ವಿವಾದಗಳಿಂದ ವೃತ್ತಿ ಬದುಕು ಹಾಳು ಮಾಡಿಕೊಂಡ ಟಾಪ್ 5 ಕ್ರಿಕೆಟಿಗರಿವರು

First Published 15, Apr 2020, 3:41 PM

ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ನ ಇನ್ನೊಂದು ಮುಖವು ಅನಾವರಣಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗೆ ಕೆಲ ಕ್ರಿಕೆಟಿಗರು ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ಕ್ರಿಕೆಟಿಗರು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ವೃತ್ತಿಜೀವನವನ್ನೇ ಹಾಳುಮಾಡಿಕೊಂಡವರಿದ್ದಾರೆ.
ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಹಲವು ಕ್ರಿಕೆಟಿಗರಿಗೆ ಗಗನ ಕುಸುಮವಾಗಿಯೇ ಉಳಿದಿರುತ್ತದೆ. ಅಂತಹದ್ದರಲ್ಲಿ ಕೆಲವು ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು, ಮಿಂಚಿ ಆ ಬಳಿಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ವೃತ್ತಿಬದುಕು ಹಾಳು ಮಾಡಿಕೊಂಡವರಿದ್ದಾರೆ. ಅಂತಹ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ.
1. ಎಸ್. ಶ್ರೀಶಾಂತ್

1. ಎಸ್. ಶ್ರೀಶಾಂತ್

ವೇಗದ ಬೌಲರ್‌ ಆಗಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ಎಸ್. ಶ್ರೀಶಾಂತ್ ಆರಂಭದ ದಿನಗಳಲ್ಲೇ ತಮ್ಮ ಅತಿರೇಕದ ವರ್ತನೆಗಳಿಂದಾಗಿ ಈತ ವಿವಾದಗಳ ಕೂಸು ಆಗಬಹುದು ಎನ್ನುವ ಸೂಚನೆ ನೀಡಿದ್ದ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುವಾಗ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಶ್ರೀಶಾಂತ್ ನಿಷೇಧಕ್ಕೆ ಗುರಿಯಾದರು.

ಇದಾದ ಬಳಿಕ ಕೇರಳ ವೇಗಿಯ ಕ್ರಿಕೆಟ್ ಕಮ್‌ಬ್ಯಾಕ್ ಕನಸು ಕಮರಿ ಹೋಯಿತು.

2. ಶೋಯೆಬ್ ಅಖ್ತರ್

2. ಶೋಯೆಬ್ ಅಖ್ತರ್

ಸಾರ್ವಕಾಲಿಕ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ವೇಗಿ ಎಂದರೆ ಅದು ಪಾಕಿಸ್ತಾನದ ಶೋಯೆಬ್ ಅಖ್ತರ್. ಆದರೆ ವಿವಾದಗಳು 'ರಾವುಲ್‌ಪಿಂಡಿ' ಎಕ್ಸ್‌ಪ್ರೆಸ್‌ನ್ನು ಬಿಟ್ಟಿಲ್ಲ. 2003ರಲ್ಲಿ ತ್ರಿಕೋನ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿ 5 ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು. ಆ ಬಳಿಕ ಪೌಲ್ ಆಡ್ಸಂ ಅವರನ್ನು ಅವಾಚ್ಯ ಶಬ್ಧಗಳಿಂದ

ನಿಂಧಿಸಿ 3 ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು. 2007ರ ಟಿ20 ವಿಶ್ವಕಪ್‌ನಲ್ಲಿ ಸಹಆಟಗಾರನಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡರು. ಇದಾದ ಬಳಿಕ ಅಖ್ತರ್ ಕ್ರಿಕೆಟ್ ಬದುಕು ಕಮರಿತು.

3. ಅಂಡ್ರೂ ಸೈಮಂಡ್ಸ್

3. ಅಂಡ್ರೂ ಸೈಮಂಡ್ಸ್

ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾನ್ವಿತ ಆಲ್ರೌಂಡರ್‌ಗಳಲ್ಲಿ ಆಂಡ್ರೂ ಸೈಮಂಡ್ಸ್ ಕೂಡಾ ಒಬ್ಬರು. ಪ್ರತಿಭಾನ್ವಿತ ಎನ್ನುವ ಬಿರುದಿನ ಜತೆಗೆ ಬ್ಯಾಡ್ ಬಾಯ್ ಎನ್ನುವ ಹಣೆಪಟ್ಟಿಯೂ ಜತೆಗೆ ಇಟ್ಟುಕೊಂಡ ಕ್ರಿಕೆಟಿಗನೆಂದರೆ ಅದು ಸೈಮಂಡ್ಸ್. ಸೈಮಂಡ್ಸ್ ಒಂದು ರೀತಿ ಮೂಡಿ ಆಟಗಾರ. 2009ರಲ್ಲಿ ಕುಡಿದುಕೊಂಡು ಹೋಗಿ ರೇಡಿಯೋ ಸಂದರ್ಶನ ನೀಡಿದ್ದರು, ಮಾತ್ರವಲ್ಲ ಕಿವೀಸ್ ಆಟಗಾರ ಬ್ರೆಂಡನ್ ಮೆಕ್ಕಲಂ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೈಮಂಡ್ಸ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು, ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಬಾರದು ಎನ್ನುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿತು. ಈ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸೈಮಂಡ್ಸ್ ರಗ್ಬಿ ಪಂದ್ಯ ವೀಕ್ಷಿಸುವ ವೇಳೆ ಡ್ರಿಂಕ್ಸ್ ಮಾಡಿ ಮತ್ತೆ ಸಿಕ್ಕಿಬಿದ್ದರು, ಅಲ್ಲಿಗೆ ಸೈಮಂಡ್ಸ್ ಆಟ ಮುಗಿಯಿತು.

4. ಮೊಹಮ್ಮದ್ ಆಸಿಫ್

4. ಮೊಹಮ್ಮದ್ ಆಸಿಫ್

2006ರಲ್ಲಿ ಪಾಕ್ ತಂಡದ ಪರ ಪಾದಾರ್ಪಣೆ ಮಾಡಿದ ವೇಗಿ ಮೊಹಮ್ಮದ್ ಆಸಿಫ್, ಆರಂಭದ ದಿನಗಳಲ್ಲಿ ತಮ್ಮ ಇನ್‌ಸ್ವಿಂಗ್ ಹಾಗೂ ಔಟ್‌ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬುಗೊಳಿಸುತ್ತಿದ್ದರು. ಹಲವು ಕ್ರಿಕೆಟ್ ಪಂಡಿತರು ಈತ ಅಕ್ರಂ, ವಕಾರ್ ಯೂನಿಸ್ ಸಾಲಿಗೆ ಸೇರಬಲ್ಲರು ಎಂದು ಷರ ಬರೆದುಬಿಟ್ಟಿದ್ದರು. 2006ರಲ್ಲೇ

ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧಕ್ಕೆ ಗುರಿಯಾದರು. 2010ರಲ್ಲಿ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಹಣಕ್ಕಾಗಿ ಓವರ್‌ನಲ್ಲಿ ಒಂದು ನೋ ಬಾಲ್ ಹಾಕಲು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಸಿಕ್ಕಿಬಿದ್ದಿದ್ದರು. ಬಳಿಕ ಒಂದು ವರ್ಷ ಜೈಲು ಹಾಗೂ 5 ವರ್ಷ ಕ್ರಿಕೆಟ್ ಆಡದಂತೆ ನಿಷೇಧ ಶಿಕ್ಷೆಗೆ ಗುರಿಯಾದರು. ಅಲ್ಲಿಗೆ ಪಾಕ್ ವೇಗಿಯ ಕ್ರಿಕೆಟ್

ವೃತ್ತಿಬದುಕು ಖತಂ.

5. ಕೆವಿನ್ ಪೀಟರ್‌ಸನ್

5. ಕೆವಿನ್ ಪೀಟರ್‌ಸನ್

ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡ ಕೆವಿನ್ ಪೀಟರ್‌ಸನ್ ಕ್ರಿಕೆಟ್ ಕೆರಿಯರ್ ಕೂಡಾ ವಿವಾದಗಳಿಂದ ಅಂತ್ಯವಾಗಿದ್ದು ವಿಪರ್ಯಾಸವೇ ಸರಿ. ಬಹಿರಂಗವಾಗಿಯೇ ಕೋಚ್ ಪೀಟರ್ ಮೂರ್ಸ್ ವಿರುದ್ದ ಪೀಟರ್‌ಸನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಆ ಬಳಿಕ ನಾಯಕತ್ವದಿಂದ ಪೀಟರ್‌ಸನ್ ಅವರನ್ನು

ಕೆಳಗಿಳಿಸಲಾಯಿತು. ಇದಾದ ಬಳಿಕ 2012ರಲ್ಲಿ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ ಐಪಿಎಲ್ ಟೂರ್ನಿ ಆಡಲು ಪೀಟರ್‌ಸನ್ ಮುಂದಾಗಿದ್ದರು. ಆದರೆ ಇಸಿಬಿ ಇದಕ್ಕೆ ಅನುಮತಿ ನೀಡಲಿಲ್ಲ. ನಂತರ ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹರಿಣಗಳ ತಂಡದ ಆಟಗಾರರಿಗೆ ಅವಹೇಳನಕಾರಿ ಸಂದೇಶ ಕಳಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇನ್ನು 2014ರಲ್ಲಿ ಆಷಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ ಹೊರತಾಗಿಯೂ ನಾಯಕ ಆಂಡ್ರೂ ಸ್ಟ್ರಾಸ್ ಹಾಗೂ ಕೋಚ್ ಆಂಡಿ ಫ್ಲವರ್ ಜತೆ ಜಗಳ ಮಾಡಿಕೊಂಡು ಶಾಶ್ವತವಾಗಿ ತಂಡದಿಂದ ಹೊರಬಿದ್ದರು.

loader