ವಿದಾಯದಿಂದ ಯುವರಾಜ್ ಸಿಂಗ್ ವಾಪಸ್, ಕೇರಳ ತಂಡಕ್ಕೆ ಶ್ರೀಶಾಂತ್ ಕಮ್‌ಬ್ಯಾಕ್!
First Published Dec 16, 2020, 2:52 PM IST
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಯುವಿ ಇದೀಗ ವಿದಾಯದಿಂದ ಮರಳಿ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇತ್ತ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿದ್ದ ವೇಗಿ ಶ್ರೀಶಾಂತ್ ಇದೀಗ ಕೇರಳ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಯುವರಾಜ್ ಸಿಂಗ್ ಹಾಗೂ ಶ್ರೀಶಾಂತ್ ಯಾವ ಟೂರ್ನಿ ಆಡಲಿದ್ದಾರೆ? ಇಲ್ಲಿದೆ ಮಾಹಿತಿ.

2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ವಿದಾಯದಿಂದ ಮರಳುತ್ತಿದ್ದಾರೆ. ಹೌದು. ಯುವಿ ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಮಹತ್ವದ ಟೂರ್ನಿಗೆ ಪ್ರಕಟಿಸಿದ ಸಂಭವನೀಯ ತಂಡದಲ್ಲಿ ಯುವಿ ಕಾಣಿಸಿಕೊಂಡಿದ್ದಾರೆ.

ಬಿಸಿಸಿಐ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿ ಆಯೋಜಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಆಯಾ ರಾಜ್ಯಗಳು ಸಂಭವನೀಯ ತಂಡ ಪ್ರಕಟಿಸುತ್ತಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?