Cricket; ದೇಶ ಪ್ರತಿನಿಧಿಸುವತ್ತ ದಿಗ್ಗಜರ ಪುತ್ರರು, ಸಮಿತ್, ಅರ್ಜುನ್, ಆರ್ಯನ್!
ನವದೆಹಲಿ(ನ 19) ಮೂವರು ದಿಗ್ಗಜ ಕ್ರಿಕೆಟಿಗರ (Cricket)ಮಕ್ಕಳು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲು ವೇದಿಕೆ ಸಿದ್ಧವಾಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(Sachin Tendulkar), ಭಾರತದ ಕೋಚ್, ಗೋಡೆ ರಾಹುಲ್ ದ್ರಾವಿಡ್(Rahul Dravid), ಆಲ್ ರೌಂಡರ್ ಸಂಜಯ್ ಬಂಗಾರ್(Sanjay Bangar) ಪುತ್ರರು ಅವರ ಕಾಲವನ್ನು ಮತ್ತೆ ನೆನಪಿಸಲು ಮುಂದೆ ಬರುತ್ತಿದ್ದಾರೆ. ಸಮಿತ್ ದ್ರಾವಿಡ್, ಅರ್ಜುನ್ ತೆಂಡೂಲ್ಕರ್ ಮತ್ತು ಆರ್ಯನ್ ಬಂಗಾರ್ ಪದಾರ್ಪಣೆಗೆ ವೇದಿಕೆ ಸಿದ್ಧವಾಗಿದೆ.

ಆರ್ಯನ್ ತಂದೆ ಅವರಂತೆ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2019 ರಿಂದಲೇ ಅತ್ಯುತ್ತಮ ಆಟ ಆಡಿಕೊಂಡು ಬಂದಿದ್ದಾರೆ. ಪಾಂಡಿಚೇರಿ ಪರವಾಗಿ ಹತ್ತೊಂಭತ್ತು ವರ್ಷದ ಒಳಗಿನವರ ತಂಡದಲ್ಲಿ ಆಕಡಿದ್ದಾರೆ. ಐದು ಪಂದ್ಯಗಳಿಂದ ಮೂನ್ನೂರು ರನ್ ಗಳಿಸಿದ್ದು 150 ಅವರ ಹೈಯಸ್ಟ್ ಸ್ಕೋರ್. ಇದಲ್ಲದೆ ಇಪ್ಪತ್ತು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಬಂಗಾರದ ಪುತ್ರ ಆರ್ಯನ್; ರೈಲ್ವೇಸ್ ಪರ ಆಡಿ ಹೆಸರು ಗಳಿಸಿ ನಂತರ ಭಾರತದ ಪರ ಆಡಿದ್ದವರು ಸಂಜಯ್ ಬಂಗಾರ್. 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಭಾರತದ ಪರ ಆಡಿದ್ದರು.. ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಭಾರತದ ಯಶಸ್ಸಿಗೆ ಕಾರಣವಾಗಿದ್ದರು. ಇದೀಗ ಸಂಜಯ್ ಬಂಗಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯ ಕೋಚ್ ಆಗಿ ನೇಮಕ ಗೊಂಡಿದ್ದಾರೆ.
ದೇವರ ಪುತ್ರ ಅರ್ಜುನ್: ದೇಶಿಯ ಕ್ರಿಕೆಟ್ ನಲ್ಲಿ ಸದ್ದು ಮಾಡಿರುವ ಅರ್ಜುನ್ ತೆಂಡೂಲ್ಕರ್, ಕಳೆದ ಸಾರಿಯ ಐಪಿಎಲ್ ನಲ್ಲಿ ಅರ್ಜುನ್ ಅವರಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತ್ತು. 20 ಲಕ್ಷ ರೂ. ನೀಡಿ ಅವರನ್ನು ಖರೀದಿಸಲಾಗಿತ್ತು. ಆದರೆ ಇವರು ತಂದೆಯಂತಲ್ಲ. ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದು ಅಗತ್ಯವಿದ್ದಾಗ ಬ್ಯಾಟ್ ಬೀಸಬಲ್ಲರು.
ಮುಂಬೈ ಪರವಾಗಿ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಆಟವಾಡುತ್ತಿದ್ದಾರೆ. ಕಳೆದ ಐಪಿಎಲ್ ಪಂದ್ಯಾವಳಿಯ ಅರ್ಧದಲ್ಲಿ ಗಾಯಗೊಂಡ ಪರಿಣಾಮ ಅರ್ಜುನ್ ಜಾಗಕ್ಕೆ ಮುಂಬೈ ಇಂಡಿಯನ್ಸ್ ತಂಡ ಸಮರ್ ಜೀತ್ ಸಿಂಗ್ ಅವರನ್ನು ತೆಗೆದುಕೊಂಡಿತ್ತು.
ಮಲ್ಯ ಅದಿತಿ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಶ್ರೀ ಕುಮಾರನ್ ಶಾಲೆ ನಡುವೆ ನಡೆದ ಪಂದ್ಯಾವಳಿಯಲ್ಲಿ ಈ ಆಟ ಬಂದಿತ್ತು. ಅದಾದ ನಂತರ ಎರಡು ತಿಂಗಳ ಹಿಂದೆಯೂ ಒಂದು ಡಬಲ್ ಸೆಂಚುರಿ ಬಾರಿಸಿದ್ದಾರೆ.
ಗೋಡೆ ಪುತ್ರ ಸಮಿತ್; ಭಾರತ ತಂಡವನ್ನು ಮುನ್ನಡೆಸಿದ್ದ ಅನುಭವ ಹೊಂದಿರುವ ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ಸಮಿತ್ ದ್ರಾವಿಡ್ ಅಂಡರ್ 14 ವಿಭಾಗದಲ್ಲಿ ಆಕರ್ಷಕ ಡಬಲ್ ಸೆಂಚುರಿ ದಾಖಲಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.