ಪತಿ ಮೈದಾನದಲ್ಲಿ ಅಬ್ಬರಿಸದರೆ, ಪತ್ನಿ ಕೋರ್ಟ್‌ನಲ್ಲಿ ವಿರೋಧಿಗಳ ಬಾಯಿ ಮುಚ್ಚಿಸುತ್ತಾಳೆ: ಇದು ಸ್ಮಿತ್-ಡ್ಯಾನಿ ಲವ್ ಸ್ಟೋರಿ
ಬೆಂಗಳೂರು: ಸ್ಟೀವ್ ಸ್ಮಿತ್ ಯಾವ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲ ಹೇಳಿ. ತಮ್ಮ ಅಮೋಘ ಪ್ರದರ್ಶನದ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ವಿರಾಜಮಾನರಾಗಿರುವ ಸ್ಮಿತ್ ಎಲ್ಲರಿಗೂ ಗೊತ್ತು. ಆದರೆ ಸ್ಮಿತ್ ಲವ್ ಸ್ಟೋರಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಆದರೆ ಸ್ಮಿತ್ ಪತ್ನಿ ಡ್ಯಾನಿ ವಿಲ್ಲಿಸ್ ಕೂಡಾ ಆಸೀಸ್ ಮಾಜಿ ನಾಯಕನಿಗಿಂತ ಕಡಿಮೆಯೇನಲ್ಲ. ಹೌದು, ಮೈದಾನದಲ್ಲಿ ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವಂತೆ ಪತ್ನಿ ಡ್ಯಾನಿ ವಿಲ್ಲಿಸ್ ಕೂಡಾ ಕೋರ್ಟ್‌ನಲ್ಲಿ ವಿರೋಧ ಪಾರ್ಟಿಯವರ ಬಾಯಿ ಮುಚ್ಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಜೋಡಿಯ ಲವ್ ಸ್ಟೋರಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ....
ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮತ್ತು ಡ್ಯಾನಿ ವಿಲ್ಲಿಸ್ 2011ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.
ಸ್ಟೀವ್ ಸ್ಮಿತ್ ಅವರನ್ನು ಮೊದಲ ಬಾರಿಗೆ ಭೇಟಿಯಾಗುವಾಗ ಡ್ಯಾನಿ ವಿಲ್ಲಿಸ್ ಕಾನೂನು ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು.
ಹಲವು ವರ್ಷಗಳ ಪರಿಚಯದ ಬಳಿಕ ಸ್ಟೀವ್ ಸ್ಮಿತ್ 2017ರಲ್ಲಿ ಡ್ಯಾನಿ ವಿಲ್ಲಿಸ್ ಎದುರು ಪ್ರೇಮ ನಿವೇದನೆ ಮಾಡಿಕೊಂಡರು.
ಸ್ಟೀವ್ ಸ್ಮಿತ್ ನ್ಯೂಯಾರ್ಕ್ ನಗರದ ಟಾಪ್ ಆಫ್ ರಾಕ್‌ನಲ್ಲಿ ಪ್ರಫೋಸ್ ಮಾಡಿದರು. ಇದಾಗಿ ಕೆಲವೇ ತಿಂಗಳುಗಳ ಬಳಿಕ ಎಂಗೇಜ್‌ಮೆಂಟ್ ಮಾಡಿಕೊಂಡರು.
ಮರುವರ್ಷ ಅಂದರೆ 2018ರಲ್ಲಿ ಈ ಜೋಡಿ ವಿವಾಹ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದು, 2015ರ ಡಿಸೆಂಬರ್ 23ರಂದು 2014-15ನೇ ಸಾಲಿನಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಐಸಿಸಿ ವರ್ಷದ ಕ್ರಿಕೆಟಿಗ, ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಎನ್ನುವ ಪ್ರಶಸ್ತಿಗೆ ಭಾಜನರಾದರು.ಈ ಮೂಲಕ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಡ್ಯಾನಿ ವಿಲ್ಲಿಸ್ ಕೇವಲ ವಕೀಲೆ ಮಾತ್ರವಲ್ಲ. ಸ್ವಿಮ್ಮಿಂಗ್ ಹಾಗೂ ಪೋಲೋ ಆಟಗಾರ್ತಿ ಕೂಡಾ ಹೌದು.