ಸುಶಾಂತ್ ಇಲ್ಲದೆ MS ಧೋನಿ ಪಾರ್ಟ್ 2 ಸಾಧ್ಯವಿಲ್ಲ; ಅರುಣ್ ಪಾಂಡೆ!

First Published Jun 16, 2020, 6:08 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಹಲವು ಅನುಮಾನಗಳು ಹೆಚ್ಚಾಗತೊಡಗಿದೆ. ಕ್ರಿಕೆಟಿಗ ಎಂ.ಎಸ್.ಧೋನಿ ಆತ್ಮಚರಿತ್ರೆಯನ್ನು ತೆರೆಯ ಮೇಲೆ ತಂದ ಸುಶಾಂತ್ ಸಿಂಗ್‌, ಪ್ರತಿಭಾನ್ವಿತ ಅನ್ನೋದನ್ನು ವಿಶ್ವಕ್ಕೆ ಸಾರಿದ್ದರು.  ಧೋನಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಸುಶಾಂತ್ ದಿಢೀರ್ ಆತ್ಮಹತ್ಯೆ ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿದೆ. ಇದೀಗ ಧೋನಿ ಚಿತ್ರದ ಸಹ ನಿರ್ಮಾಪಕ ಅರುಣ್ ಪಾಂಡೆ, ಎಂ.ಎಸ್.ಧೋನಿ ಚಿತ್ರದ ಪಾರ್ಟ್ 2 ಕುರಿತು ಮಾತನಾಡಿದ್ದಾರೆ.