ಮೊಹಮ್ಮದ್ ಸಿರಾಜ್ ಬಳಿ ಈಗಲೂ ಇದೆ ಸೆಲ್ಪ್ ಸ್ಟಾರ್ಟ್ & ಕಿಕ್ಕರ್ ಇಲ್ಲದ ಬೈಕ್..!
ನವದೆಹಲಿ: ಆಟೋ ಚಾಲಕನ ಮಗ ಮೊಹಮ್ಮದ್ ಸಿರಾಜ್ ಇದೀಗ ಟೀಂ ಇಂಡಿಯಾದ ಭವಿಷ್ಯದ ಆಶಾಕಿರಣವಾಗಿ ಬೆಳೆದು ನಿಂತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸಿಕ್ಕ ಅವಕಾಶವನ್ನು ಭರಪೂರವಾಗಿ ಉಪಯೋಗಿಸಿಕೊಂಡ ಸಿರಾಜ್, ಟೆಸ್ಟ್ ಸರಣಿಯಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಆಸೀಸ್ ವಿರುದ್ದದ ಕೊನೆಯ 3 ಟೆಸ್ಟ್ ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಇದಾದ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಕರಾರುವಕ್ಕಾದ ಯಾರ್ಕರ್ ಹಾಗೂ ಬೌನ್ಸರ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳೆದುರು ಸಿರಾಜ್ ಪ್ರಾಬಲ್ಯ ಮೆರೆದಿದ್ದಾರೆ.ತಮ್ಮ ಸಂಕಷ್ಟದ ದಿನಗಳಲ್ಲಿ ವಿರಾಟ್ ಕೊಹ್ಲಿ ಹೇಗೆ ನೆರವಾಗಿದ್ದರು ಹಾಗೂ ತಮ್ಮ ಬಳಿ ಇರುವ ಹಳೆಯ ಬೈಕ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ

ಕೆಲ ವರ್ಷಗಳ ಹಿಂದೆ ಆರ್‌ಸಿಬಿ ತಂಡದ ದುಬಾರಿ ಬೌಲರ್ ಎಂದು ಟೀಕೆಗೆ ಒಳಗಾಗುತ್ತಿದ್ದ ಸಿರಾಜ್, ಇದೀಗ ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ಥ ಬೌಲರ್ ಆಗಿ ಬೆಳೆದು ನಿಂತಿದ್ದಾರೆ.

ನಾನು ಕಳೆದ ಎರಡು ವರ್ಷಗಳಲ್ಲಿ ಆರ್‌ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದರು.

ಅಷ್ಟೇ ಅಲ್ಲ ಆರ್‌ಸಿಬಿ ತಂಡದಲ್ಲಿ ಉಳಿಯಲು ಕಾರಣರಾದರು. ಇದಕ್ಕೆ ನಾನು ವಿರಾಟ್ ಕೊಹ್ಲಿಗೆ ಚಿರಋಣಿ ಎಂದು ಎಬಿಪಿ ಬೆಂಗಾಲಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದ ಸಂಕಷ್ಟದ ದಿನಗಳನ್ನು ಮೆಲುಕು ಹಾಕಿದ ಸಿರಾಜ್, ಕೆಲವು ವರ್ಷಗಳ ಹಿಂದೆ ನಾನು ಬಜಾಬ್ ಪ್ಲಾಟೀನ ಬೈಕ್ ಬಳಸುತ್ತಿದ್ದೆ. ಈಗಲೂ ಆ ಬೈಕ್ ನನ್ನ ಬಳಿಯೇ ಇದೆ ಎಂದಿದ್ದಾರೆ.

ಆ ಬೈಕ್ ಅಷ್ಟು ಸುಸ್ಥಿತಿಯಲ್ಲಿಲ್ಲದಿದ್ಡರೂ, ಈಗಲೂ ಸಹಾ ನನ್ನ ಬಳಿಯೇ ಇದೆ. ಕಾರಣ ಆ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ. ಆ ಬೈಕ್‌ಗೆ ಸೆಲ್ಪ್ ಸ್ಟಾರ್ಟ್ ಅಥವಾ ಕಿಕ್ಕರ್ ಇಲ್ಲ. ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ಸ್ಟಾರ್ಟ್ ಮಾಡುವ ಬೈಕ್ ಅದಾಗಿತ್ತು.

ಇದೇ ಬೈಕ್‌ನಲ್ಲೇ ನಾನು ನನ್ನ ಆರಂಭಿಕ ಕ್ರಿಕೆಟ್ ಜೀವನದ ಬಹುಪಾಲು ಕಳೆದಿದ್ದೇನೆ. ಈ ಬೈಕ್ ಖುಷಿ ಜತೆಗೆ ಹಿಂಜರಿಕೆಯನ್ನು ಉಂಟಾಗುವಂತೆ ಮಾಡಿತ್ತು ಎಂದು 27 ವರ್ಷದ ಸಿರಾಜ್ ಹೇಳಿದ್ದಾರೆ.

ನಾನು ಹೈದರಾಬಾದ್ ತಂಡವನ್ನು ಪ್ರತಿನಿಧಿಸುವಾಗ, ಪ್ರಾಕ್ಟೀಸ್‌ಗೆ ಅಥವಾ ಪಂದ್ಯವನ್ನಾಡಲು ಬರುವಾಗ ಇದೇ ಬೈಕ್ ಬಳಸುತ್ತಿದ್ದೆ.

ಸ್ಟೇಡಿಯಂನಿಂದ ಉಳಿದೆಲ್ಲಾ ಆಟಗಾರರ ಕಾರುಗಳು ಹೋದ ಬಳಿಕ ನಾನು ನನ್ನ ಬೈಕ್ ತಳ್ಳಿಕೊಂಡು ಹೋಗಿ ಸ್ಟಾರ್ಟ್ ಮಾಡಿಕೊಂಡು ಮನೆಗೆ ಹೋಗುತ್ತಿದ್ದೆ. ಕಾರಣ ನಮ್ಮ ಮನೆಯ ಪರಿಸ್ಥಿತಿ ಉತ್ತಮವಾಗಿರಲಿಲ್ಲ ಎಂದು ಸಿರಾಜ್ ಹೇಳಿದ್ದಾರೆ.

ಈಗ ನನ್ನ ಬಳಿ ದುಬಾರಿ ಬೆಲೆಯ ಕಾರುಗಳಿವೆ. ಆದರೆ ಈಗಲೂ ನನ್ನ ಬಳಿ ಆ ಪ್ಲಾಟೀನ ಬೈಕ್ ಇದೆ. ಅದು ನನ್ನ ಒದ್ದಾಟದ ಪ್ರತೀಕ.

ಇದೇ ಬೈಕ್ ನಾನು ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಸ್ಪೂರ್ತಿ ನೀಡುತ್ತದೆ ಎಂದು ಸಿರಾಜ್ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.