MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು

ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು

ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. 

2 Min read
Author : Chethan Kumar
Published : Jun 01 2026, 10:42 PM IST
Share this Photo Gallery
  • FB
  • TW
  • Linkdin
  • Whatsapp
16
ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಶಾಕ್
Image Credit : stockPhoto

ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಶಾಕ್

ಐಪಿಎಲ್ 2026 ಟೂರ್ನಿಯಲ್ಲಿ ಆರ್‌ಸಿಬಿ ಸತತ 2ನೇ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಅದ್ಭುತ ಹೋರಾಟ ನೀಡಿದ ಆರ್‌ಸಿಬಿ ತಂಡ ಗುಜರಾತ್ ಟೈಟಾನ್ಸ್ ಮಣಿಸಿ ಚಾಂಪಿಯನ್ ಆಗಿದೆ. ಆರ್‌ಸಿಬಿ ಅಭಿಮಾನಿಗಳು, ಆಟಗಾರರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಂಪೈರ್‌ನತ್ತ ಐಸ್ ಬ್ಯಾಗ್ ಎಸೆದ ಟಿಮ್ ಡೇವಿಡ್
Image Credit : X

ಅಂಪೈರ್‌ನತ್ತ ಐಸ್ ಬ್ಯಾಗ್ ಎಸೆದ ಟಿಮ್ ಡೇವಿಡ್

ಆರ್‌ಸಿಬಿ ಫೈನಲ್ ಪಂದ್ಯದ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರವೂ ಪ್ರಮುಖವಾಗಿದೆ. 17 ಎಸೆತದಲ್ಲಿ 24 ರನ್ ಕೊಡುಗೆ ನೀಡಿದ್ದರು. ಆದರೆ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ವೇಳೆ ಅಂಪೈರ್ ನಿತಿನ್ ಮೆನೊನ್ ನೇರವಾಗಿ ಐಸ್ ಬ್ಯಾಗ್ ಎಸೆದು ಆಕ್ರೋಶ ಹೊರಹಾಕಿದ್ದರು. ನಿಯಮ ಉಲ್ಲಂಘಿಸಿದ ಟಿಮ್ ಡೇವಿಡ್‌ಗೆ ಅಮಾನತು ಶಿಕ್ಷೆ ನೀಡಲಾಗಿದೆ.

Related Articles

Related image1
ಆರ್‌ಸಿಬಿ ಗೆಲುವಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ, ಕೇಕ್ ಕತ್ತರಿಸಿ ಡ್ಯಾನ್ಸ್
Related image2
ಖುಷಿಯಲ್ಲಿ ಅನುಷ್ಕಾಗೆ ಹಗ್ ಮಾಡಿದ ದಿನೇಶ್ ಕಾರ್ತಿಕ್, ಹೊಟ್ಟೆ ಉರಿದುಕೊಂಡ್ರಾ ಕೊಹ್ಲಿ?
36
10ನೇ ಓವರ್‌ನಲ್ಲಿ ಘಟನೆ
Image Credit : Jiohotstar

10ನೇ ಓವರ್‌ನಲ್ಲಿ ಘಟನೆ

ಗುಜರಾತ್ ಬ್ಯಾಟಿಂಗ್ ವೇಳೆ 10 ನೇ ಓವರ್‌ನಲ್ಲಿ ವಿಕೆಟ್ ಪತನಗೊಂಡಿತ್ತು. ಈ ವೇಳೆ ಸಂಭ್ರಮಾಚರಣೆ ಜೊತೆ ಆಕ್ರೋಶ ಹೊರಹಾಕಿದ ಟಿಮ್ ಡೇವಿಡ್ ತನ್ನಲ್ಲಿದ್ದ ಐಸ್ ಬ್ಯಾಗನ್ನು ಅಂಪೈರ್ ನಿತಿನ್ ಮೆನೊನ್‌ನತ್ತ ಎಸೆದಿದ್ದಾರೆ. ಇದು ಐಪಿಎಲ್ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.9 ನಿಯಮದ ಉಲ್ಲಂಘನೆಯಾಗಿದೆ. ಎರಡು ಡಿಮೆರಿಟ್ ಪಾಯಿಂಟ್ಸ್ ಪಡೆದ ಟಿಮ್ ಡೇವಿಡ್‌ಗೆ ಐಪಿಎಲ್ ಟೂರ್ನಿಯ ಒಂದು ಪಂದ್ಯದಿಂದ ಅಮಾನತು ಶಿಕ್ಷೆ ನೀಡಲಾಗಿದೆ.

46
ಪಂದ್ಯ ಶೇಕಡಾ 50ರಷ್ಟು ದಂಡ
Image Credit : X/RCBTweets

ಪಂದ್ಯ ಶೇಕಡಾ 50ರಷ್ಟು ದಂಡ

ಟಿಮ್ ಡೇವಿಡ್ ಈ ಟೂರ್ನಿಯಲ್ಲಿ ಹಲವು ಬಾರಿ ಐಪಿಎಲ್ ಕೋಡ್ ಆಫ್ ಕಂಡಕ್ಟ್ ನಿಯಮ ಉಲ್ಲಂಘಿಸಿದ್ದಾರೆ. 20ನೇ ಪಂದ್ಯ, 54ನೇ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದಾರೆ. ಫೈನಲ್ ಪಂದ್ಯದ ಉಲ್ಲಂಘನೆ ಸೇರಿ ಒಟ್ಟು 5 ಡಿಮೇರಿಟ್ ಪಾಯಿಂಟ್ಸ್ ಪಡೆದಿದ್ದಾರೆ. ಐದು ಡಿಮೆರಿಟ್ಸ್ ಪಡೆದ ಆಟಗಾರನಿಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗುತ್ತದೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.

56
ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್
Image Credit : X/RCBTweets

ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್

ತಾವು ಮಾಡಿದ ತಪ್ಪನ್ನು ಟಿಮ್ ಡೇವಿಡ್ ಒಪ್ಪಿಕೊಂಡಿದ್ದಾರೆ. ಬಳಿಕ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ದಂಡ ಹಾಗೂ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಸಿಂಗಾಪುರ ಮೂಲದ ಟಿಮ್ ಡೇವಿಡ್, ಆಸ್ಟ್ರೇಲಿಯಾ ತಂಡದ ಪರ ಆಡುತ್ತಿದ್ದಾರೆ. ಇದೀಗ ಆರ್‌ಸಿಬಿ ಮೂಲಕ ಭಾರತದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.

66
ಮುಂದಿನ ಟೂರ್ನಿಯಲ್ಲಿ ಒಂದು ಪಂದ್ಯದಿಂದ ಟಿಮ್ ಡೇವಿಡ್ ಹೊರಕ್ಕೆ
Image Credit : Getty

ಮುಂದಿನ ಟೂರ್ನಿಯಲ್ಲಿ ಒಂದು ಪಂದ್ಯದಿಂದ ಟಿಮ್ ಡೇವಿಡ್ ಹೊರಕ್ಕೆ

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಟಿಮ್ ಡೇವಿಡ್ ಶಿಕ್ಷೆ ಕಾರಣದಿಂದ ಒಂದು ಪಂದ್ಯದಿಂದ ಹೊರಗುಳಿಯಬೇಕಿದೆ. 2027ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅನಿವಾರ್ಯವಾಗಿ ಮಿಡ್ಲ್ ಆರ್ಡರ್‌ನಲ್ಲಿ ಬದಲಾವಣೆ ಮಾಡಬೇಕಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
ರಾಜಸ್ಥಾನ ರಾಯಲ್ಸ್ ಡಿವೋರ್ಸ್ ಕ್ರಿಕೆಟಿಗ ನನಗೆ ಮೆಸೇಜ್ ಮಾಡುತ್ತಿದ್ದ, ಬಾಂಬ್ ಸಿಡಿಸಿದ ನಟಿ ನೆಹಾಲ್
Recommended image2
ಆರ್‌ಸಿಬಿ ಗೆಲುವಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ, ಕೇಕ್ ಕತ್ತರಿಸಿ ಡ್ಯಾನ್ಸ್
Recommended image3
ಕಾವ್ಯ ಮಾರನ್ ಸೈಡ್‌ಲೈನ್, IPL ಹೊಸ ಕ್ರಶ್ 'ಅನನ್ಯಾ ಬಿರ್ಲಾ'! ₹16,600 ಕೋಟಿ RCB ಮಾಲೀಕನ ಮಗಳ ಹವಾ ಹೇಗಿದೆ ಗೊತ್ತಾ?
Related Stories
Recommended image1
ಆರ್‌ಸಿಬಿ ಗೆಲುವಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ, ಕೇಕ್ ಕತ್ತರಿಸಿ ಡ್ಯಾನ್ಸ್
Recommended image2
ಖುಷಿಯಲ್ಲಿ ಅನುಷ್ಕಾಗೆ ಹಗ್ ಮಾಡಿದ ದಿನೇಶ್ ಕಾರ್ತಿಕ್, ಹೊಟ್ಟೆ ಉರಿದುಕೊಂಡ್ರಾ ಕೊಹ್ಲಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved