ಉತ್ತರಖಂಡ ದುರಂತ; ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಿದ ರಿಷಬ್ ಪಂತ್!
ಉತ್ತರಖಂಡ ದುರಂತ ನಡೆದು ಇದೀಗ 2ನೇ ದಿನ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ. ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕಾರ್ಯಚರಣೆಗಳು ಮುಂದುವರಿದೆ. ಇತ್ತ 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಪಂದ್ಯದ ಸಂಭಾವನೆಯನ್ನು ರಕ್ಷಣಾ ಕಾರ್ಯಕ್ಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಬ್ ಪಂತ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದೇ ವೇಳೆ ಉತ್ತರಖಂಡ ದುರಂತಕ್ಕೆ ಪಂತ್ ಹೃದಯ ಕರಗಿದೆ.
ಉತ್ತರಖಂಡ ದುರಂತದಲ್ಲಿ ಕಣ್ಮರೆಯಾದವರ ಹಾಗೂ ಸಿಲುಕಿಕೊಂಡವರಿಗಾಗಿ ಕಾರ್ಯಚರಣೆ ಮುಂದುವರಿದೆದೆ. ಈ ಕಾರ್ಯಚರಣೆಗೆ ರಿಷಬ್ ಪಂತ್ ತಮ್ಮ ಪಂದ್ಯದ ಸಂಭಾವನೆಯನ್ನು ನೀಡಿದ್ದಾರೆ.
ಈ ಕುರಿತು ರಿಷಬ್ ಪಂತ್ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಉತ್ತರಖಂಡ ದುರಂತ ತೀವ್ರ ನೋವು ತಂದಿದೆ. ರಕ್ಷಣಾ ಕಾರ್ಯಕ್ಕೆ ನನ್ನ ಪಂದ್ಯದ ಸಂಭಾವನೆಯನ್ನು ನೀಡುತ್ತಿದ್ದೇನೆ. ಈ ಮೂಲಕ ನಾನು ಎಲ್ಲರಲನ್ನೂ ನೆರವು ನೀಡುವಂತೆ ಮನವಿ ಮಾಡುತ್ತೇನೆ ಎಂದು ಪಂತ್ ಹೇಳಿದ್ದಾರೆ.
ರಿಷಬ್ ಪಂತ್ ಚೆನ್ನೈ ಟೆಸ್ಟ್ ಪಂದ್ಯದ ಮೊದಲ ಪಂದ್ಯದಲ್ಲಿ 91 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ ಟೀಂ ಇಂಡಿಯಾವನ್ನು ಅಲ್ಪಮೊತ್ತದಿಂದ ಪಾರು ಮಾಡಿದ್ದರು.
ಪಂದ್ಯದ ನಡುವೆ ಉತ್ತರಖಂಡ ದುರಂತಕ್ಕ ಮರುಗಿದ ಪಂತ್, ನೆರವಿನ ಹಸ್ತ ಚಾಚಿದ್ದಾರೆ. ಪ್ರವಾಹ ಹಾಗೂ ಹಿಮಸ್ಫೋಟದಿಂದ 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ಸತತ 50 ಗಂಟೆಗಳಿಂದ ನಿರಂತರ ಕಾರ್ಯಚರಣೆ ನಡೆಯುತ್ತಿದೆ. 19 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ರಕ್ಷಣಾ ಪಡೆ ತಯಾರಿಗಿದೆ.
ಸ್ಥಳಕ್ಕೆ ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಭೇಟಿ ನೀಡಿದ್ದಾರೆ. ಕಾರ್ಯಚರಣೆಗೆ ಹೆಚ್ಚಿನ ನರೆವು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಉತ್ತರಖಂಡ ಸಂಸದರ ಜೊತೆ ಸಭೆ ನಡೆಸಿದ್ದಾರೆ.