ರಾಹುಲ್ ದ್ರಾವಿಡ್ ಪತ್ನಿ ಯಾರು? ದಿ ವಾಲ್ ಖ್ಯಾತಿಯ ದ್ರಾವಿಡ್ ಪತ್ನಿ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು
ಬೆಂಗಳೂರು: ಭಾರತ ಕ್ರಿಕೆಟ್ ಕಂಡ ದಿಗ್ಗಜ ಆಟಗಾರ, ಯಶಸ್ವಿ ಕೋಚ್ ಎನಿಸಿಕೊಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ದ್ರಾವಿಡ್ ಪತ್ನಿಯ ಬಗ್ಗೆ ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಬನ್ನಿ ನಾವಿಂದು ದ್ರಾವಿಡ್ ಪತ್ನಿ ವಿಜೇತಾ ಅವರ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ದ್ರಾವಿಡ್ ಆಟಗಾರನಾಗಿ ಸಾಧಿಸಲಾಗದ್ದನ್ನು, ಕೋಚ್ ಆಗಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಇದೀಗ ಹೊಸ ಸವಾಲು ಸ್ವೀಕರಿಸಲು ಸಜ್ಜಾಗಿದ್ದಾರೆ. ಐಪಿಎಲ್‌ಗೆ ಸುಮಾರು 9 ವರ್ಷಗಳ ನಂತರ ರಾಹುಲ್ ದ್ರಾವಿಡ್ ಮರಳುತ್ತಿದ್ದಾರೆ.
ಹೌದು, ಇದೀಗ ರಾಹುಲ್ ದ್ರಾವಿಡ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ. ಈ ಮೂಲಕ ದ್ರಾವಿಡ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ದ್ರಾವಿಡ್ ಪತ್ನಿ ವಿಜೇತಾ ಪೆಂಡರ್ಕರ್ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ.
ರಾಹುಲ್ ದ್ರಾವಿಡ್ ಜನವರಿ 11, 1973 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಶರದ್ ದ್ರಾವಿಡ್ ಜಾಮ್ ಮತ್ತು ಪ್ರಿಸರ್ವ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ದ್ರಾವಿಡ್‌ಗೆ ಜ್ಯಾಮಿ ಎಂದು ಅಡ್ಡ ಹೆಸರು ಇದೆ.
ಇನ್ನು ರಾಹುಲ್ ದ್ರಾವಿಡ್ ಅವರ ಪತ್ನಿ ವಿಜೇತಾ ಪೆಂಡರ್ಕರ್, ವೃತ್ತಿಯಲ್ಲಿ ಸರ್ಜನ್. ವಿಜೇತಾ ವಾಯುಪಡೆಯ ವಿಂಗ್ ಕಮಾಂಡರ್ ಕುಟುಂಬದಲ್ಲಿ ಜನಿಸಿದರು. ವಿಜೇತಾ ಪೆಂಡರ್ಕರ್ ಅವರ ಬಾಲ್ಯ ವಿವಿಧ ಸ್ಥಳಗಳಲ್ಲಿ ಕಳೆಯಿತು.
ವಿಜೇತಾ ಪೆಂಡರ್ಕರ್ ದೆಹಲಿಯ ಬಾಲ್ ಭಾರತಿ ಶಾಲೆಯಲ್ಲಿ ಶಿಕ್ಷಣ ಪೂರ್ಣಗೊಳಿಸಿದರು ಮತ್ತು ನಂತರ ನಾಗ್ಪುರದ ಶ್ರೀ ಶಿವಾಜಿ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು.
ನಂತರ ವಿಜೇತಾ ಪೆಂಡರ್ಕರ್ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು ಮತ್ತು 2002 ರಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.
ಒಬ್ಬ ಸರ್ಜನ್ ಆಗಿ ವಿಜೇತಾ ಸಂಪೂರ್ಣವಾಗಿ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಆ ದಿನಗಳಲ್ಲಿ ಅವರಿಗೆ ಕ್ರಿಕೆಟ್ ಅಥವಾ ಕ್ರೀಡಾ ಸುದ್ದಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ರಾಹುಲ್ ದ್ರಾವಿಡ್ ಪ್ರಕಾರ, ಅವರ ಪತ್ನಿ ಕ್ರಿಕೆಟ್ ಸುದ್ದಿಗಳ ಬಗ್ಗೆ ತಿಳಿದಿಲ್ಲದ ಕಾರಣ, ಅವರ ವೃತ್ತಿಜೀವನ ಮತ್ತು ಕ್ರಿಕೆಟ್ ಒತ್ತಡದ ದಿನಗಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಅವರಿಗೆ ಸಾಕಷ್ಟು ಸಹಾಯವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಮದುವೆಯಾದ ಕೆಲವು ವರ್ಷಗಳ ನಂತರ, ವಿಜೇತಾ ತನ್ನ ವೃತ್ತಿಜೀವನವನ್ನು ತ್ಯಜಿಸಿದರು ಇದರಿಂದ ಅವರು ಕುಟುಂಬವನ್ನು ನೋಡಿಕೊಳ್ಳಬಹುದು. ಕ್ರಿಕೆಟ್‌ನಿಂದಾಗಿ ರಾಹುಲ್ ಆಗಾಗ್ಗೆ ಮನೆಯಿಂದ ದೂರವಿರುತ್ತಿದ್ದರು, ಆದ್ದರಿಂದ ವಿಜೇತಾ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡರು.