ತೆಂಡುಲ್ಕರ್ 100 ಶತಕಗಳ ದಾಖಲೆಯನ್ನು ವಿರಾಟ್ ಮುರಿಯಬಹುದು ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಎನಿಸಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿಯಬಹುದು ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದಾಖಲೆಯ ವಿಚಾರದಲ್ಲಿ ಸಚಿನ್ ತೆಂಡುಲ್ಕರ್‌ಗಿಂತ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಹೇಳಿದ್ದಾರೆ.

ವಿಶ್ವದಾಖಲೆಯ ವಿಚಾರದಲ್ಲಿ ಸಚಿನ್ ತೆಂಡುಲ್ಕರ್‌ಗಿಂತ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಹೇಳಿದ್ದಾರೆ.

ಮೂರು ಮಾದರಿಯ ಕ್ರಿಕೆಟ್‌ನಲ್ಲಿ 31 ವರ್ಷದ ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ತವರಿನಲ್ಲಿ ಹಾಗೂ ತವರಿನಾಚೆ ಕೂಡಾ ವಿರಾಟ್ ಸರಾಗವಾಗಿ ರನ್ ಬಾರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಪ್ರತಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಏನಿಲ್ಲವೆಂದರೂ ಒಂದು ಅಥವಾ ಎರಡು ಶತಕ ಬಾರಿಸುವ ಮೂಲಕ ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲವಾಗಿದ್ದಾರೆ.
ಇದುವರೆಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 43 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 27 ಶತಕಗಳು ವಿರಾಟ್ ಹೆಸರಿನಲ್ಲಿದೆ.
ಸಚಿನ್ ತೆಂಡುಲ್ಕರ್ ವಿಶ್ವದಾಖಲೆಯ 463 ಏಕದಿನ ಹಾಗೂ 200 ಟೆಸ್ಟ್ ಪಂದ್ಯಗಳನ್ನಾಡಿ 100 ಶತಕಗಳನ್ನು ಬಾರಿಸಿದ್ದಾರೆ. (ಟೆಸ್ಟ್‌ನಲ್ಲಿ 51 ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಬಾರಿಸಿದ್ದಾರೆ)
ಇದೀಗ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಸಚಿನ್ ತೆಂಡುಲ್ಕರ್ ಅವರ ಶತಕ ಶತಕದ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲಿದ್ದಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ,
ಸಚಿನ್ ತೆಂಡುಲ್ಕರ್ ಬಾರಿಸಿದ ನೂರು ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಬಹುದು ಎಂದು ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಪಠಾಣ್ ಹೇಳಿದ್ದಾರೆ.
ವಿರಾಟ್ ಅಲ್ಪಾವಧಿಯಲ್ಲಿಯೇ ಸಾಕಷ್ಟು ಸಾಧನೆ ಮಾಡಿದ್ದಾರೆ. ವಿರಾಟ್‌ಗಿರುವ ಸಾಮರ್ಥ್ಯ ಹಾಗೂ ಫಿಟ್ನೆಸ್ ಕಾರಣದಿಂದಾಗಿ 100 ಶತಕಗಳ ಸಾಧನೆ ಮಾಡಲು ಸಾಧ್ಯ ಎಂದು ಬರೋಡ ಮೂಲದ ಎಡಗೈ ಬೌಲರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದು, ದುಬೈ ತಲುಪಿದ್ದಾರೆ.
ಈ ವರ್ಷಾಂತ್ಯದ ವೇಳೆಗೆ ಟೀಂ ಇಂಡಿಯಾದ ಅಂತಾರಾಷ್ಟ್ರೀಯ ಸರಣಿಗಳು ಆರಂಭವಾಗಲಿದೆ. ಸೀಮಿತ ಓವರ್‌ಗಳ ಹಾಗೆಯೇ ಟೆಸ್ಟ್ ಸರಣಿಯಾಡಲು ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.