ನಾಕೌಟ್ ಪಂದ್ಯಗಳಲ್ಲಿ ಫೇಲ್ ಆಗುವ ಟಾಪ್ 5 ಸ್ಟಾರ್ ಆಟಗಾರರಿವರು..!
ಬೆಂಗಳೂರು: ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಹಲವಾರು ದಿಗ್ಗಜ ಆಟಗಾರರನ್ನು ಕಂಡಿದೆ. ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್, ಗ್ಲೆನ್ ಮೆಗ್ರಾತ್, ವಿವಿನ್ ರಿಚರ್ಡ್ಸ್ ಅವರಂತಹ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ಮಿಂಚಿ ಆದರ್ಶಪ್ರಾಯರಾಗಿದ್ದಾರೆ.ಏಕದಿನ ಕ್ರಿಕೆಟ್ ಆರಂಭವಾದಾಗಿನಿಂದ ಇದುವರೆಗೂ 12 ಎಕದಿನ ವಿಶ್ವಕಪ್‌ಗಳು ಜರುಗಿವೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಆಟಗಾರರು, ನಾಕೌಟ್ ಹಂತ(ಮಾಡು ಇಲ್ಲವೇ ಮಡಿ)ದ ಮಹತ್ವದ ಪಂದ್ಯದಲ್ಲೇ ಕೈಕೊಟ್ಟು ಬಿಡುತ್ತಾರೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ನಿರೀಕ್ಷೆ ಹುಸಿ ಮಾಡಿಬಿಡುತ್ತಾರೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿ ನಾಕೌಟ್ ಹಂತದಲ್ಲಿ ಫೇಲ್ ಆದ ಟಾಪ್ 5 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆನೋಡಿ ಉತ್ತರ.
110

1. ಅಬ್ದುಲ್ ರಜಾಕ್
1. ಅಬ್ದುಲ್ ರಜಾಕ್
210
ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ರನ್ ಗಳಿಸಲು ಪರದಾಡುತ್ತಿದ್ದ ಕಾಲದಲ್ಲೇ 81.25 ಸ್ಟ್ರೈಕ್‌ರೇಟ್ ಹೊಂದಿದ್ದರು. ಆದರೆ ರಜಾಕ್ ಆಡಿದ 28 ನಾಕೌಟ್ ಪಂದ್ಯಗಳಲ್ಲಿ ಕೇವಲ 18 ಸರಾಸರಿಯಲ್ಲಿ 347 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲೂ ರಜಾಕ್ ಕೇವಲ 21 ವಿಕೆಟ್ ಪಡೆದು ನಿರಾಸೆ ಅನುಭವಿಸಿದ್ದಾರೆ.

310
2. ರಾಸ್ ಟೇಲರ್
2. ರಾಸ್ ಟೇಲರ್
410
ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭ ರಾಸ್ ಟೇಲರ್ ಕೂಡಾ ಮಹತ್ವದ ಪಂದ್ಯಗಳಲ್ಲಿ ರನ್ ಬಾರಿಸಿದ್ದಕ್ಕಿಂತ ಎಡವಿದ್ದೇ ಹೆಚ್ಚು. 2007ರಿಂದೀಚೆಗೆ ಟೇಲರ್ 10 ನಾಕೌಟ್ ಪಂದ್ಯಗಳನ್ನಾಡಿದ್ದು, 33ರ ಸರಾಸರಿಯಲ್ಲಿ 333 ರನ್ ಬಾರಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೇಲರ್ 74 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಯಾವ ಪಂದ್ಯಗಳಲ್ಲೂ ಅಂತಹ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ವಿಶ್ವಕಪ್ ಫೈನಲ್‌ನಲ್ಲಿ ಕೇವಲ 15 ರನ್ ಬಾರಿಸಿ ಮಾರ್ಕ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.

510
3. ವಿರಾಟ್ ಕೊಹ್ಲಿ
3. ವಿರಾಟ್ ಕೊಹ್ಲಿ
610
ರನ್ ಮಷೀನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 59.33ರ ಸರಾಸರಿಯಲ್ಲಿ 43 ಶತಕ ಬಾರಿಸಿದ್ದಾರೆ. ಮಹತ್ವದ ಪಂದ್ಯಗಳ ವಿಚಾರಕ್ಕೆ ಬಂದಾಗ ಕೊಹ್ಲಿ ರನ್ ಬಾರಿಸಿದ್ದಕ್ಕಿಂತ ವೈಫಲ್ಯ ಅನುಭವಿಸಿದ್ದೇ ಹೆಚ್ಚು. 15 ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ ಕೇವಲ 28.83ರ ಸರಾಸರಿಯಲ್ಲಿ 346 ರನ್ ಬಾರಿಸಿದ್ದಾರೆ. ಅದರಲ್ಲೂ ಕಳೆದ 5 ನಾಕೌಟ್ ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಎರಡಂಕಿ ಮೊತ್ತ ದಾಖಲಿಸಲು ಕೊಹ್ಲಿಗೆ ಸಾಧ್ಯವಾಗಿಲ್ಲ.

710
4. ಹಾಶೀಂ ಆಮ್ಲಾ
4. ಹಾಶೀಂ ಆಮ್ಲಾ
810
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಹರಿಣಗಳ ಪಾಳಯದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಆಮ್ಲಾ ನಾಕೌಟ್ ಪಂದ್ಯದಲ್ಲಿ ಸಂಪೂರ್ಣ ನಿರಾಸೆ ಅನುಭವಿಸಿದ್ದಾರೆ. 5 ನಾಕೌಟ್ ಪಂದ್ಯಗಳನ್ನಾಡಿರುವ ಆಮ್ಲಾ 17ರ ಸರಾಸರಿಯಲ್ಲಿ ಕೇವಲ 85 ರನ್‌ಗಳನ್ನಷ್ಟೇ ಬಾರಿಸಿದ್ದಾರೆ.

910
5. ನುವಾನ್ ಕುಲಸೇಖರ
5. ನುವಾನ್ ಕುಲಸೇಖರ
1010
14 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನದಲ್ಲಿ ಶ್ರೀಲಂಕಾದ ನುವಾನ್ ಕುಲಸೇಖರ 184 ಪಂದ್ಯಗಳನ್ನಾಡಿ 199 ವಿಕೆಟ್ ಕಬಳಿಸಿದ್ದಾರೆ. ಕೆಲ ತಿಂಗಳುಗಳ ಕಾಲ ಕುಲಸೇಖರ್ ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದರು. ನಾಕೌಟ್ ವಿಚಾರಕ್ಕೆ ಬಂದರೆ ಕುಲಸೇಖರ ಬೌಲಿಂಗ್ ಮೊನಚು ಕಳೆದುಕೊಳ್ಳುತ್ತಿತ್ತು. 16 ನಾಕೌಟ್ ಪಂದ್ಯಗಳಲ್ಲಿ 42.40 ಸರಾಸರಿಯಲ್ಲಿ ರನ್ ನೀಡಿ ಕೇವಲ 15 ವಿಕೆಟ್‌ಗಳನ್ನಷ್ಟೇ ಕಬಳಿಸಲು ಶಕ್ತರಾಗಿದ್ದಾರೆ.

Latest Videos