ಈತ ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗಬಲ್ಲ: ಅಲೆಕ್ಸ್ ಕ್ಯಾರಿ
ಸಿಡ್ನಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಸರಣಿಯಾಡಲು ಕಾಂಗರೂ ನಾಡಿಗೆ ಬಂದಿಳಿದಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದೆ. ಪ್ರತಿಭಾನ್ವಿತ ಆಟಗಾರರಿಂದ ತುಂಬಿ ತುಳುಕುತ್ತಿರುವ ಟೀಂ ಇಂಡಿಯಾ ಮತ್ತೊಮ್ಮೆ ಆಸೀಸ್ ನೆಲದಲ್ಲಿ ಭರ್ಜರಿ ಗೆಲುವು ಸಾಧಿಸುವ ಕನಸು ಕಾಣುತ್ತಿದೆ.ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಟೀಂ ಇಂಡಿಯಾ ಯುವ ಆಟಗಾರನೊಬ್ಬನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಮುಂದೊಂದು ದಿನ ಈತ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಕ್ಷಮತೆ ಹೊಂದಿದ್ದಾರೆ ಎಂದು ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಸಾಸದಲ್ಲಿದ್ದು, ಡಿಸೆಂಬರ್ 27ರಿಂದ ಆರಂಭವಾಗಲಿರುವ ಸರಣಿಯಲ್ಲಿ 3 ಏಕದಿನ, ಬಳಿಕ 3 ಟಿ20 ಕೊನೆಯಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯಾಡಲಿದೆ.

ಭಾರತ- ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್‌ಗಳ ಸರಣಿಯಾಡುವ ಮೊದಲೇ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಮೆಚ್ಚುಗೆಯ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೌದು, ಮುಂಬರುವ ವರ್ಷಗಳಲ್ಲಿ ಟೀಂ ಇಂಡಿಯಾ ನಾಯಕರಾಗಬಲ್ಲ ಪ್ರಬಲ ಆಟಗಾರರ ಪೈಕಿ ಶ್ರೇಯಸ್ ಅಯ್ಯರ್ ಕೂಡಾ ಒಬ್ಬರು ಎಂದು ಕ್ಯಾರಿ ಅಭಿಪ್ರಾಯ ಪಟ್ಟಿದ್ದಾರೆ.

ಶ್ರೇಯಸ್ ಅಯ್ಯರ್‌ಗೆ ಟೀಂ ಇಂಡಿಯಾ ನಾಯಕನಾಗುವ ಎಲ್ಲಾ ಸಾಮರ್ಥ್ಯವಿದೆ. ಮುಂದೊಂದು ದಿನ ಅವರೊಬ್ಬ ಅದ್ಭುತನಾಗಿ ಬೆಳೆಯುವ ಗುಣ ಅವರಲ್ಲಿದೆ ಎಂದು ಹಿಂದೂಸ್ಥಾನ ಟೈಮ್ಸ್ ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಆಡುತ್ತಿದ್ದಾರೆ.

ಶ್ರೇಯಸ್ ಬಗ್ಗೆ ಮತ್ತೊಂದು ಧನಾತ್ಮಕ ಅಂಶವೆಂದರೆ ಅವರು ಎಲ್ಲರ ಜತೆ ಬೆರೆಯುತ್ತಾರೆ. ತನ್ನ ಪ್ರದರ್ಶನಕ್ಕಿಂತ ಹೆಚ್ಚಾಗಿ ತಂಡದ ಪ್ರದರ್ಶನದ ಬಗ್ಗೆ ಅಯ್ಯರ್ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ ಎಂದು ಕ್ಯಾರಿ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಇನ್ನೂ ಯುವ ಆಟಗಾರನಾಗಿದ್ದು, ಹೊಸತನ್ನು ಕಲಿಯುವ ಗುಣವಿದೆ. ಅಯ್ಯರ್ ಒಳ್ಳೆಯ ಬ್ಯಾಟ್ಸ್‌ಮನ್ ಮಾತ್ರವಲ್ಲ ಅದ್ಭುತ ವ್ಯಕ್ತಿ ಕೂಡಾ ಹೌದು ಎಂದು ಗುಣಗಾನ ಮಾಡಿದ್ದಾರೆ.

ಪಂದ್ಯದ ಬಗ್ಗೆ ಧನಾತ್ಮಕ ಮನೋಭಾವ, ರಿಕಿ ಪಾಂಟಿಂಗ್ ಜತೆಗಿನ ಒಡನಾಟ ಡೆಲ್ಲಿ ತಂಡಕ್ಕೆ ವರವಾಗಿದ್ದು, ಶ್ರೇಯಸ್ ಅಯ್ಯರ್ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ ಎಂದು ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ.

2018ರ ಐಪಿಎಲ್ ಟೂರ್ನಿಯ ಮಧ್ಯಭಾಗದಲ್ಲೇ ಡೆಲ್ಲಿ ತಂಡದ ನಾಯಕತ್ವಕ್ಕೆ ಗೌತಮ್ ಗಂಭೀರ್ ವಿದಾಯ ಹೇಳಿದ್ದರು. ಆಗ ಡೆಲ್ಲಿ ಫ್ರಾಂಚೈಸಿ ಅಯ್ಯರ್‌ಗೆ ಪಟ್ಟ ಕಟ್ಟಿತ್ತು.

ಬಳಿಕ 2019ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 7 ವರ್ಷಗಳ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ ಹಂತ ಪ್ರವೇಶಿಸಿತ್ತು.

ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಕ್ರಮವಾಗಿ ಶ್ರೇಯಸ್ ಅಯ್ಯರ್ ಡೆಲ್ಲಿ ಪರ 411, 463 ಹಾಗೂ 519 ರನ್ ಬಾರಿಸಿ ಗಮನ ಸೆಳೆದಿದ್ದಾರೆ.