ಸ್ಕೂಲ್‌ ಫ್ರೆಂಡ್‌- ನಟಿ : ಟೀಮ್‌ ಇಂಡಿಯಾದ ಹಿಟ್‌ ಮ್ಯಾನ್‌ ಲವ್‌ ಲೈಫ್‌!

First Published Feb 28, 2021, 5:00 PM IST

ಟೀಮ್‌ ಇಂಡಿಯಾದ ಬ್ಯಾಟ್ಸ್‌ಮ್ಯಾನ್‌ ರೋಹಿತ್‌ಶರ್ಮ ಹಿಟ್‌ಮ್ಯಾನ್‌ ಎಂದೇ ಫೇಮಸ್‌. ಭಾರತ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಮತ್ತೊಮ್ಮೆ ತಮ್ಮ ಬ್ಯಾಟ್ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಮೂರನೇ ಟೆಸ್ಟ್‌ನಲ್ಲಿ ಒಂದು ಅರ್ಧ ಶತಕದ ಜೊತೆ ಎರಡೂ ಇನಿಂಗ್ಸ್‌ನಲ್ಲೂ  ನಾಟೌಟ್‌ ಆಗಿಯೇ ಉಳಿದರು. ಇದಕ್ಕೂ ಮೊದಲು ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ 161 ರನ್ ಗಳಿಸಿದ್ದರು. ರೋಹಿತ್ ಅವರ ಆಟದ ಜೊತೆ  ಅವರ ವೈಯಕ್ತಿಕ ಜೀವನವೂ ಸಾಕಷ್ಟು ಸದ್ದು ಮಾಡಿದೆ. ರಿತಿಕಾರನ್ನು ಮದುವೆಯಾಗುವ ಮೊದಲು ರೋಹಿತ್ ಹೆಸರು ಮೂವರು ಹುಡುಗಿಯರೊಂದಿಗೆ ಲಿಂಕ್‌ ಆಗಿತ್ತು. ರೋಹಿತ್ ಶರ್ಮ ಈ  ಹುಡುಗಿಯರ ಜೊತೆ ಅಫೇರ್ ಹೊಂದಿದ್ದಾರೆಂದು ವದಂತಿಗಳಿವೆ. ವಿವರ ಇಲ್ಲಿದೆ.