ಸಾನಿಯಾಗೆ ಕೈಕೊಟ್ಟಿದ್ದೇಕೆ ಶೋಯೆಬ್ ಮಲಿಕ್..? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್
ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಕಳೆದ ಜನವರಿ 20ರಂದು ಸನಾ ಜಾವೆದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದರು. ಇವರ ಮದುವೆಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಕಳೆದ ಜನವರಿ 20ರಂದು ಸನಾ ಜಾವೆದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದರು. ಇವರ ಮದುವೆಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರ ಜತೆಗಿನ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದು ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಅವರ ಜತೆ ಹೊಸ ಇನಿಂಗ್ಸ್ ಆರಂಭಿಸಿದ್ದರು.
ಸಾನಿಯಾ ಮಿರ್ಜಾ ಅವರಿಂದ ಬೇರ್ಪಟ್ಟ ಬಳಿಕ ಸದ್ಯ ಶೋಯೆಬ್ ಮಲಿಕ್ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅನುಭವಿ ಆಲ್ರೌಂಡರ್ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಶೋಯೆಬ್ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಭಾನುವಾರ ಅವರ ಪಂದ್ಯ ಮುಲ್ತಾನ್ ಸುಲ್ತಾನ್ಸ್ ವಿರುದ್ದ ಆಡಿದ್ದರು.
Sana Javed
ಈ ಪಂದ್ಯದಲ್ಲಿ ಚೆನ್ನಾಗಿ ಆಡುವಂತೆ ಮಾಡಲು ಮೈದಾನದಲ್ಲಿ ನಿಂತು ತನ್ನ ಪತಿಗೆ ಸಪೋರ್ಟ್ ಮಾಡಲು ಸನಾ ಜಾವೆದ್ ಮೈದಾನದಕ್ಕೆ ಬಂದಿದ್ದರು. ಆಕೆಯ ಬ್ಯೂಟಿ ನೋಡಿಯೇ ಸಾನಿಯಾಗೆ ಶೋಯೆಬ್ ಕೈಕೊಟ್ಟಿದ್ದು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಮುಲ್ತಾನ್ ಸುಲ್ತಾನ್ಸ್ ಎದುರಿನ ಪಂದ್ಯದಲ್ಲಿ ತನ್ನ ನೂತನ ಪತ್ನಿಯ ಎದುರು ಶೋಯೆಬ್ ಮಲಿಕ್ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ 2 ಓವರ್ ಮಾಡಿ 10 ರನ್ ನೀಡಿದರೆ, ಬ್ಯಾಟಿಂಗ್‌ನಲ್ಲಿ ಕೇವಲ 35 ಎಸೆತಗಳಲ್ಲಿ 53 ರನ್ ಚಚ್ಚಿದರು.
ಇನ್ನು ಸನಾ ಜಾವೆದ್ ಪಿಎಸ್‌ಎಲ್ ಟೂರ್ನಿ ನೋಡಲು ಬಂದಿದ್ದು ಸಾನಿಯಾ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಹೀಗಾಗಿ ಸನಾಗೆ ಮುಜುಗರವನ್ನುಂಟು ಮಾಡಲು ಸನಾಗೆ ಕೇಳುವಂತೆ ಸಾನಿಯಾ, ಸಾನಿಯಾ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.