌ ಎಂದು ನೀಲಿ ಚಿತ್ರ ವೀಕ್ಷಣೆ: 12ರ ಬಾಲಕನಿಂದ ತಂಗಿಯ ರೇಪ್!

First Published Mar 20, 2021, 4:22 PM IST

ಕೊರೋನಾ ವಿದ್ಯಾರ್ಥಿಗಳ ಮೇಲೆ ಅತೀ ಹೆಚ್ಚು ಪರಿಣಾಮ ಬೀರಿದೆ. ಪ್ರತಿನಿತ್ಯ ಶಾಲೆಗೆ ಹೋಗಲಾಗ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಆನ್‌ಲೈನ್‌ ತರಗತಿಯೇ ಶಿಕ್ಷಣ ಪಡೆಯಲಿರುವ ಏಕೈಕ ದಾರಿ. ಆನ್‌ಲೈನ್‌ ಮೂಲಕ ನಡೆಯುವ ಈ ತರಗತಿಗಳು ಲಾಭದಾಯಕ ಕೂಡಾ ಹೌದು. ಆದರೆ ಇದೇ ವೇಳೆ ಇದು ಅಪಾಯವಾಗಿಯೂ ಪರಿಣಮಿಸುತ್ತಿದೆ.  ರಾಜಸ್ಥಾನದಲ್ಲೂ ಇಂತಹುದೇ ಶಾಕಿಂಗ್ ಘಟನೆ ನಡೆದಿದ್ದು, ಇದು ಪೋಚಕರನ್ನು ಚಿಂತೆಗೀಡು ಮಾಡಿದೆ. ಇಲ್ಲೊಬ್ಬ ಹನ್ನೆರಡು ವರ್ಷದ ಬಾಲಕ ಪೋರ್ನ್ ವಿಡಿಯೋ ನೋಡಿ ಆರು ವರ್ಷದ ತಂಗಿಯನ್ನು ಅತ್ಯಾಚಾರಗೈದಿದ್ದಾನೆ. ಇದು ಪೋಷಕರನ್ನು ಮತ್ತಷ್ಟು ಎಚ್ಚರವಾಗಿರುವಂತೆ ಮಾಡಿದೆ.