Team India ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರಿಂದ ಗ್ಯಾಂಗ್‌ಸ್ಟರ್ ಪತ್ನಿ ಮೇಲೆ ರೇಪ್ ಆರೋಪ..!
ಬೆಂಗಳೂರು: ಕುಖ್ಯಾತ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ (Dawood Ibrahim) ಅವರ ಸಹಚರ ರಿಯಾಜ್ ಭಾಟಿ (Riyaz Bhati) ಪತ್ನಿ ರೆಹನೂಮಾ ಭಾಟಿ ಟೀಂ ಇಂಡಿಯಾ ಕ್ರಿಕೆಟಿಗ ಸೇರಿದ ಕೆಲವು ವ್ಯಕ್ತಿಗಳ ಮೇಲೆ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ ಮುಂಬೈ ಪೊಲೀಸರ (Mumbai Police) ಬಳಿ ಕೇಸ್ ದಾಖಲಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದಾವೂದ್ ಇಬ್ರಾಹಿಂ ಅವರ ಸಹಚರ ರಿಯಾಜ್ ಭಾಟಿ 'ಹೈ ಫ್ರೊಫೈಲ್' ವ್ಯಕ್ತಿಗಳ ಜತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಪಡಿಸುತ್ತಿದ್ದರು ಎಂದು ಅವರ ಪತ್ನಿ ರೆಹನೂಮಾ ಭಾಟಿ ಗಂಭೀರ ಆರೋಪ ಮಾಡಿದ್ದಷ್ಟೇ ಅಲ್ಲದೇ ಕೇಸ್ ಕೂಡಾ ದಾಖಲಿಸಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಮಾಜಿ ಕ್ರಿಕೆಟಿಗ ಮುನಾಫ್ ಪಟೇಲ್, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಬಿಸಿಸಿಐ ಮಾಜಿ ಚೇರ್‌ಮನ್ ರಾಜೀವ್ ಶುಕ್ಲಾ ಹಾಗೂ ಪೃಥ್ವಿರಾಜ್ ಕೊಠಾರಿ ತಮ್ಮನ್ನು ಅತ್ಯಾಚಾರ ಮಾಡಿರುವುದಾಗಿ ರೆಹನೂಮಾ ಭಾಟಿ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಪತಿ ರಿಯಾಜ್ ಭಾಟಿ ಕೂಡಾ ಓರ್ವ ಶಂಕಿತ ಗ್ಯಾಂಗ್‌ಸ್ಟರ್ ಅಗಿದ್ದಾರೆ. ಅವರು ತಮ್ಮ ಬ್ಯುಸಿನೆಸ್ ಸಹಚರರೊಂದಿಗೆ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಜತೆ ಲೈಂಗಿಕ ಸಂಬಂಧ ನಡೆಸುವಂತೆ ಬಲವಂತ ಮಾಡಿದ್ದಾರೆ ಎಂದು ರೆಹನೂಮಾ ಭಾಟಿ ಆರೋಪಿಸಿದ್ದಾರೆ.
ಹೀಗಿದ್ದೂ ರೆಹನೂಮಾ ಭಾಟಿ, ಎಲ್ಲಿ? ಯಾವಾಗ? ಅತ್ಯಾಚಾರ ನಡೆದಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಅಥವಾ ಪುರಾವೆಯನ್ನು ನೀಡಿಲ್ಲ. ಆದರೆ ತಮ್ಮನ್ನು ರೇಪ್ ಮಾಡಿರುವುದು ಪಾಂಡ್ಯ, ಪಟೇಲ್ ಹಾಗೂ ಶುಕ್ಲಾ ಎನ್ನುವುದನ್ನು ಗುರುತಿಸಿದ್ದಾರೆ.
ಈ ಘಟನೆಯ ಕುರಿತಂತೆ ನಾನು ಪೊಲೀಸರಲ್ಲಿ FIR ದಾಖಲಿಸಲು ಸಾಕಷ್ಟು ಕಷ್ಟಪಡಬೇಕಾಯಿತು. ನಾನು ಸೆಪ್ಟೆಂಬರ್‌ನಲ್ಲಿಯೇ ದೂರು ಸಲ್ಲಿಸಿದ್ದೇನೆ. ಈಗ ನವೆಂಬರ್ ಬಂದರೂ ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ ಎಂದು The Print ಗೆ ನೀಡಿದ ಸಂದರ್ಶನದಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ.
ನಾನು ವಿವಿಧ ಹಂತಗಳಲ್ಲಿ ಹಲವಾರು ಬಾರಿ ತನಿಖೆ ಪ್ರಗತಿಯ ಕುರಿತಂತೆ ವಿಚಾರಣೆ ನಡೆಸಿದ್ದೇನೆ. ನನ್ನಲ್ಲಿ ಕೆಲವರು ಹಣವನ್ನು ಕೇಳಿದರು. ಆದರೆ ನಾನು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಲಿಲ್ಲ. ನಾನು ಸರಿಯಾದ ದಾರಿಯಲ್ಲಿದ್ದೇನೆ. ನಿಜಕ್ಕೂ ಅವರು ಕ್ರಿಮಿನಲ್‌ಗಳು ಎಂದು ರೆಹನೂಮಾ ಭಾಟಿ ಹೇಳಿದ್ದಾರೆ.
ವಿವಿಧ ಸಂದರ್ಭದಲ್ಲಿ ತಮ್ಮ ಪತಿ ರಿಯಾಜ್ ಭಾಟಿ ತಮಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಸೆಪ್ಟೆಂಬರ್ 24ರಂದು ದಾಖಲಿಸಿದ ದೂರಿನಲ್ಲಿ ರೆಹನೂಮಾ ಭಾಟಿ ಉಲ್ಲೇಖಿಸಿದ್ದಾರೆ.
ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಮುನಾಫ್ ಪಟೇಲ್ ಜತೆ ಮಲಗಲು ಬಲವಂತ ಮಾಡಲಾಯಿತು. ಇದಾದ ಬಳಿಕ ಟ್ರಿಡೆಂಟ್ ಹೋಟೆಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಲವಂತವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಮುನಾಫ್ ಪಟೇಲ್ ಜತೆ ಮಲಗಲು ಬಲವಂತ ಮಾಡಲಾಯಿತು. ಇದಾದ ಬಳಿಕ ಟ್ರಿಡೆಂಟ್ ಹೋಟೆಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಲವಂತವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಅದರಲ್ಲೂ ಹಾರ್ದಿಕ್ ಪಾಂಡ್ಯ ಹಾಗೂ ಮತ್ತವರ ಇಬ್ಬರು ಸ್ನೇಹಿತರು ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ರೇಪ್ ಮಾಡುವಾಗ ಅವರೆಲ್ಲರೂ ಪಾನಮತ್ತರಾಗಿದ್ದರು ಎಂದು ಆರೋಪಿಸಿದ್ದಾರೆ.
ಇನ್ನು ರಾಜೀವ್ ಶುಕ್ಲಾ ಜತೆ ಮಲುಗಲು ನಿರಾಕರಿಸಿದಾಗ, ರಾಜೀವ್ ಶುಕ್ಲಾ ಹಾಗೂ ಮತ್ತವರ ಸಹಚರರು ಬೆತ್ತಲೆಯಾಗಿ ನನ್ನನ್ನು ನೃತ್ಯ ಮಾಡುವಂತೆ ಮಾಡಿದರು. 2012-13ರಲ್ಲಿ ಮೊದಲ ಬಾರಿ ಈ ರೀತಿ ಕೃತ್ಯ ನಡೆದಿತ್ತು. ಇದರ ಫೋಟೋಗಳನ್ನು ಇಟ್ಟುಕೊಂಡು ನನ್ನನ್ನು ಶೋಷಿಸಲಾಗಿದೆ ಎಂದು ಆರೋಪಿಸಿದ್ದಾರೆ.