MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Sports
  • Cricket
  • Round Up 2021: ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಟಾಪ್ 5 ಕ್ರಿಕೆಟಿಗರಿವರು..!

Round Up 2021: ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಟಾಪ್ 5 ಕ್ರಿಕೆಟಿಗರಿವರು..!

ಬೆಂಗಳೂರು: ಯಾವುದೇ ಕ್ರಿಕೆಟ್ ಆಟಗಾರನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಅತ್ಯಂತ ಮಹತ್ವದ ಗುರಿಯಾಗಿರುತ್ತದೆ. ಕೆಲವು ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಾರಾ ಆಟಗಾರರಾಗಿ ಬೆಳೆದು ನಿಲ್ಲುತ್ತಾರೆ. ಒಂದು ಹಂತದಲ್ಲಿ ಆ ಎಲ್ಲಾ ಆಟಗಾರರು ನಿವೃತ್ತಿ ಎನ್ನುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ (Retirement) ಘೋಷಿಸಿದ ಟಾಪ್ ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. 

2 Min read
Author : Suvarna News
Published : Dec 27 2021, 02:09 PM IST
Share this Photo Gallery
  • FB
  • TW
  • Linkdin
  • Whatsapp
110
1. ಉಪುಲ್ ತರಂಗಾ

1. ಉಪುಲ್ ತರಂಗಾ

ಲಂಕಾ ಎಡಗೈ ಆರಂಭಿಕ ಬ್ಯಾಟರ್‌ ಉಪುಲ್ ತರಂಗಾ 2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಲಂಕಾ ಪರ 31 ಟೆಸ್ಟ್‌, 235 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನಾಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 235 ಪಂದ್ಯಗಳಲ್ಲಿ 15 ಶತಕ ಹಾಗೂ 37 ಅರ್ಧಶತಕ ಸಹಿತ 6,951 ರನ್‌ ಬಾರಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಇನ್ನು 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಫೈನಲ್‌ಗೇರುವಲ್ಲಿ ಉಪುಲ್ ತರಂಗಾ (Upul Tharanga) ಮಹತ್ವದ ಪಾತ್ರ ವಹಿಸಿದ್ದರು. ತರಂಗಾ 2016ರಿಂದ 2018ರ ಅವಧಿಯವರೆಗೆ ಲಂಕಾ ತಂಡದ ನಾಯಕರಾಗಿದ್ದರು. ಅಂತಿಮವಾಗಿ 2021ರ ಫೆಬ್ರವರಿ 23ರಂದು ಉಪುಲ್‌ ತರಂಗಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

310
2. ಡೇಲ್ ಸ್ಟೇನ್‌

2. ಡೇಲ್ ಸ್ಟೇನ್‌

ದಕ್ಷಿಣ ಆಫ್ರಿಕಾದ (South African Pacer) ಮಾರಕ ವೇಗಿ ಕೂಡಾ 2021ರಲ್ಲಿ ವಿದಾಯ ಘೋಷಿಸುವ ಮೂಲಕ ತಮ್ಮ 16 ವರ್ಷಗಳ ಸುದೀರ್ಘ ಕ್ರಿಕೆಟ್‌ ಬದುಕಿಗೆ ತೆರೆ ಎಳೆದಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸ್ಟೇನ್‌, ಹರಿಣಗಳ ತಂಡದ ಪರ 93 ಟೆಸ್ಟ್, 125 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದರು.

410

ಡೇಲ್‌ ಸ್ಟೇನ್(Dale Steyn) ಹವಾ ಹೇಗಿತ್ತು ಎಂದರೆ, 2008ರಿಂದ 2014ರವರೆಗೆ 263 ವಾರಗಳ ಕಾಲ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲಿಂಗ್‌ ವಿಭಾಗದಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತನ್ನು ಆಳಿದ್ದರು. ಡೇಲ್‌ ಸ್ಟೇನ್‌ 439 ವಿಕೆಟ್ ಕಬಳಿಸಿದ್ದರು. ಅಂತಿಮವಾಗಿ ಡೇಲ್‌ ಸ್ಟೇನ್‌ ಆಗಸ್ಟ್ 31ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

510
3. ಡ್ವೇನ್ ಬ್ರಾವೋ

3. ಡ್ವೇನ್ ಬ್ರಾವೋ

ಸೀಮಿತ ಓವರ್‌ಗಳ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಲ್ರೌಂಡರ್‌ ಡ್ವೇನ್‌ ಬ್ರಾವೋ(Dwayne Bravo), ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು ನೀರಸ ಪ್ರದರ್ಶನ ತೋರುವ ಗ್ರೂಪ್ ಹಂತದಲ್ಲಿ ಹೊರಬೀಳುತ್ತಿದ್ದಂತೆ ಬ್ರಾವೋ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

610

ಡ್ವೇನ್ ಬ್ರಾವೋ, ವೆಸ್ಟ್ ಇಂಡೀಸ್‌ ಪರ 40 ಟೆಸ್ಟ್‌, 164 ಏಕದಿನ ಹಾಗೂ 91 ಟಿ20 ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದ ಬ್ರಾವೋ ನವೆಂಬರ್ 06ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

710
4. ತಿಸಾರ ಪೆರೆರಾ

4. ತಿಸಾರ ಪೆರೆರಾ

ಲಂಕಾದ ಸ್ಟಾರ್ ಆಲ್ರೌಂಡರ್‌ ತಿಸಾರ ಪೆರೆರಾ(Thisara Perera) 2009ರ ಡಿಸೆಂಬರ್‌ನಲ್ಲಿ ಭಾರತ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಲಂಕಾ ಸೀಮಿತ ಓವರ್‌ಗಳ ತಂಡದಲ್ಲಿ ದಶಕಗಳ ಪೆರೆರಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.

810

ಲಂಕಾ ಪರ ಪರೆರಾ, 6 ಟೆಸ್ಟ್‌, 166 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನಾಡಿ 175 ಏಕದಿನ ವಿಕೆಟ್ ಹಾಗೂ 51 ಟಿ20 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 2,338  ಹಾಗೂ ಟಿ20 ಕ್ರಿಕೆಟ್‌ನಲ್ಲಿ 1,204 ರನ್‌ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದ ಪೆರೆರಾ ಮೇ.03ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 

910
5. ಹರ್ಭಜನ್ ಸಿಂಗ್

5. ಹರ್ಭಜನ್ ಸಿಂಗ್

ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಹರ್ಭಜನ್ ಸಿಂಗ್(Harbhajan Singh) 1998ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2001ರಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಭಜ್ಜಿ 32 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಕೀರ್ತಿಗೂ ಭಾಜನರಾಗಿದ್ದರು.
 

1010

ಹರ್ಭಜನ್ ಸಿಂಗ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಕೂಡಾ ಹೌದು. ಇನ್ನು ಭಾರತ ಪರ 103 ಟೆಸ್ಟ್‌ಗಳಿಂದ 417 ವಿಕೆಟ್‌, 236 ಏಕದಿನ ಪಂದ್ಯಗಳಿಂದ 269 ವಿಕೆಟ್ ಹಾಗೂ 28 ಟಿ20 ಪಂದ್ಯಗಳಿಂದ 25 ವಿಕೆಟ್ ಕಬಳಿಸಿದ್ದಾರೆ. ಭಜ್ಜಿ ಡಿಸೆಂಬರ್ 24ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಕ್ರಿಕೆಟ್

Latest Videos
Recommended Stories
Recommended image1
ಗಾಲೆಯಲ್ಲಿ ಲಂಕಾ ದಹನ; ಮಾನವ್ ಸ್ಪಿನ್ ಮೋಡಿಗೆ ಶ್ರೀಲಂಕಾ ಧೂಳೀಪಟ, ಗೆದ್ದು ಬೀಗಿದ ಭಾರತ
Recommended image2
4ನೇ ದಿನದಾಟದಲ್ಲಿ ತಾನು ಮಾಡಿದ ತಪ್ಪನ್ನು ಐದನೇ ದಿನದಾಟದಲ್ಲಿ ತಿದ್ದಿಕೊಂಡ ಜಡೇಜಾ! ಕೊನೆಗೂ ತಣ್ಣಗಾದ ಗೌತಮ್ ಗಂಭೀರ್ ಕೋಪ
Recommended image3
ಗಾಲೆ ಟೆಸ್ಟ್‌: ಶುಭ್‌ಮನ್ ಗಿಲ್ ದಾಖಲೆ ನುಚ್ಚುನೂರು, WTC ಯಲ್ಲಿ ಯಾವ ಭಾರತೀಯನೂ ಮಾಡಿರದ ಅಪರೂಪದ ದಾಖಲೆ ನಿರ್ಮಿಸಿದ ರಿಷಭ್ ಪಂತ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved