ಬಾಲಿವುಡ್‌ನ ಈ ನಟಿ ಜೊತೆ ಡೇಟಿಂಗ್ ಮಾಡ್ತಾ ಇದ್ರಾ ಕ್ರಿಕೆಟಿಗ ರಿಷಬ್ ಪಂತ್?
ಕ್ರಿಕೆಟಿಗೂ ಬಾಲಿವುಡ್‌ಗೂ ಬಹಳ ಹಳೆಯ ಸಂಬಂಧ. ಕ್ರಿಕೆಟ್ ತಾರೆಯರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್ ನಡೆಸುವುದು ಹೊಸದೇನಲ್ಲ. ಟೀಮ್ ಇಂಡಿಯಾದ ಯಂಗ್ ಪ್ರಾಮಿಸ್ಸಿಂಗ್ ಆಟಗಾರ ರಿಷಭ್ ಪಂತ್, ಐಪಿಎಲ್ 2018ರ ಸಮಯದಲ್ಲಿ ತಮ್ಮ ಆಟದ ಮೂಲಕ ಸಖತ್ ಫೇಮಸ್ ಆಗಿದ್ದರು. ಹಾಗೇ ಅವರ ಪರ್ಸನಲ್ ಲೈಪ್ ಕೂಡ ನ್ಯೂಸ್ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಪಂತ್ ಬಾಲಿವುಡ್‌ನ ನಟಿಯೊಂದಿಗೆ ಡೇಟ್ ಮಾಡುತ್ತಿರುವುದಾಗಿ ವರದಿಗಳು ಹೇಳಿದ್ದವು. ಯಾರಾದು ಆ ನಟಿ?
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ರಿಷಭ್ ಪಂತ್. 22 ವರ್ಷದ ಯಂಗ್ ಕ್ರಿಕೆಟರ್ ಎಲ್ಲಾ ರೀತಿಯ ಕ್ರಿಕೆಟಿನಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
2018ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡದೊಂದಿಗೆ ಇದ್ದ ರಿಷಬ್ ಪಂತ್ ತಮ್ಮ ಅದ್ಭುತ ಆಟದ ಮೂಲಕ ಸಖತ್ ಫೇಮಸ್ ಆಗಿದ್ದರು.
ಆ ಸಮಯದಲ್ಲಿ ಅವರ ಹೆಸರು ಬಾಲಿವುಡ್‌ನ ನಟಿಯೊಂದಿಗೆ ಕೇಳಿಬಂದಿತ್ತು. ಯಾರು ಗೊತ್ತಾ ಆ ನಟಿ?
ಐಪಿಎಲ್ 2018ರ ನಂತರದ ದಿನಗಳಲ್ಲಿ ರಿಷಬ್ ಪಂತ್ ಹಾಗೂ ಸಾರಾ ಆಲಿ ಖಾನ್ ರಿಲೆಷನ್‌ಶಿಪ್‌ದಲ್ಲಿದ್ದಾರೆ ಎಂಬ ಸುದ್ದಿಯಾಗಿತ್ತು.
ಸಾರಾ ರಿಷಬ್‌ರಿಗೆ ಚಿಯರ್ ಮಾಡುತ್ತಾ ಮತ್ತು ಅವರ ಜೊತೆಗೂ ಕಾಣಿಸಿಕೊಂಡಿದ್ದರು.
ಆದರೆ ಪಂತ್ ಹಾಗೂ ಸಾರಾ ಇಬ್ಬರ ಕಡೆಯಿಂದನೂ ಈ ಬಗ್ಗೆ ಯಾವುದೇ ಕನ್ಫರ್ಮೇಷನ್ ಬಂದಿರಲಿಲ್ಲ.
ಆದರೆ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
ಆ ದಿನಗಳಲ್ಲಿ ಸಾರಾ ಇನ್ನೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರಲಿಲ್ಲ. ಈಗ ಅವರ ಒಂದೆರಡು ಸಿನಿಮಾಗಳು ಹಿಟ್ ಆಗಿದ್ದು, ಸಾಕಷ್ಟು ಬೇಡಿಕೆ ಇರುವ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಾರಾ ಆಲಿ ಖಾನ್ ಅವರ ಫಸ್ಟ್ ಕ್ರಶ್ ರಿಷಬ್ ಪಂತ್ ಎನ್ನಲಾಗುತ್ತದೆ. ಈ ನಟಿಯ ಹೆಸರು ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೂ ಕೇಳಿ ಬಂದಿತ್ತು. ಸೈಫ್ ಆಲಿ ಖಾನ್ ಮಗಳಾದ ಈಕೆಯ ಹೆಸರು ಇತ್ತೀಚೆಗೆ ಕೇಳ ಬಂದ ಡ್ರಗ ಪ್ರಕರಣದಲ್ಲಿಯೂ ಥಳಕು ಹಾಕಿ ಕೊಂಡಿತ್ತು.